BREAKING NEWS: ಸಿಎಂ ಬೊಮ್ಮಾಯಿ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠ ಹೃದಯಾಘಾತದಿಂದ ನಿಧನ

ಬೆಂಗಳೂರು: ಇಂದು ಮುಂಜಾನೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಂತ ಸಂದರ್ಭದಲ್ಲಿ ದಿಢೀರ್ ಹೃದಯಾಘಾತದಿಂದ ಕುಸಿದು ಬಿದ್ದಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠ ಅವರು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ನಂತ್ರ, ಅವರ ಸಿಎಂ ಮಾಧ್ಯಮ ಸಂಯೋಜಕರನ್ನಾಗಿ ಹಿರಿಯ ಪತ್ರಕರ್ತ ಗುರುಲಿಂಗಸ್ವಾಮಿ ಹೊಳಿಮಠ ಅವರನ್ನು ನೇಮಿಸಲಾಗಿತ್ತು. ಈ ಹಿಂದೆ ವಿಜಯವಾಣಿ, ಟಿವಿ5 ಕನ್ನಡ ಸೇರಿದಂತೆ ಅನೇಕ ಮಾಧ್ಯಮಗಳಲ್ಲಿ ಕೆಲಸ ಮಾಡಿದಂತ ಅನುಭವ ಹೊಂದಿದ್ದರು. ಸಿಎಂ ಮಾಧ್ಯಮ ಸಂಯೋಜಕರಾಗಿ ಗುರುಲಿಂಗಸ್ವಾಮಿ ಹೊಳಿಮಠ ನೇಮಕಗೊಂಡ ನಂತ್ರ, ಮುಖ್ಯಮಂತ್ರಿಗಳ ಕಾರ್ಯಕ್ರಮದ ಕ್ಷಣ ಕ್ಷಣದ ಅಪ್ ಡೇಟ್ ಲಭ್ಯವಾಗುವಂತೆ ಆಗಿತ್ತು.

ಕೆಲ ದಿನಗಳಿಂದ ಜಿಮ್ ಗೆ ವರ್ಕೌಟ್ ಗಾಗಿ ಹೋಗೋದಕ್ಕೆ ಶುರುಮಾಡಿದ್ದಂತ ಗುರುಲಿಂಗಸ್ವಾಮಿ ಹೊಳಿಮಠ ಅವರು, ಇಂದು ಎಂದಿನಂತೆ ಬೆಳಿಗ್ಗೆ ಜಿಮ್ ಗೆ ತೆರಳಿ ವರ್ಕೌಟ್ ನಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ದಿಢೀರ್ ಹೃದಯಾಘಾತದಿಂದ ಜಿಮ್ ನಲ್ಲಿ ಕುಸಿದು ಬಿದ್ದಿದ್ದರು. ಅವರನ್ನು ಕೂಡಲೇ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿರುವಂತ ಆಸ್ಪತ್ರೆಯೊಂದಕ್ಕೆ ಸಾಗಿಸಿ ಚಿಕಿತ್ಸೆಗೆ ದಾಖಿಸಲಾಗಿತ್ತು. ಆದ್ರೇ.. ತೀವ್ರ ಹೃದಯಾಘಾತದಿಂದ ಸಿಎಂ ಬಸವರಾಜ ಬೊಮ್ಮಾಯಿಯವರ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಅವರ ನಿಧನಕ್ಕೆ ನಿಮ್ಮ ಕರ್ನಾಟಕ ಟಿವಿ ಸಂಸ್ಥೆಯು ಸಂತಾಪ ಸೂಚಿಸಿದೆ.

About The Author