Sunday, April 20, 2025

Latest Posts

ಜಾನುವಾರುಗಳಿಗೆ ಆ್ಯಸಿಡ್ ಎರಚಿದ ಖತರ್ನಾಕ್ ಖದೀಮರು…!

- Advertisement -

Tamilnad news:

ಕೊಯಂಬತ್ತೂರು: ಜಾನುವಾರುಗಳ ಮೇಲೆ ಕಿಡಿಗೇಡಿಗಳು ಗ್ಯಾಂಗ್  ಆ್ಯಸಿಡ್ ಎರಚಿ ಅಮಾನುಷವಾಗಿ ನಡೆದುಕೊಂಡಿರುವ ಘಟನೆ ತಮಿಳುನಾಡಿನ ಮೆಟ್ಟುಪಾಳ್ಯಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೆಟ್ಟುಪಾಳ್ಯಂ ಸಮೀಪದ ರಾಜಕುಮಾರ್ ಎಂಬವರು ಹೈನುಗಾರಿಕೆ ನಡೆಸುತ್ತಾ ಜೀವನ ಸಾಗಿಸುತ್ತಿದ್ದವರು. ಅವರಿಗೆ ಸೇರಿದ ಸುಮಾರು 20ಕ್ಕೂ ಹೆಚ್ಚು ಎಮ್ಮೆ ಹಾಗೂ ಹಸುಗಳ ಮೇಲೆ ಕೆಲ ಕಿಡಿಗೇಡಿಗಳು ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ. ರಾತ್ರಿ ಪ್ರಾಣಿಗಳ ಮೇಲೆ ಆ್ಯಸಿಡ್ ಎರಚಿದ್ದು, ಬೆನ್ನು ತಲೆ ಕಾಲು ಹಾಗೂ ದೇಹದ ಹಲವು ಭಾಗಗಳಿಗೆ ಆ್ಯಸಿಡ್ ಬಿದ್ದು ತೀವ್ರ ರಕ್ತಸ್ರಾವವಾಗಿದೆ.

ಕೃತ್ಯದ ಬಳಿಕ ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಜಾನುವಾರುಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.ಅಮಾನುಷ ಕೃತ್ಯ ಎಸಗಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಅನುಮಾನದಿಂದ ಪತ್ನಿಯನ್ನೇ ಕೊಂದ…!

ಇಂದಿನಿಂದ 3 ದಿನ ಕೊಡಗು ನಿಶಬ್ಧ…!

ಮನನೊಂದು ಆತ್ಮಹತ್ಯೆಗೆ ಶರಣಾದ 5ನೇ ತರಗತಿ ಬಾಲಕಿ..!

- Advertisement -

Latest Posts

Don't Miss