Monday, December 23, 2024

Latest Posts

ಬಯಲಾಯ್ತು ಬೆಂಗಳೂರಿನ ಕಳ್ಳ ಸ್ವಾಮೀಜಿಯ ಕಾಮ ಪುರಾಣ…!

- Advertisement -

Banglore News:

ಬೆಂಗಳೂರನಲ್ಲಿ ಮತ್ತೆ  ಕಳ್ಳ ಸ್ವಾಮೀಜಿಯ ಕಳ್ಳಾಟ ಬಯಲಾಗಿದೆ. ಆನಂದ ಮೂರ್ತಿ ಎಂಬ ಕಳ್ಳ ಸ್ವಾಮೀಜಿಯ ಕಾಮ ಪುರಾಣ ಬಯಲಾಗಿದೆ. ಅವಲಹಳ್ಳಿ‌ ಸಮೀಪ ಆಶ್ರಮ ಮಾಡಿಕೊಂಡಿದ್ದ ಈ ಸ್ವಾಮೀಜಿ ಈ ಆಶ್ರಮದ ಬಳಿ ಇದ್ದ ಮನೆಯೊಂದರ ಯುವತಿಯನ್ನು ಪರಿಚಯ ಮಾಡಿಕೊಂಡ ಅನಂದಮೂರ್ತಿ, ನಿನ್ನ ಕುಟುಂಬಕ್ಕೆ ದೋಷವಿದೆ, ಇದಕ್ಕಾಗಿ ಪೂಜೆ ಮಾಡಬೇಕು ಎಂದು ಆಶ್ರಮಕ್ಕೆ ಕರೆದಿದ್ದಾನೆ. ನಂತರ ಮತ್ತು ಬರುವ ಔಷಧ ನೀಡಿ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಲಾಗಿದೆ.

ಮಾತ್ರವಲ್ಲದೆ ಈ ವೇಳೆ ಖಾಸಗಿ ಫೋಟೋಗಳನ್ನು ಕೂಡ ನಕಲಿ ಸ್ವಾಮೀಜಿ ತೆಗೆದುಕೊಂಡಿದ್ದಾನೆ. ಜೊತೆಗೆ ನಿನ್ನ ಜಾತಕದ ಪ್ರಕಾರ ನೀನು ನನ್ನೊಂದಿಗೆ ಇರಬೇಕು, ನಾನು‌ ಕಾಳಿ ಆರಾಧಕ ನನ್ನನ್ನು ನಂಬು ನಿನ್ನ ಎಲ್ಲಾ ಕಷ್ಟ ಪರಿಹಾರ ಮಾಡುತ್ತೇನೆ. ನನ್ನ ಆಶ್ರಮಕ್ಕೆ ಬಾ ನಿನಗೆ ದಿಕ್ಷೇ ಕೊಡುತ್ತನೆ ಎಂದೆಲ್ಲಾ ವಂಚನೆಯ ಮಾತುಗಳನ್ನಾಡಿ ಯುವತಿಯನ್ನು ಪುಸಲಾಯಿಸಿದ್ದನು. ಅಲ್ಲದೆ ತನ್ನ ಪತ್ನಿಗೂ ಯುವತಿಯ ಪರಿಚಯ ಮಾಡಿಕೊಟ್ಟಿದ್ದನು. ‘ನಾನು ಶ್ರೀ ಕೃಷ್ಣ ನೀನು ರಾಧೆ ಇವಳು ರುಕ್ಮಿಣಿ ಎಂದು ಯುವತಿಯನ್ನ ತನ್ನ ಪತ್ನಿಗೂ ಪರಿಚಯ ಮಾಡಿಕೊಟ್ಟಿದ್ದ.

ಇದೇ ರೀತಿ ವಂಚನೆಯ ಮಾತುಗಳನ್ನು ಹೇಳುತ್ತಾ ಪದೇಪದೇ ಯುವತಿಯನ್ನು ಆಶ್ರಮಕ್ಕೆ ಕರೆದುಕೊಂಡು ಬಂದು ಕಳೆದ ಏಳು ವರ್ಷಗಳಿಂದ ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದಾನೆ. ಇದಕ್ಕೆ ಆನಂದಮೂರ್ತಿಯ ಪತ್ನಿಯೂ ಸಾಥ್ ನೀಡಿದ್ದಾಳೆ. ಇತ್ತೀಚೆಗೆ ನೀನು‌ ಮದುವೆಯಾಗು ಎಂದು ಯುವತಿಗೆ ಹೇಳಿದ್ದಾನೆ. ಆದರೆ ಅಸಲಿ ವಿಚಾರ ತಿಳಿಯದ ಯುವತಿಯ ಮನೆಯವರು ಮದುವೆಯ ತಯಾರಿ ನಡೆಸಿದ್ದರು. ಮದುವೆ ನಿಶ್ಚಯವಾಗಿದ್ದ 2ನೇ ದಿನಕ್ಕೆ ಯುವತಿಯನ್ನು ಮದುವೆಯಾಗಬೇಕಿದ್ದ ಹುಡುಗನಿಗೆ ಆನಂದಮೂರ್ತಿ ಆಕೆಯೊಂದಿಗಿನ ಖಾಸಗಿ ಫೋಟೋಗಳನ್ನು ಕಳಿಸಿದ್ದಾನೆ. ಇದರಿಂದಾಗಿ ನಿಶ್ಚಯವಾಗಿದ್ದ ಮದುವೆಯೂ ಮುರಿದುಬಿದ್ದಿತ್ತು. ವಿಷಯ ತಿಳಿದು‌ ಕಂಗಾಲಾಗಿರುವ ಸಂತ್ರಸ್ತೆ ಯುವತಿಯ ಪೋಷಕರು ನಂತರ ಕೆ.ಆರ್.ಪುರಂ‌ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.ಇಂತಹ ಕಾಮದಾಟವಾಡೊ ಕಳ್ಳ ಸ್ವಾಮೀಜಿಗಳಿಗೆ ತಕ್ಕ ಶಾಸ್ತಿಯಾಗಬೇಕೆಂದು ಪೋಷಕರು ಹೇಳುತ್ತಿದ್ದಾರೆ.

ಜಗ್ಗೇಶ್ ಅಯೋಗ್ಯ …! ಜಗ್ಗೇಶ್ ವಿರುದ್ದ ಎಂ.ಬಿ ಪಾಟೀಲ್ ಕೆಂಡ

ಸಿಡಿದೆದ್ದ ಸಿದ್ದರಾಮಯ್ಯ…! ಕೇಸರಿ ಕಲಿಗಳ ಸವಾಲ್ ಗೆ ಸಿದ್ದು ಕೌಂಟರ್..!

ಕೊಡಗು ಚಲೋ ಮುಂದೂಡಿತಾ ಕಾಂಗ್ರೆಸ್..?! ಸಿದ್ದರಾಮಯ್ಯ ಹೇಳಿದ್ದೇನು..?!

- Advertisement -

Latest Posts

Don't Miss