Monday, December 23, 2024

Latest Posts

ನನಗೇನು ಭಯವಿಲ್ಲ…! ಸಚಿವರು ಹೀಗೆ ಹೇಳಿದ್ಯಾಕೆ…?!

- Advertisement -

Kolar News:

ಮೊಟ್ಟೆ ಕದನದ ಹಿನ್ನಲೆ ಕೊಡಗು ಚಲೋ ಹಮ್ಮಿಕೊಂಡಿದ್ದ ಕಾಂಗ್ರೆಸ್ಸಿಗರಿಗೆ ಈಗ ನಿಷೇದಾಜ್ಞೆ ಬಿಸಿ ಮುಟ್ಟಿಸಿದೆ ಸರಕಾರ.ಇದೇ ವಿಚಾರವಾಗಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್​​ ಪಕ್ಷದ ಕೊಡಗು ಚಲೋ ವಿಚಾರದಲ್ಲಿ ನನಗೆ ಯಾವ ಭಯವೂ ಇಲ್ಲ ಎಂದು ಕೋಲಾರ ಜಿಲ್ಲೆ ಕೆಜಿಎಫ್​ನಲ್ಲಿ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ನೂತನ ಜಿಲ್ಲಾ ಮೀಸಲು ಪೊಲೀಸ್ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ನಮಗೆ ಜನರ ಶಾಂತಿ, ನೆಮ್ಮದಿ ಮುಖ್ಯ. ಹಾಗಾಗಿ ಸೆಕ್ಷನ್ 144 ಜಾರಿಗೊಳಿಸಿದ್ದೇವೆ. ಎರಡು ಪಕ್ಷಗಳ ಜಗಳದಿಂದಾಗಿ ಕೊಡಗಿನ ಶಾಂತಿ ಕದಡಬಾರದು. ಕೊಡಗು ಚಲೋ ಮಾಡಲು ಆಗುವುದಿಲ್ಲ. ಯಾವ ಪಕ್ಷಕ್ಕೂ ಅಲ್ಲಿ ಪ್ರತಿಭಟನೆ ಮಾಡಲು ಅವಕಾಶವಿಲ್ಲ ಎಂದು ಎಚ್ಚರಿಸಿದ್ದಾರೆ.

ನಾವು ಹೋರಾಟ ಮಾಡುವಾಗ ನಿಷೇದಾಜ್ಞೆ ಜಾರಿ ಮಾಡೋದು ಇವರ ಚಾಳಿ: ಡಿಕೆಶಿ

ಕೊಡಗಿನಲ್ಲಿ 4 ದಿನ ನಿಷೇದಾಜ್ಞೆ ಜಾರಿ: ಡಿ.ಸಿ.ಸತೀಶ್

“ಹಂದಿ ಮಾಂಸ ತಿಂದು ನೀವು ಮಸೀದಿಗೆ ಹೋಗಿ” : ಯತ್ನಾಳ್

- Advertisement -

Latest Posts

Don't Miss