Tuesday, December 24, 2024

Latest Posts

ಸದ್ಯದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್ ಎಕ್ಸ್-ಲೈನ್ ಕಾರು

- Advertisement -

Technology News:

ಕಿಯಾ ಸೊನೆಟ್ ಬಿಡುಗಡೆಯಾದ ಎರಡು ವರ್ಷದೊಳಗೆ ದೇಶೀಯ ಮಾರುಕಟ್ಟೆಯಲ್ಲಿ 1.5 ಲಕ್ಷ ಮಾರಾಟದ ಗಡಿ ದಾಟಿ ಹೊಸ ಮೈಲಿಗಲ್ಲು ಸಾಧಿಸಿದೆ. ಈ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯು ಭಾರತ ಮಾರುಕಟ್ಟೆಯಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ.

ಇದೀಗ ಕಿಯಾ ಇಂಡಿಯಾದ ಅಧಿಕೃತವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಸೊನೆಟ್ ಕಾಂಪ್ಯಾಕ್ಟ್ ಎಸ್‌ಯುವಿಯ ಎಕ್ಸ್ ಲೈನ್ ರೂಪಾಂತರ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಕಿಯಾ ಸೊನೆಟ್ ಎಕ್ಸ್ ಲೈನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ದಕ್ಷಿಣ ಕೊರಿಯಾದ ಆಟೋ ಮೇಜರ್ ಕಳೆದ ವರ್ಷ ಭಾರತದಲ್ಲಿ ಸೆಲ್ಟೋಸ್ ಎಕ್ಸ್ ಲೈನ್ ಅನ್ನು ಪರಿಚಯಿಸಿತು ಮತ್ತು ಇದೇ ಮಾದರಿಯಲ್ಲಿ, ಸೋನೆಟ್ ಎಕ್ಸ್ ಲೈನ್ ನಿಯಮಿತ ರೂಪಾಂತರದಿಂದ ತನ್ನನ್ನು ಪ್ರತ್ಯೇಕಿಸಲು ಹಲವಾರು ಬಾಹ್ಯ ಮತ್ತು ಆಂತರಿಕ ಪರಿಷ್ಕರಣೆಗಳನ್ನು ಪಡೆಯುತ್ತದೆ.

ಕಿಯಾ ಸೊನೆಟ್ ಎಕ್ಸ್-ಲೈನ್ ಕಪ್ಪಾಗಿಸಿದ ಟೈಲ್‌ಗೇಟ್ ಅಲಂಕರಣ, ಎಕ್ಸ್-ಲೈನ್ ಬ್ಯಾಡ್ಜಿಂಗ್, ಕಪ್ಪು ಮತ್ತು ಕಾಂಟ್ರಾಸ್ಟ್ ಬಣ್ಣದಲ್ಲಿ ಬಂಪರ್ ಇನ್ಸರ್ಟ್‌ಗಳು ಇತ್ಯಾದಿಗಳೊಂದಿಗೆ ಬರಲಿದೆ. ಕಾಂಟ್ರಾಸ್ಟ್ ಆಕ್ಸೆಂಟ್‌ಗಳೊಂದಿಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವ್ಹೀಲ್ ಗಳೊಂದಿಗೆ ಬರುತ್ತದೆ.

ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕಿಯಾ ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್‍ಯುವಿಯ ಪೆಟ್ರೋಲ್ ಮತ್ತು ಎರಡು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.2-ಲೀಟರ್ ಯುನಿಟ್ ಮತ್ತು 1.0-ಲೀಟರ್ ಟರ್ಬೊ-ಚಾರ್ಜ್ಡ್ ಪೆಟ್ರೋಲ್ ಅನ್ನು ಹೊಂದಿದೆ. ಇದರಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ 84 ಬಿಹೆಚ್‌ಪಿ ಪವರ್ ಮತ್ತು 115 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್‌ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ

ಈ ಸೊನೆಟ್ ಎಸ್‍ಯುವಿ ಒಳಭಾಗದಲ್ಲೂ ಕೂಡಾ ಹಲವಾರು ಪ್ರೀಮಿಯಂ ಫೀಚರ್ಸ್‌ಗಳ ನೀಡಲಾಗಿದೆ. ಇದರಲ್ಲಿ ಮುಂಭಾಗದಲ್ಲಿ ವೆಂಟಿಲೆಟೆಡ್ ಲೆದರ್ ಸೀಟುಗಳು, ತ್ರಿ ಸ್ಪೋಕ್ ಡಿ ಕಟ್ ಸ್ಟೀರಿಂಗ್ ವೀಲ್ಹ್ ಜೊತೆ ಮೌಂಟೆಡ್ ಕಂಟ್ರೋಲ್, ಸೆಮಿ ಡಿಜಿಟಲ್ ಇನ್‌ಸ್ಟುಮೆಂಟ್ ಕ್ಲಸ್ಟರ್, ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, 10.25-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಕನೆಕ್ಟಿಟಿಯನ್ನು ಒಳಗೊಂಡಿದೆ. ಇದರೊಂದಿಗೆ ಈ ಸಬ್ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ವೈರ್‌ಲೆಸ್ ಚಾರ್ಜರ್, ಸೌಂಡ್ ಮೋಡ್ ಲೈಟಿಂಗ್ ಮತ್ತು ಬಾಷ್ ಸಿಸ್ಟಂ ಹೊಂದಿರುವ 7-ಸ್ಪೀಕರ್ಸ್ ಅನ್ನು ಒಳಗೊಂಡಿದೆ.

ಕೈಗೆಟಕುವ ಬೆಲೆಯಲ್ಲಿ ಓಪ್ಪೋ ಇಯರ್‌ಬಡ್ ಲಾಂಚ್…! ನೂತನ ಫೀಚರ್ಸ್..!

ಕಿಚ್ಚನ ಬರ್ತ್ ಡೇಗೆ ಸುದೀಪಿಯನ್ಸ್ ಗೆ ಸ್ಪೆಷಲ್ ಗಿಫ್ಟ್….ಜೀ5 ಒಟಿಟಿಗೆ ಲಗ್ಗೆ ಇಡ್ತಿದ್ದಾನೆ ವಿಕ್ರಾಂತ್ ರೋಣ

ರೈಲ್ವೇ ಪ್ರಯಾಣಿಕರು ವಾಟ್ಸ್ ಆಪ್ ನಲ್ಲಿ ಮಾಡಬಹುದು ಫುಡ್ ಆರ್ಡರ್…?!

- Advertisement -

Latest Posts

Don't Miss