Banglore Crime News:
ವಿಠಲ ನಗರದ ಚಂದ್ರಕಲಾ ಬಾಲ್ಯದಿಂದ ಅನಾಥೆಯಾಗಿದ್ರೂ ಏಕಾಂಗಿಯಾಗಿ ಬದುಕು ಕಟ್ಟಿಕೊಂಡಿದ್ದ ದಿಟ್ಟೆ. ಆದರೆ, ಒಂದು ವರ್ಷದ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಈಕೆ ಕಥೆ ದುರಂತದಲ್ಲಿಅಂತ್ಯ ಕಂಡಿದೆ.
ಹೌದು, ಇತ್ತೀಚೆಗೆ ಠಾಣೆಯಲ್ಲಿ ಇತ್ಯರ್ಥವಾಗದೆ ಉಳಿದುಕೊಂಡಿದ್ದ ಕಡತಗಳಿಗೆ ಮುಕ್ತಿ ನೀಡಲು ಚಾಮರಾಜಪೇಟೆ ಠಾಣೆ ಇನ್ಸ್‌ಪೆಕ್ಟರ್ ಎರ್ರಿಸ್ವಾಮಿ ನೇತೃತ್ವದ ತಂಡ ಚಂದ್ರಕಲಾ ನಾಪತ್ತೆ ಫೈಲ್ ಧೂಳು ಕೊಡವಿ ತನಿಖೆ ಚುರುಕುಗೊಳಿಸಿತ್ತು. ತನಿಖೆ ವೇಳೆ, ನಾಪತ್ತೆಯಾಗಿದ್ದ ಚಂದ್ರಕಲಾ ಅವರು ವರ್ಷದ ಹಿಂದೆ ಮಳವಳ್ಳಿ ತಾಲೂಕಿನ ಮುಳ್ಳಯ್ಯನ ಕಟ್ಟೆ ಗುಡ್ಡೆಯಲ್ಲಿ ಕೊಲೆಯಾಗಿದ್ದರು ಎಂಬ ಸಂಗತಿ ಬಯಲಾಗಿತ್ತು. ಈ ಬೆನ್ನಲ್ಲೇ ಚಂದ್ರಕಲಾ ಕೊಲೆಗೈದಿದ್ದ ಆಕೆಯ ಸ್ನೇಹಿತೆ ಲಕ್ಷ್ಮಿ, ರೌಡಿ ಶೀಟರ್ ನಾರಾಯಣನನ್ನು ಪೊಲೀಸರು ಬಂಧಿಸಿದ್ದಾರೆ. ಜತೆಗೆ, ಚಂದ್ರಕಲಾ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದ ಹಲಗೂರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಮದುವೆ ಆಸೆ ತೋರಿಸಿ ಕೊಂದೇ ಬಿಟ್ರು:
ಚಂದ್ರಕಲಾ (42) ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡಿದ್ದರು. ಒಬ್ಬಂಟಿಯಾಗಿಯೇ ಜೀವನ ಕಳೆಯುತ್ತಿದ್ದ ಚಂದ್ರ ಕಲಾ, ಗೋಣಿ ಚೀಲ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಚಂದ್ರಕಲಾ ಅವರಿಗೆ ಸಂಗಾತಿ ಬೇಕೆಂಬ ಯೋಚನೆ ಬಂದಿದ್ದು, ಜತೆಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಿಗೆ ವಿಷಯ ತಿಳಿಸಿದ್ದರು.
ಮದುವೆಗೆ ಸಹಾಯ ಮಾಡುವುದಾಗಿ ತಿಳಿಸಿದ್ದ ಲಕ್ಷ್ಮಿ, ತನ್ನ ಪರಿಚಯಸ್ಥ ನಾರಾಯಣನನ್ನು ತೋರಿಸಿದ್ದಳು. ಚಂದ್ರಕಲಾ ಕೂಡ ಒಪ್ಪಿಗೆ ಕೊಟ್ಟಿದ್ದರು. ಇದೇ ಸಲುಗೆಯಲ್ಲಿ ಮೂವರು ಅನ್ಯೋನ್ಯವಾಗಿದ್ದರು. ಆದರೆ, ಲಕ್ಷ್ಮಿ ಮತ್ತು ನಾರಾಯಣ, ಒಬ್ಬಂಟಿಯಾಗಿರುವ ಚಂದ್ರಕಲಾ ಬಳಿ ಚಿನ್ನಾಭರಣ ಹಾಗೂ ಜಾಸ್ತಿ ಹಣ ಇರಬಹುದು ಎಂದು ಲೆಕ್ಕಾಚಾರ ಹಾಕಿ ಆಕೆಯನ್ನೇ ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದರು ಪಾಪಿಗಳು.
ಅದರಂತೆ, ಮೈಸೂರಿಗೆ ಹೋಗುವ ನೆಪದಲ್ಲಿ ಆಟೋದಲ್ಲಿ ಚಂದ್ರಕಲಾ ಅವರನ್ನು ಕರೆದೊಯ್ದಿದ್ದ ಆರೋಪಿಗಳು, ಮಳವಳ್ಳಿ ತಾಲೂಕಿನ ಮುಳ್ಳಯ್ಯನ ಕಟ್ಟೆ ಗುಡ್ಡೆಯಲ್ಲಿ ವೇಲ್‌ನಿಂದ ಆಕೆಯ ಕತ್ತು ಬಿಗಿದು ಕೊಲೆಗೈದು ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದರು. ಬಳಿಕ ಚಂದ್ರಕಲಾ ಬ್ಯಾಗ್ ಪರಿಶೀಲಿಸಿದಾಗ ಅವರಿಗೆ ಹೆಚ್ಚಿನ ಹಣ, ಆಭರಣ ಸಿಕ್ಕಿರಲಿಲ್ಲ.ಹೀಗೆ ಸ್ನೇಹಿತೆಯನ್ನೇ ಕೊಂದು ಬಿಟ್ಟಿದ್ದಳು ಪಾಪಿ ಲಕ್ಷ್ಮೀ.
ಬೆಳಗಾವಿಯಲ್ಲಿ ಚಿರತೆ ಕಣ್ಣು ಮುಚ್ಚಾಲೆ..! ಯಾವುದೇ ಆಮಿಶಕ್ಕೂ ನಾ ಒಲ್ಲೆ ಎನ್ನುತ್ತಿದೆ..!
2023ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ…! ಸಿಎಂ ಬೊಮ್ಮಾಯಿ ಹೇಳಿದ್ದೇನು..?
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಮೋದಿ ಸೇರಿ ಯಾರಿಗೂ ಇಲ್ಲ – HD ಕುಮಾರಸ್ವಾಮಿ