‘ಸಿದ್ದರಾಮಯ್ಯನವರಿಗೆ ಪಶ್ಚಾತ್ತಾಪವಾಗಿದ್ದರೆ ಸ್ವಾಗತ’-ಬಿಎಸ್‌ವೈ

Banglore news:

ಧರ್ಮ ವಿಭಜನೆ ಮಾಡಲು ಮುಂದಾಗಿರುವುದು ತಪ್ಪು ಎಂದು ಸಿದ್ದರಾಮಯ್ಯನವರಿಗೆ ಮನಃಪರಿವರ್ತನೆಯಾಗಿದ್ದರೆ ನಾನದನ್ನು ಸ್ವಾಗತಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಸಿದ್ದರಾಮಯ್ಯ ಮತ್ತು ರಂಭಾಪುರಿ ಶ್ರೀಗಳ ನಡುವೆ ನಡೆದ ಮಾತುಕತೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶ್ರೀಗಳು ಮತ್ತು ಸಿದ್ದರಾಮಯ್ಯನವರ ನಡುವೆ ಏನು ಮಾತುಕತೆ ನಡೆದಿದೆ ಎಂಬುದು ನಮಗ್ಯಾರಿಗೂ ಗೊತ್ತಿಲ್ಲ. ಆದರೆ ಒಂದು ವೇಳೆ ವೀರಶೈವ ಲಿಂಗಾಯಿತ ಧರ್ಮ ಪ್ರತ್ಯೇಕಿಸಲು ತಾನು ಮುಂದಾಗಿರುವುದು ತಪ್ಪು ಎಂದು ಸಿದ್ದರಾಮಯ್ಯನವರಿಗೆ ತಪ್ಪಿನ ಅರಿವಾಗಿದ್ದರೆ ಸಂತೋಷ. ಇದಕ್ಕಿಂತ ಹೆಚ್ಚು ನಾನೇನು ಹೇಳಲಾರೆ ಎಂದರು.

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಶುಕ್ರವಾರ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು ಶ್ರೀಗಳನ್ನು ಭೇಟಿಯಾಗಿದ್ದರು. ಈ ವೇಳೆ ಶ್ರೀಗಳೊಂದಿಗೆ ಮಾತುಕತೆ ನಡೆಸುವ ವೇಳೆ ನಾನು ಧರ್ಮ ಒಡೆಯಲು ಮುಂದಾಗಿರಲಿಲ್ಲ, ನನ್ನನ್ನು ಕೆಲವರು ದಾರಿ ತಪ್ಪಿಸಿದ್ದರು ಎಂದು ಹೇಳಿದ್ದರು ಎನ್ನಲಾಗಿದೆ.

ಕೊಡಗು: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಆರೋಪಿಯ ಬಂಧನ

ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳ ಸುಧಾರಣೆಗೆ 250 ಕೋಟಿ ರೂ ಮಂಜೂರಾತಿಗೆ ತೀರ್ಮಾನ- CM ಬೊಮ್ಮಾಯಿ

About The Author