ಜೋಳಿಗೆಯಲ್ಲಿ ಮಲಗಿಸಿದ್ದ ಮಗು ಕಿಡ್ನಾಪ್…! ತಾಯಂದಿರೇ ಹುಷಾರ್…!

Crime News:

ಜೋಳಿಗೆಯಲ್ಲಿ ಮಲಗಿಸಿದ್ದ ಮಗುವನ್ನು ಕಿಡಿಗೇಡಿಗಳು ಕಿಡ್ನಾಪ್ ಮಾಡಿರೋ ಸುದ್ದಿ ಬೆಳಕಿಗೆ ಬಂದಿದೆ.ತಾಯಿ ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ಜೋಳಿಗೆಯಲ್ಲಿ ಮಲಗಿಸಿದ್ದ 9 ತಿಂಗಳ ಮಗು ನಾಪತ್ತೆಯಾದ ಘಟನೆ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ ನಡೆದಿದೆ.

ಬೀರಪ್ಪ (9 ತಿಂಗಳು) ನಾಪತ್ತೆಯಾದ ಮಗು. ಗೌಡಪ್ಪ ವಕ್ರಾಣಿ ಎಂಬವರ ಪತ್ನಿ ಶಾಂತಮ್ಮ ಮರಕ್ಕೆ ಕಟ್ಟಿದ ಜೋಳಿಗೆಯಲ್ಲಿ ಮಗುವನ್ನು ಮಲಗಿಸಿ ಹೊಲದಲ್ಲಿ ಕಳೆ ಕೀಳುವ ಕೆಲಸಕ್ಕೆಂದು ತೆರಳಿದ್ದರು. ಸ್ವಲ್ಪ ಸಮಯದ ಬಳಿಕ ನೀರು ಕುಡಿಯಲೆಂದು ಮರದ ಸನಿಹ ಬಂದು ಜೋಳಿಗೆ ಕಡೆ ನೋಡಿದಾಗ ಅದರಲ್ಲಿ ಮಗು ಇರಲಿಲ್ಲ. ಕೂಡಲೇ ಕಿರುಚಾಡಿ ಇತರ ಕೆಲಸಗಾರರನ್ನು ಕರೆದಿದ್ದಾರೆ. ಎಲ್ಲರೂ ಸೇರಿ ಹೊಲದ ಸುತ್ತಮುತ್ತ ಹುಡುಕಾಟ ನಡೆಸಿದರೂ ಮಗು ಕಾಣಸಿಕ್ಕಿಲ್ಲ.

ಗ್ರಾಮದಾದ್ಯಂತ ಮಗು ನಾಪತ್ತೆಯಾಗಿರುವ ಸುದ್ದಿ ಹರಡಿ ಗ್ರಾಮಸ್ಥರು ತಮ್ಮ ತಮ್ಮ ಜಮೀನುಗಳಲ್ಲಿ ಹುಡುಕಾಡಿದ್ದಾರೆ. ಮಕ್ಕಳ ಕಳ್ಳರು ಮಗುವನ್ನು ಕದ್ದಿದ್ದಾರೆ ಎಂಬ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ. ಮಗುವನ್ನು ಕಳೆದುಕೊಂಡು ಕುಟುಂಬ ಕಣ್ಣೀರಾಗಿದೆ. ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾನುವಾರುಗಳಿಗೆ ಆ್ಯಸಿಡ್ ಎರಚಿದ ಖತರ್ನಾಕ್ ಖದೀಮರು…!

ಅನುಮಾನದಿಂದ ಪತ್ನಿಯನ್ನೇ ಕೊಂದ…!

 

ಮನನೊಂದು ಆತ್ಮಹತ್ಯೆಗೆ ಶರಣಾದ 5ನೇ ತರಗತಿ ಬಾಲಕಿ..!

About The Author