Sunday, December 22, 2024

Latest Posts

ಮಂಗಳೂರು: ಹೊಂಡ ಅಗೆಯುತ್ತಿದ್ದ ಸಂದರ್ಭದಲ್ಲಿ ಪ್ರಾಚೀನ ಗುಹೆ, ಪರಿಕರಗಳು ಪತ್ತೆ

- Advertisement -

Manglore News:

ದಕ್ಷಿಣ ಕನ್ನಡದ ಕಡಬದಲ್ಲಿ ಕಲ್ಲೆಂಬಿ ವಿಶ್ವನಾಥ ಗೌಡ ಎಂಬುವರಿಗೆ ಸೇರಿದ ಜಮೀನಿನಲ್ಲಿ ಗುಹೆ ಹಾಗೂ ನೌಕೆಗಳು ಪತ್ತೆಯಾಗಿವೆ. ಅಡಿಕೆ ಸಸಿಗಳನ್ನು ನೆಡುವ ಸಲುವಾಗಿ ದೊಡ್ಡ ಗುಂಡಿಯನ್ನು ಅಗೆದಾಗ, ಇದ್ದಕ್ಕಿದ್ದಂತೆ ಗುಹೆ ಮತ್ತು ಮಣ್ಣಿನ ಪಾತ್ರೆಗಳು ಕಂಡುಬಂದಿವೆ.

ಕೆಲಸದ ವೇಳೆ ಇದ್ದಕ್ಕಿದ್ದಂತೆ ಮಣ್ಣಿನಲ್ಲಿ ಸಡಿಲ ಭಾಗ ಗೋಚರಿಸಿದ್ದು, ಗುಹೆಯಾಕಾರ ಮಾದರಿ ಪತ್ತೆಯಾಗಿದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಣ್ಣಿನ ಮಡಿಕೆ, ಬಟ್ಟಲು, ಸಣ್ಣ-ಪುಟ್ಟ ಪಾತ್ರೆಗಳ ಅವಶೇಷಗಳು ದೊರಕಿವೆ. ವಿಶೇಷ ರೀತಿಯ ಗುಹೆಯಲ್ಲಿ ಎರಡು ಅಂತರದ ಕೋಣೆಗಳಿರುವಂತೆ ಕಂಡುಬಂದಿದೆ.

ಪರಿಕರ ಅಧ್ಯಯನ ಹಂತದಲ್ಲಿ ಹಿಂದಿನ ಕಾಲದಲ್ಲಿ ಉದ್ದೇಶಪೂರ್ವಕವಾಗಿ ಸಣ್ಣ ಮಾದರಿಯ ಗುಹೆ ತೋಡಿ ಪರಿಕರಗಳನ್ನು ಇದರಲ್ಲಿ ಹೂತು ಮುಚ್ಚಿರಬಹುದೇ ಎಂಬ ಮಾತು ಕೇಳಿಬರುತ್ತಿದೆ.

ಉಡುಪಿಯ ಶಿರ್ವ ಎಂಎಸ್‌ಆರ್‌ಎಸ್‌ ಕಾಲೇಜಿನ ಪ್ರಾಚ್ಯವಸ್ತು ಸಂಶೋಧಕ ಪ್ರೊ| ಟಿ. ಮುರುಗೇಶಿ ಅವರು ಸ್ಥಳಕ್ಕೆ ಆಗಮಿಸಿ ಪರಿಕರಗಳನ್ನು ಸಂಗ್ರಹಿಸಿ, ಅಧ್ಯಯನ ನಡೆಸುತ್ತಿದ್ದಾರೆ. ಈಗಾಗಲೇ ಪರಿಕರಗಳನ್ನು ತೊಳೆದು ಸ್ವಚ್ಛಗೊಳಿಸಿದ್ದೇವೆ ಮುಂದಿನ ಒಂದೆರಡು ದಿನದಲ್ಲಿ ವರದಿ ನೀಡಲಾಗುವುದು ಎಂದು ತಿಳಿದು ಬಂದಿದೆ.

ಗಣೇಶನ ಅವತಾರದಲ್ಲಿ ಡಿಬಾಸ್, ಅಪ್ಪು, ಯಶ್.!

ಮಂಡ್ಯ: ರಾತ್ರಿ ಸುರಿದ ಧಾರಾಕಾರ ಮಳೆ ಕೊಚ್ಚಿ ಹೋದ ರಸ್ತೆ, ಒಡೆದ ವಿ.ಸಿ ನಾಲೆ

ಜಮೀನಿನಲ್ಲಿ ಮಲಗಿದ್ದ ಮಹಿಳೆ ಮೇಲೆ ಹೆಡೆಬಿಚ್ಚಿ ನಿಂತ ನಾಗರಾಜ…!

- Advertisement -

Latest Posts

Don't Miss