ಉಡುಪಿ: ಜಿಲ್ಲೆಯಲ್ಲಿ ಆರಂಭಗೊಂಡಂತ ಹಿಜಾಬ್ ವಿವಾದ, ದಕ್ಷಿಣ ಕನ್ನಡ ಸೇರಿದಂತೆ ಇತರೆ ಜಿಲ್ಲೆಗಳಿಗೂ ವ್ಯಾಪಿಸಿ, ಹೈಕೋರ್ಟ್ ತೀರ್ಪಿನ ಬಳಿ, ತಣ್ಣಗಾಗಿದೆ. ಆದ್ರೇ.. ಹಿಜಾಬ್ ವಿವಾದದ ಕಾರಣ, ಕಾಲೇಜುಗಳಲ್ಲಿ ಹಿಜಾಬ್ ಧರಿಸೋದಕ್ಕೆ ಅವಕಾಶ ನೀಡಲಿಲ್ಲ ಎನ್ನುವ ಕಾರಣದಿಂದ, ಆ ಕಾಲೇಜುಗಳನ್ನೇ ವಿದ್ಯಾರ್ಥಿನಿಯರು ತೊರೆದಿರೋ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಆ ಬಗ್ಗೆ ಮುಂದೆ ಓದಿ..
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಜಾಬ್ ವಿವಾದ, ಧರಿಸೋದಕ್ಕೆ ಅವಕಾಶ ನೀಡದ ಕಾರಣ, ಜಿಲ್ಲೆಯ ಅನೇಕ ಕಾಲೇಜುಗಳಿಂದ ವಿದ್ಯಾರ್ಥಿನಿಯರು ಟಿಸಿ ಪಡೆದು, ಬೇರೆ ಕಾಲೇಜುಗಳಿಗೆ ದಾಖಲಾಗಿರೋದಾಗಿ ತಿಳಿದು ಬಂದಿದೆ.
ಈ ವಿಷಯ ಮಾಹಿತಿ ಹಕ್ಕು ನಿಯಮದಡಿ ಸಲ್ಲಿಸದ ಅರ್ಜಿಗೆ ನೀಡಿದ ಮಾಹಿತಿಯಿಂದ ತಿಳಿದು ಬಂದಿದೆ. ಬರೋಬ್ಬರಿ 900 ವಿದ್ಯಾರ್ಥಿನಿಗಳ ಪೈಕಿ, 145 ವಿದ್ಯಾರ್ಥಿನಿಯರು ಹಿಜಾಬ್ ಧರಿಸೋದಕ್ಕೆ ಅವಕಾಶ ನೀಡದಂತ ಕಾಲೇಜುಗಳನ್ನು ವಿವಾದದ ಬಳಿಕ ಟಿಸಿ ಪಡೆದು ತೊರೆದಿದ್ದಾರೆ ಎನ್ನಲಾಗಿದೆ.
145 ವಿದ್ಯಾರ್ಥಿನಿಯರು ವಿವಾದದ ಬಳಿಕ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ಕಾಲೇಜುಗಳಿಂದ ಟಿಸಿ ಪಡೆದು, ಬೇರೆ ಕಾಲೇಜುಗಳಿಗೆ ವಿದ್ಯಾಭ್ಯಾಸ ಮುಂದುವರೆಸೋದಕ್ಕೆ ಸೇರಿದ್ದಾರೆ ಎನ್ನಲಾಗಿದೆ. ಈ ಮೂಲಕ ಹಿಜಾಬ್ ವಿವಾದದ ಬಳಿಕ, ಜಿಲ್ಲೆಗಳಲ್ಲಿ ಮೊದಲಿನ ಕಾಲೇಜು ಬಿಟ್ಟು, ಬೇರೆ ಶಿಕ್ಷಣ ಸಂಸ್ಥೆಗಳಿಗೆ ಸೇರ್ಪಡೆಗೊಳ್ಳೋ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿದೆ ಎನ್ನಲಾಗಿದೆ.

