Sunday, December 22, 2024

Latest Posts

ವಿದ್ಯಾರ್ಥಿನಿಯರಿಗೆ ಸ್ವಾಮೀಜಿಯಿಂದ ಲೈಂಗಿಕ ಕಿರುಕುಳ: ಪ್ರಕರಣ ದಾಖಲು

- Advertisement -

Mysoor News:

ವಿದ್ಯಾರ್ಥಿನಿಯರಿಗೆ ಸ್ವಾಮೀಜಿಯಿಂದ  ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂಬ ಸುದ್ದಿ ಬೆಳಕಿಗೆ  ಬಂದಿದೆ. ತಮ್ಮದೇ ಮಠದ ಹಾಸ್ಟೇಲ್​ನಲ್ಲಿರುವ ವಿದ್ಯಾರ್ಥಿನಿಯರ ಮೇಲೆ ನಿರಂತರ ಲೈಂಗಿಕ ದೌರ್ಜನ್ಯವೆಸಗುತ್ತಿದ್ದಾರೆಂದು ಆರೋಪಿಸಿ ನಾಡಿನ ಪ್ರತಿಷ್ಠಿತ ಮಠ ಒಂದರ ಸ್ವಾಮೀಜಿ ವಿರುದ್ಧ ದೌರ್ಜನ್ಯಕೊಳಗಾದ ಇಬ್ಬರು ವಿದ್ಯಾರ್ಥಿನಿಯರು ನಗರದ ಮಹಿಳಾ ಸಾಂತ್ವನ ಮತ್ತು ಮಕ್ಕಳ ವಸತಿ ಕೇಂದ್ರವಾದ ಒಳನಾಡಿ ಸಂಸ್ಥೆಗೆ ದೂರು ನೀಡಲಾಗಿದೆ. ದೂರು ಪಡೆದ ಸಂಸ್ಥೆಯೂ ಆಪ್ತ ಸಮಾಲೋಚನೆ ನಡೆಸುತ್ತಿದೆ. ಮಠ ನಡೆಸುವ ಪ್ರೌಢಶಾಲೆಯಲ್ಲೇ ಓದುತ್ತಿರುವ ವಿದ್ಯಾರ್ಥಿನಿಯರು ಸರದಿಯಂತೆ ಸ್ವಾಮೀಜಿ ಬಳಿಗೆ ಹೋಗಬೇಕು. ಒಂದು ವೇಳೆ ಹೋಗಲು ನಿರಾಕರಿಸಿದರೆ ಹಾಸ್ಟೆಲ್ ವಾರ್ಡನ್ ಮತ್ತು ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಾರೆ ಎಂದು ವಿದ್ಯಾರ್ಥಿನಿಯರು ಆಪ್ತ ಸಮಾಲೋಚನೆ ಸಂದರ್ಭದಲ್ಲಿ ಹೇಳಿದ್ದಾರೆ ಎನ್ನಲಾಗುತ್ತಿದೆ.

ಸಂಸ್ಥೆ ನೀಡಿದ ದೂರು ಆಧರಿಸಿ ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ವಿಚಾರಣೆ ಮಾಡಿದ್ದು, ವಿದ್ಯಾರ್ಥಿನಿಯರ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂದು ತಿಳಿದುಬಂದಿದೆ ಎನ್ನಲಾಗುತ್ತಿದೆ. ಸ್ವಾಮೀಜಿ ವಿರುದ್ಧ ಪೋಕ್ಸ್‌ ಕಾಯಿದೆ ಅಡಿ ಮೊಕದ್ದಮೆ ದಾಖಲಿಸಬೇಕು ಎಂದು ಸಮಿತಿಯು ಆದೇಶ ಹೊರಡಿಸಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನಲ್ಲಿ ಪ್ರೇಯಸಿಯಿಂದ ಪ್ರಿಯಕರನ ಕಿಡ್ನಾಪ್…?!

ಟ್ರಾವೆಲ್ ಬ್ಯಾಗ್‌ನಲ್ಲಿ 15 ವರ್ಷದ ಬಾಲಕಿಯ ಶವ…!

ನಟಿ ಸೊನಾಲಿ ಸಾವಿಗೆ ಮಹತ್ತರ ಟ್ವಿಸ್ಟ್: ಸಹಜ ಸಾವಲ್ಲ ಕೊಲೆ…!

- Advertisement -

Latest Posts

Don't Miss