Friday, October 18, 2024

Latest Posts

ಈ ಕಾರಣಕ್ಕಾಗಿ ಎಸ್ಕಲೇಟರ್ ಬದಿಯಲ್ಲಿ ಬ್ರಷ್ ಇದೆ..?!

- Advertisement -

Technology News:

ಎಸ್ಕಲೇಟರ್ ಅನ್ನು 1859 ರಲ್ಲಿ ನಾಥನ್ ಏಮ್ಸ್  ಕಂಡುಹಿಡಿದರು. ಎಸ್ಕಲೇಟರ್ ಎನ್ನುವುದು ನಿರಂತರ ಚಾಲನೆಯಲ್ಲಿರುವ ಬೆಲ್ಟ್  ನಿಂದ ಸಂಪರ್ಕಿಸಲಾದ ಹಂತಗಳನ್ನು ಒಳಗೊಂಡಿರುವ ಏಣಿಯಾಗಿದೆ. ಇದು ಕನ್ವೇಯರ್ ಪ್ರಕಾರದ ಸಾರಿಗೆ ಸಾಧನವಾಗಿದ್ದು, ಇದರಲ್ಲಿ ಮೋಟಾರೀಕೃತ ಸೆಟ್ ಅನ್ನು ಅಂತ್ಯವಿಲ್ಲದ ಬೆಲ್ಟ್ ನಂತೆ ಜೋಡಿಸಲಾಗಿದೆ.ಅದು ನಿರಂತರವಾಗಿ ಏರುತ್ತದೆ ಅಥವಾ ಇಳಿಯುತ್ತದೆ.

ಎಸ್ಕಲೇಟರ್‌ ಬಗ್ಗೆ ಅದ್ರ ಬಳಕೆ ಜ್ಞಾನ ಈಗ ತಿಳಿದಿರುವುದು ಅನಿವಾರ್ಯ. ಎಸ್ಕಲೇಟರ್ ಅಕ್ಕಪಕ್ಕ ಹಾಕಿರುವ ಬ್ರಷ್ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಎಸ್ಕಲೇಟರ್‌ಗಳು ಹಳದಿ ಗಡಿಯ ಬಳಿ ಬ್ರಷ್‌ಗಳನ್ನು ಹೊಂದಿವೆ. ಈ ಹಳದಿ ಬಣ್ಣ ಎಂದರೆ ಎಸ್ಕಲೇಟರ್ ಹತ್ತುವಾಗ ನಿಮ್ಮ ಪಾದವನ್ನು ಈ ಗುರುತಿನಿಂದ ದೂರವಿಡಬೇಕು.

ಎಸ್ಕಲೇಟರ್ ಬದಿಯಲ್ಲಿ ಬ್ರಷ್ ಇರುವುದೇಕೆ..?

 ಗೋಡೆ ಮತ್ತು ಬದಿಯ ನಡುವಿನ ಅಂತರವನ್ನು ತುಂಬುವ ಉದ್ದೇಶದಿಂದ ಎಸ್ಕಲೇಟರ್‌ನ ಬದಿಯಲ್ಲಿ  ಬ್ರಷ್ ಹಾಕಲಾಗುತ್ತದೆ. ಎಸ್ಕಲೇಟರ್ ಒಳಗೆ ಏನಾದರೂ ಸಿಕ್ಕಿಹಾಕಿಕೊಂಡರೆ ಎಸ್ಕಲೇಟರ್ ಹಾಳಾಗುವ ಭಯವಿರುತ್ತದೆ. ಆದ್ರೆ ಎಸ್ಕಲೇಟರ್‌ನ ಬದಿಯಲ್ಲಿರುವ ಈ ಬ್ರಷ್‌ ಯಾವುದೇ ವಸ್ತು ಒಳಗೆ ಹೋಗದಂತೆ ತಡೆಯುತ್ತದೆ. ಶೂ ಲೇಸ್, ಸ್ಕಾರ್ಪ್ ಸೇರಿದಂತೆ ಯಾವುದೇ ಸಣ್ಣ ವಸ್ತು ಕೂಡ ಎಸ್ಕಲೇಟರ್ ಈ ಗ್ಯಾಪ್ ನಲ್ಲಿ ಒಳಗೆ ಹೋಗದಂತೆ ತಡೆಯುತ್ತದೆ.

ಈ  ಬ್ರಷ್ ನ ಕಾರ್ಯವೇನು? : 

ಎಸ್ಕಲೇಟರ್ ಮೇಲೆ ಪ್ರತಿ ದಿನ ನೂರಾರು ಜನರು ಓಡಾಡ್ತಿರುತ್ತಾರೆ. ಧೂಳಿನ ಕಣದಿಂದ ಹಿಡಿದು ಅನೇಕ ವಸ್ತುಗಳು ಬೀಳುವ ಸಾಧ್ಯತೆಯಿರುತ್ತದೆ. ಅದನ್ನು ಒಳಗೆ ಹೋಗದಂತೆ ಎಸ್ಕಲೇಟರ್ ತಡೆಯುತ್ತದೆ. ಬ್ರಷ್, ವಸ್ತುಗಳನ್ನು ಬೇರೆಡೆ ತಿರುಗಿಸುತ್ತದೆ. ಅದನ್ನು ಒಳಗೆ ಬಿಡುವುದಿಲ್ಲ.

ಬ್ರಷ್ ಹೇಗೆ ರಕ್ಷಿಸುತ್ತದೆ? :

 ಎಸ್ಕಲೇಟರ್ ಬದಿಯಲ್ಲಿ ಅಳವಡಿಸಲಾಗಿರುವ ಈ ಬ್ರಷ್ ನಮ್ಮ ಜೀವವನ್ನೂ ಉಳಿಸುತ್ತದೆ. ನಾವು ಎಸ್ಕಲೇಟರ್ ಅನ್ನು ಹತ್ತಿದಾಗ, ನಮ್ಮ ಕಾಲುಗಳು, ಸ್ಕಾರ್ಫ್ ಅಥವಾ ಬಟ್ಟೆಯ ಯಾವುದೇ ಭಾಗವು ಅದರಲ್ಲಿ ಸಿಲುಕಿಕೊಳ್ಳಬಹುದು. ಇದ್ರಿಂದಾಗಿ ನಮಗೆ ಗಂಭೀರ ಗಾಯವಾಗುವ ಸಾಧ್ಯತೆಯಿದೆ. ಆದರೆ ಎಸ್ಕಲೇಟರ್‌ನಲ್ಲಿರುವ ಬ್ರಷ್‌ ಈ ಅಪಾಯವನ್ನು ತಪ್ಪಿಸುತ್ತದೆ. ನಮ್ಮನ್ನು ಸುರಕ್ಷಿತವಾಗಿಡುತ್ತದೆ. ನಮ್ಮ ಕಾಲು ಬ್ರಷ್ ಬಳಿ ಹೋದ್ರೆ ಅದು ನಮಗೆ ಎಚ್ಚರಿಕೆ ಸೂಚಕವಾಗಿ ಕೆಲಸ ಮಾಡುತ್ತದೆ. ಎಸ್ಕಲೇಟರ್ ಬಳಸುವಾಗ,ಅನೇಕ ಜನರು ಈ ಬ್ರಷ್‌ನಿಂದ ಶೂಗಳನ್ನು ಸ್ವಚ್ಛಗೊಳಿಸಲು ಪ್ರಯತ್ನಿಸುತ್ತಾರೆ. ಇದನ್ನು ಅಪ್ಪಿತಪ್ಪಿಯೂ ಮಾಡಬಾರದು. ಏಕೆಂದರೆ ಇದು ಹಾನಿಯನ್ನುಂಟುಮಾಡುವ ಸಾಧ್ಯ ಇದೆ.

 

ಸೆಪ್ಟೆಂಬರ್ 6 ರಂದು ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ ಎನ್-ಲೈನ್ ಕಾರು

mRNA ಕೋವಿಡ್ ಲಸಿಕೆಯ ಪೇಟೆಂಟ್ ಉಲ್ಲಂಘನೆ:ಮಾಡೆರ್ನಾದಿಂದ ಫೈಜರ್, ಬಯೋಎನ್ಟೆಕ್ ವಿರುದ್ಧ ಮೊಕದ್ದಮೆ ಹೂಡಿಕೆ

ಸದ್ಯದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಕಿಯಾ ಸೊನೆಟ್ ಎಕ್ಸ್-ಲೈನ್ ಕಾರು

- Advertisement -

Latest Posts

Don't Miss