Technology News:
ಇಂದು (ಆಗಸ್ಟ್ 24) ಮಧ್ಯಾಹ್ನ 12 ಗಂಟೆಯಿಂದ ಮೆಟಾಲಿಕಾ ಗೋಲ್ಡ್, ರಾಕಿಂಗ್ ಬ್ಲ್ಯಾಕ್ ಮತ್ತು ಸೋಲ್ಫುಲ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ Realme 9i 5G ಸ್ಮಾರ್ಟ್ಫೋನ್ ಮಾರಾಟವಾಗುತ್ತಿದ್ದು, 90Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.6-ಇಂಚಿನ ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 810 ಪ್ರೊಸೆಸರ್, 50-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 5,000mAh ಬ್ಯಾಟರಿಯಂತಹ ವೈಶಿಷ್ಟ್ಯಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.
ಭಾರತದಲ್ಲಿ Realme 9i 5G ಸ್ಮಾರ್ಟ್ಫೋನ್ ಕೇವಲ 14,999 ರೂ. ಬೆಲೆಯಲ್ಲಿ ಬಿಡುಗಡೆಗೊಂಡಿದೆ. 4GB RAM + 64GB ಸ್ಟೋರೇಜ್ ಆವೃತ್ತಿಯು 14,999 ರೂ. ಮತ್ತು 6GB RAM + 128GB ಸ್ಟೋರೇಜ್ ಆವೃತ್ತಿಯು 16,999 ಬೆಲೆಯನ್ನು ಹೊಂದಿವೆ. ಆದರೆ, ಸ್ಮಾರ್ಟ್ಫೋನ್ ಬಿಡುಗಡೆ ಕೊಡುಗೆಯಾಗಿ HDFC ಬ್ಯಾಂಕ್ ಗ್ರಾಹಕರಿಗೆ 1,000 ರೂ. ರಿಯಾಯಿತಿಯೊಂದಿಗೆ ಕ್ರಮವಾಗಿ 13,999 ರೂ. ಹಾಗೂ 14,999 ರೂ. ಬೆಲೆಗಳಲ್ಲಿ Realme 9i 5G ಸ್ಮಾರ್ಟ್ಫೋನ್ ಖರೀದಿಗೆ ಲಭ್ಯವಿದೆ.
ನೂತನ Realme 9i 5G ಸ್ಮಾರ್ಟ್ಫೋನ್ 6.6-ಇಂಚಿನ ಫುಲ್ HD+ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇಯು 1,080×2,400 ಪಿಕ್ಸೆಲ್ ಸಾಮರ್ಥ್ಯದಲ್ಲಿ 90Hz ರಿಫ್ರೆಶ್ ರೇಟ್ ಮತ್ತು 400 nits ಬ್ರೈಟ್ನೆಸ್ ಅನ್ನು ನೀಡಲಿದೆ. ಹುಡ್ ಅಡಿಯಲ್ಲಿ, ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 5G SoC ಪ್ರೊಸೆಸರ್ ನಿಂದ ಚಾಲಿತವಾಗಿರುವ ಈ ಸ್ಮಾರ್ಟ್ಫೋನನ್ನು 6GB RAM ಮತ್ತು 128GB ಆಂತರಿಕ ಮೆಮೊರಿಯೊಂದಿಗೆ ಜೋಡಿಸಲಾಗಿದೆ. ಮೈಕ್ರೋ SD ಕಾರ್ಡ್ ಮೂಲಕ ಸ್ಮಾರ್ಟ್ಫೋನಿನ ಮೆಮೊರಿಯನ್ನು 1TB ವರೆಗೆ ಹೆಚ್ಚಿಸಬಹುದು ಮತ್ತು ಆಪ್ ರೆಸ್ಪಾನ್ಸಿವ್ ಅನ್ನು ಸುಧಾರಿಸಲು ವರ್ಚುವಲ್ RAM ಅನ್ನು ಸೇರಿಸುವ ಡೈನಾಮಿಕ್ RAM ವಿಸ್ತರಣೆ ತಂತ್ರಜ್ಞಾನದೊಂದಿಗೆ Realme 9i 5G ಸ್ಮಾರ್ಟ್ಫೋನ್ ಬಂದಿದೆ ಎಂದು Realme ಕಂಪೆನಿ ಹೇಳಿಕೊಂಡಿದೆ ಎಂದು ತಿಳಿದು ಬಂದಿದೆ.
ಹೊಸ ರೂಪದ Noise ಬ್ರಾಂಡ್ ಡಿಜಿಟಲ್ ಸ್ಮಾರ್ಟ್ವಾಚ್ ಬಿಡುಗಡೆ..! ಇದರಲ್ಲಿದೆ ಸೂಪರ್ ಫೀಚರ್ಸ್..!
ತಿಂಗಳ ಅಂತ್ಯದ ವೇಳೆಗೆ ಬೆಂಗಳೂರಲ್ಲೂ ಸಿಗಲಿದೆಯಾ ಮೊದಲ ಹಂತದ 5ಜಿ ಸೇವೆ..?!




