ಹುಬ್ಬಳ್ಳಿ: ಅಪ್ಪು ರೂಪಕದ ಗಣೇಶ ಮೂರ್ತಿಗೆ ಭಾರೀ ಬೇಡಿಕೆ…!

Hubballi News xpress:

ಹುಬ್ಬಳ್ಳಿ : ಇನ್ನೇನು  ಗಣೇಶೋತ್ಸವಕ್ಕೆ  ಕೆಲವು ದಿನಗಳು ಮಾತ್ರ ಬಾಕಿ ಇದೆ.ಇದೀಗ ದೇಶದೆಲ್ಲೆಡೆ ಗಣೇಶೋತ್ಸವಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಕಳೆದ ಎರಡು ವರ್ಷ ಕಳೆಗುಂದಿದ್ದ ಗಣೇಶ ಉತ್ಸವ ಈ ಬಾರಿ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಈ ಬಾರಿಯ ಗಣೇಶೋತ್ಸವಕ್ಕೆ ಅಪ್ಪುವನ್ನು ಅಭಿಮಾನಿಗಳು ಗಣೇಶನ ರೂಪದಲ್ಲಿ ನೋಡಲು ಇಚ್ಛಿಸುತ್ತಿದ್ದಾರೆ.

ಹೌದು ಹುಬ್ಬಳ್ಳಿಯ  ನಗರದೆಲ್ಲೆಡೆ ಅದ್ಧೂರಿ ಗಣೇಶ ಉತ್ಸವಕ್ಕೆ ಭರ್ಜರಿ ತಯಾರಿ ನಡೆದಿದೆ. ಜತೆಗೆ ಈ ಬಾರಿ ಗಣೇಶ ಮೂರ್ತಿ ತಯಾರಕರಿಗೆ ಪವರ್‌ಸ್ಟಾರ್‌ ಪುನೀತ್‌ರಾಜಕುಮಾರ ಅಭಿಮಾನಿಗಳಿಂದ ಅಪ್ಪು ರೂಪಕದ ಗಣೇಶ ಮೂರ್ತಿಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಬ್ಬದ ಕಳೆ ಮನೆಮಾಡಿದೆ. ಗ್ರಾಮೀಣ ಹಾಗೂ ನಗರ ಭಾಗದ ಪುನೀತ್‌ರಾಜ್‌ಕುಮಾರ್‌ ಅಭಿಮಾನಿಗಳು ತಮಗೆ ಅಪ್ಪು ರೂಪಕದ ಗಣೇಶ ಮೂರ್ತಿಯೇ ಬೇಕು ಎಂದು ಗಣೇಶ ಮೂರ್ತಿ ತಯಾರಕರ ಮನೆ ಮುಂದೆ ಮುಗಿಬಿದ್ದಿದ್ದಾರೆ ಎನ್ನಲಾಗುತ್ತಿದೆ.

ಅಭಿಮಾನಿಗಳಿಗೆ ಅಪ್ಪು ಅಗಲಿಕೆ ತುಂಬಲಾರದ ನಷ್ಟವಾಗಿದೆ.ಜೊತೆಗಿರದ ಜೀವ ಎಂದಿಗಿಂತ ಜೀವಂತ ಎನ್ನುತ್ತಿರುವ ಅಭಿಮಾನಿಗಳು ಎಲ್ಲೆಲ್ಲೂ ಅಪ್ಪು ರೂಪಕವನ್ನು ಕಂಡುಕೊಳ್ಳಲು ಬಯಸುತ್ತಿದ್ದಾರೆ.

ನಂದಿ ಶಿವನ ವಾಹನವಾಗಿದ್ದು ಹೇಗೆ..? ಯಾರು ಈ ನಂದಿ..?

ಹಿಂದೂ ಧರ್ಮದ ಪವಿತ್ರ ಕಾರ್ಯಗಳಲ್ಲಿ ಮಹತ್ತರ ಸ್ಥಾನ ಪಡೆದ ಎಲೆಗಳಿವು..

 

ಯುವ ಜನತೆ ಈ ವಿಷಯಗಳಿಂದ ದೂರವಿದ್ದರೆ ಉತ್ತಮ ಅಂತಾರೆ ಚಾಣಕ್ಯರು..

About The Author