Thursday, October 23, 2025

Latest Posts

ಪ್ರಧಾನಿ ಮೋದಿ ರಕ್ಷಣಾ ಹೊಣೆ ಹೊತ್ತ ಮುದೋಳ ನಾಯಿ..!

- Advertisement -

ಭದ್ರತೆಯ ವಿಚಾರದಲ್ಲಿ ಶ್ವಾನ ಅಂದಾಕ್ಷಣ ನೆನಪಾಗೋದು ಮುಧೋಳ ನಾಯಿ. ತನ್ನ ವಿಶೇಷ ಕಾರ್ಯ ಶಕ್ತಿ, ಗುಣಗಳ ವ್ಯಕ್ತಿತ್ವದಿಂದಲೇ ಹೆಸರು ಮಾಡಿರೋ ನಾಯಿಯೆಂದರೆ ಮುಧೋಳ ನಾಯಿ. ಇದೀಗ ಮೋದಿ ಅವರ ಗಮನ ಸೆಳೆದು ಅವರ ವಿಶೇಷ ರಕ್ಷಣಾ ಪಡೆಗೆ ಸೇರ್ಪಡೆಯಾಗಿದೆ.

ತನ್ನ ವಿಶೇಷ ಕಾರ್ಯ ಶಕ್ತಿ, ಗುಣಗಳ ವ್ಯಕ್ತಿತ್ವದಿಂದಲೇ ಹೆಸರು ಮಾಡಿರೋ ಮುಧೋಳ ನಾಯಿ. ಈಗ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ಪಡೆಗೆ ಸೇರ್ಪಡೆಯಾಗಿದೆ. ಇದ್ರಿಂದ ಮುಧೋಳದ ಜನತೆ ಮತ್ತಷ್ಟು ಸಂತಸ ಪಡುವಂತಾಗಿದ್ದು, ದೇಶದ ಪ್ರಧಾನಿ ಮನಸೆಳೆದ ಮುಧೋಳ ಶ್ವಾನ ಬಗ್ಗೆ ಇನ್ನಷ್ಟು ಅಭಿಮಾನಪಡುವಂತಾಗಿದೆ. ತೆಳ್ಳನೆಯ ದೇಹ, ಚೂಪಾದ ಮೂಗು, ಚಿಗರೆಯಂತ ಓಟದಿಂದ ಪ್ರಸಿದ್ಧಿ ಪಡೆದಿರುವ ಮುಧೋಳ ನಾಯಿ ದೇಶದ ಪ್ರಧಾನಿಯ ಭದ್ರೆತೆಗೆ ಸೇರ್ಪಡೆಯಾಗಿರೋದು ಕರ್ನಾಟಕವೇ ಹೆಮ್ಮೆ ಪಡೋ ವಿಚಾರ.

ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಮುಧೋಳ ಶ್ವಾನ ಇದೀಗ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭದ್ರತೆ ನೀಡುವ ಎಸ್ಪಿಜಿ ತಂಡಕ್ಕೆ ಸೇರ್ಪಡೆಯಾಗಿದೆ. ಇದರಿಂದ ಮುಧೋಳದ ಶ್ವಾನಗಳಿಗೆ ಮತ್ತಷ್ಟು ಪ್ರಾಮುಖ್ಯತೆ ಹೆಚ್ಚಿದೆ. ಈ ಹಿಂದೆ ಮಿಲಿಟರಿ ಸೇರಿದಂತೆ ವಿವಿಧ ರಕ್ಷಣಾ ವಿಭಾಗಕ್ಕೆ ಮುಧೋಳ ನಾಯಿ ಸೇರ್ಪಡೆಯಾಗಿತ್ತು. ಇದೀಗ ಮೋದಿ ಅವರ ಗಮನ ಸೆಳೆದು ಅವರ ವಿಶೇಷ ರಕ್ಷಣಾ ಪಡೆಗೆ ಸೇರ್ಪಡೆಯಾಗಿದೆ.

ಮುಧೋಳ ನಾಯಿ ಪ್ರಧಾನಿ ಮೋದಿಯ ವಿಶೇಷ ರಕ್ಷಣಾ ತಂಡಕ್ಕೆ ಆಯ್ಕೆಯಾಗಿತ್ತು. ತಕ್ಷಣ ದೆಹಲಿಯಿಂದ ಬಂದ ಎಸ್ಪಿಜಿ ತಂಡದ ಸದಸ್ಯರು 2 ಮುಧೋಳ ನಾಯಿ ಮರಿಗಳನ್ನ ಕೊಂಡೊಯ್ದು ಇದೀಗ ದೆಹಲಿಯಲ್ಲಿ ತರಬೇತಿ ಕಾರ್ಯಕ್ಕೆ ಮುಂದಾಗಿದ್ದಾರೆ.

ಏಪ್ರಿಲ್ 25ರಂದು ಮುಧೋಳದ ತಿಮ್ಮಾಪೂರ ಬಳಿ ಇರುವ ಮುಧೋಳ ಶ್ವಾನ ಸಂಶೋಧನಾ ಮತ್ತು ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿದ ವಿಶೇಷ ಭದ್ರತಾ ಪಡೆಯ ತಂಡ, ಪರಿಶೀಲನೆ ನಡೆಸಿ ಬಳಿಕ ಎರಡು ಗಂಡು ಜಾತಿಯ ಮುಧೋಳ ನಾಯಿಗಳನ್ನ ಪಡೆದುಕೊಂಡು ತೆರಳಿದೆ. ನಂತರ ತರಬೇತಿ ನೀಡಿ ಈಗ ಎಸ್ಪಿಜಿ ತಂಡಕ್ಕೆ ಸೇರ್ಪಡೆಯಾಗಿದೆ.

ಮನ್ ಕಿ ಬಾತ್ನಲ್ಲೂ ಮುದೋಳ ನಾಯಿ ಪ್ರಸ್ತಾಪ

ಈ ಹಿಂದೆ ದೇಶದ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ನಲ್ಲಿ ಮುಧೋಳ ನಾಯಿಗಳ ಬಗ್ಗೆ ಮಾತನಾಡಿದ್ದರು. ಮುಧೋಳ ಶ್ವಾನಗಳನ್ನ ನೆನಪಿಸಿ, ಅವುಗಳ ವ್ಯಕ್ತಿತ್ವವನ್ನ ಬಣ್ಣಿಸಿ, ಆತ್ಮ ನಿರ್ಭರ ಭಾಗವಾಗಿ ಸ್ವಾವಲಂಬಿ ಭಾರತಕ್ಕಾಗಿ ಮನೆಯಲ್ಲಿ ಸಾಕುವುದಾದರೇ ಮುಧೋಳ ತಳಿಯಂತಹ ನಾಯಿಗಳನ್ನ ಸಾಕಿ ಎಂದಿದ್ದರು. ಈ ಮೂಲಕ ದೇಶಾದ್ಯಂತ ಮುಧೋಳ ಶ್ವಾನದ ಬಗ್ಗೆ ಮತ್ತಷ್ಟು ಅಭಿಮಾನವನ್ನು ಹೆಚ್ಚಿಸುವಂತೆ ಮಾಡಿದ್ದರು.

ಕಾರ್ಯವೈಖರಿಯಿಂದಲೇ ಮುಧೋಳ ನಾಯಿ ಫೇಮಸ್

ಮುಧೋಳ ನಾಯಿ ಮರಿಗಳು ತಮ್ಮ ವಿಶೇಷ ಕಾರ್ಯ ಶಕ್ತಿ, ಆಕಾರ, ಬಣ್ಣ, ಗುಣಗಳ ವ್ಯಕ್ತಿತ್ವದಿಂದಲೇ ದೇಶಾದ್ಯಂತ ಹೆಸರು ಮಾಡಿದೆ. ಭಾರತೀಯ ಸೇನೆ, ಸಿಆರ್ಪಿಎಫ್ ಮತ್ತು ವಾಯುಸೇನೆಗೂ ಈ ಮುಧೋಳ ನಾಯಿ ಸೇರ್ಪಡೆಗೊಂಡು ಗಮನ ಸೆಳೆದಿದ್ದವು. ಇನ್ನೂ ವಿಶೇಷವೆಂದರೆ ಈ ಮುಧೋಳ ನಾಯಿ ಎಲ್ಲಾ ಹವಾಮಾನಕ್ಕೂ ಹೊಂದಿಕೊಳ್ಳಬಹುದಾದ ಪ್ರಾಣಿ.

ಶಿವಾಜಿ ಸೇನೆಯಲ್ಲೂ ಮುದೋಳ ನಾಯಿಯ ಪಾತ್ರ
ಸುಮಾರು ಕ್ರಿ.ಪೂ. 500 ರಲ್ಲಿ ಈ ನಾಯಿ ಕರ್ನಾಟಕದವರಿಗೆ ಪರಿಚಯವಾಗಿತ್ತು. ಮಧ್ಯ ಏಷ್ಯಾ ಹಾಗೂ ಅರೇಬಿಯದಿಂದ ಭಾರತಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಹಲಗಲಿ ಬೇಡರು ತಮ್ಮ ಬೇಟೆಗಾಗಿ ಈ ನಾಯಿಯನ್ನು ಇಟ್ಟುಕೊಂಡಿದ್ದರು ಎಂದು ಹೇಳಲಾಗುತ್ತಿದೆ.
ಮುಧೋಳದ ರಾಜ ಮಾಲೋಜಿರಾವ್ ಘೋರ್ಪಡೆ ಈ ನಾಯಿ ನೋಡಿ ತನ್ನ ಆಸ್ತಿ ಕಾಯುವುದಕ್ಕೆ ನೇಮಿಸಿಕೊಂಡಿದ್ದ. ನಂತರ 1900 ರಲ್ಲಿ ಇಂಗ್ಲೆಂಡ್ ದೊರೆ ಜಾರ್ಜ್‍ಗೆ ಉಡುಗೊರೆಯಾಗಿ ಕೊಟ್ಟಿದ್ದರು. ಇದರಿಂದ ಈ ನಾಯಿ ತಳಿ ಅಂದಿನಿಂದಲೂ ಹೆಚ್ಚು ಪ್ರಸಿದ್ಧಿ ಪಡೆದಿದೆ. ಛತ್ರಪತಿ ಶಿವಾಜಿ ಸೈನ್ಯದಲ್ಲಿಯೂ ಈ ನಾಯಿ ಇತ್ತು. ಅಂದು `ಸಮರವೀರ’ ನಾಯಿ ಎಂದು ಕರೆಯುತ್ತಿದ್ದರು. ಬಾಗಲಕೋಟೆಯ ಮುಧೋಳದಲ್ಲಿ ಈ ನಾಯಿಯನ್ನು ಹೆಚ್ಚಾಗಿ ಸಾಕುತ್ತಿದ್ದ ಹಿನ್ನೆಲೆಯಲ್ಲಿ ನಾಯಿಗೆ `ಮುಧೋಳ’ ಅಂತ ಹೆಸರು ಬಂದಿದೆ. ಬ್ರಿಟಿಷರು `ಕ್ಯಾರವಾನ್’ ಎಂಬುದಾಗಿ ಕರೆಯುತ್ತಿದ್ದರು.

ನಾನು ಕಾನೂನನ್ನು ಉಲ್ಲಂಘಿಸುವ ತಪ್ಪು ಮಾಡಲ್ಲ, ಮಡಿಕೇರಿ ಪ್ರತಿಭಟನೆ ಮುಂದೂಡಿಕೆ – ಸಿದ್ಧರಾಮಯ್ಯ

ಎಸಿಬಿ ರದ್ದು ವಿಚಾರ: ಮೇಲ್ಮನವಿ ಸಲ್ಲಿಸುವ ಪ್ರಶ್ನೆಯೇ ಇಲ್ಲ – CM ಬೊಮ್ಮಾಯಿ

ಕೆಂಪುಕೋಟೆ ಮೇಲೆ ಭ್ರಷ್ಟಾಚಾರದ ವಿರುದ್ಧ ಮೋದಿ ಭಾಷಣ: 40 ಪರ್ಸೆಂಟ್ ಸರಕಾರ ಎಂದು ಜನ ಬೀದಿಯಲ್ಲಿ ಮಾತು – ಮಾಜಿ ಸಿಎಂ HD ಕುಮಾರಸ್ವಾಮಿ

- Advertisement -

Latest Posts

Don't Miss