Banglore News:
ಸಿದ್ದರಾಮಯ್ಯ ಇದೀಗ ಪ್ರತಿ ಹೇಳಿಕೆಯಲ್ಲೂ ವಿವಾದ ಸೃಷ್ಟಿಸುತ್ತಿದ್ದಾರೆ. ಇದರ ವಿರುದ್ಧವಾಗಿ ಕೇಸರಿ ಪಡೆಗಳು ಸಿಡಿದೇಳುತ್ತಿದೆ. ಈಗ ಬಿ.ವೈ ವಿಜಯೇಂದ್ರ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಕಿಡಿ ಕಾರಿದ್ದಾರೆ.
ಮಾಂಸ ತಿಂದು ಬಸವೇಶ್ವರ ದೇವಸ್ಥಾನಕ್ಕೆ ಹೋಗ್ತೇನೆ ಅನ್ನೋದು ಭಂಡತನ ಎಂದು ಸಿದ್ದರಾಮಯ್ಯ ವಿರುದ್ಧ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.ಈ ಕುರಿತು ಮಾತನಾಡಿದ ಅವರು, ನಮ್ಮ ನಾಡಿಗೆ ಒಂದು ಸಂಸ್ಕೃತಿ, ಪರಂಪರೆ, ಧಾರ್ಮಿಕ ಶ್ರದ್ಧೆ ಇದೆ. ಇದೆಲ್ಲವನ್ನು ನಂಬಿ ಜೀವನ ಸಾಗಿಸುವ ಅಪಾರ ಜನರು, ಭಕ್ತರು ಇದ್ದಾರೆ. ಆದರೆ ಈ ರೀತಿ ಬಹಿರಂಗವಾಗಿ ಹೇಳಿಕೆ ನೀಡುವುದರಿಂದ ಇತರರ ಮನಸ್ಸಿಗೆ ಘಾಸಿಯನ್ನುಂಟು ಮಾಡಬಾರದು ಎಂದರು.
ಇನ್ನು ಮಾಂಸ ತಿಂದು ದೇವಸ್ಥಾನಕ್ಕೆ ಹೋದ್ರೆ ತಪ್ಪೆನು ಎಂಬ ಈ ಭಂಡತನ ಯಾರೂ ಸಹ ಒಪ್ಪುವುದಿಲ್ಲ. ನಮ್ಮ ನಡುವಳಿಕೆ ಇತರರಿಗೆ ಮಾದರಿಯಾಗಬೇಕು. ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದೇ ಬಿಟ್ಟಿದೇವೆ ಎನ್ನುವ ಅತಿಯಾದ ಆತ್ಮವಿಶ್ವಾಸದಲ್ಲಿ ಮುನ್ನುಗ್ಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.