ಬೆಂಗಳೂರು: ಮತದಾರರ ಪಟ್ಟಿಯ ದತ್ತಾಂಶದೊಂದಿಗೆ ಆಧಾರ್ ಸಂಖ್ಯೆಯನ್ನು ಗುರುತಿಸಿ, ದೃಢೀಕರಿಸಿ ಜೋಡಣೆ ಮಾಡುವುದನ್ನು ಕಡ್ಡಾಯಗೊಳಿಸಿರುವುದಾಗಿ ಹಾಗೂ ಆಧಾರ್ ಲಿಂಕ್ ಮಾಡಿಕೊಳ್ಳದಿದ್ದಲ್ಲಿ, ಮತದಾರರ ಗುರುತಿನ ಚೀಟಿ ರದ್ದಾಗುವ ಸಾಧ್ಯತೆಗಳಿರುತ್ತದೆಂದು ಕೆಲವು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ವರದಿಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಸದರಿ ಪ್ರಕಟಣೆಗಳಲ್ಲಿನ ಅಂಶಗಳು ಭಾರತ ಚುನಾವಣಾ ಆಯೋಗದ ನಿರ್ದೇಶನಕ್ಕೆ ವ್ಯತಿರಿಕ್ತವಾಗಿರುತ್ತದೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರ ಪಟ್ಟಿಯ ದತ್ತಾಂಶದೊಂದಿಗೆ ಆಧಾರ್ ಸಂಖ್ಯೆಯ ಜೋಡಣೆಯು ಕಡ್ಡಾಯವಲ್ಲ.
ಮತದಾರರು ಸ್ವಯಂಪ್ರೇರಿತರಾಗಿ ಮತದಾರರ ಪಟ್ಟಿಯ ದತ್ತಾಂಶದೊಂದಿಗೆ ಆಧಾರ್ ಸಂಖ್ಯೆಯನ್ನು ಬಳಸಿ ಅಥವಾ ಇತರೆ ನಿಗಧಿತ ದಾಖಲೆಗಳ ಮೂಲಕವೂ ಸಹ ಗುರುತಿಸಿ, ದೃಢೀಕರಿಸಿ ಜೋಡಣೆ ಮಾಡಬಹುದಾಗಿರುತ್ತದೆಂದು ರಂಗಪ್ಪ, ಭಾ.ಆ.ಸೇ, ವಿಶೇಷ ಆಯುಕ್ತರು(ಆಡಳಿತ) ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ (ಕೇಂದ್ರ),ಬಿಬಿಎಂಪಿ ಮತ್ತು ವಲಯ ಆಯುಕ್ತರು(ಯಲಹಂಕ) ರವರು ತಿಳಿಸಿರುತ್ತಾರೆ.