ಚಿತ್ರದುರ್ಗದ ಮುರುಘಾ ಮಠದ ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲು

ಮೈಸೂರು: ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎನ್ನುವ ಆರೋಪದಲ್ಲಿ, ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.

ಮೈಸೂರಿನ ಒಡನಾಡಿ ಸಂಸ್ಥೆಯಲ್ಲಿ ಮಕ್ಕಳನ್ನು ಕೌನ್ಸಿಲಿಂಗ್ ಗೆ ನಾಲ್ಕು ರೌಂಡ್ ಒಳಪಡಿಸಲಾಗಿದೆ. ಮಕ್ಕಳ ರಕ್ಷಣಾ ಘಟಕದ ಮುಂದೆಯೂ ವಿದ್ಯಾರ್ಥಿನಿಯರನ್ನು ಹಾಜರುಪಡಿಸಲಾಗಿದೆ. ಅಲ್ಲಿಯೂ ವಿದ್ಯಾರ್ಥಿನಿಯರು ನೀಡಿದಂತ ಹೇಳಿಕೆ ಹಿನ್ನಲೆಯಲ್ಲಿ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಮುರುಘಾ ಶರಣರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಪೊಲೀಸರು ದಾಖಲಿಸಿರುವಂತ ಎಫ್ಐಆರ್ ನಲ್ಲಿ ಮುರುಘಾ ಶರಣರನ್ನು ಎ.1 ಆರೋಪಿಯನ್ನಾಗಿ ಮಾಡಲಾಗಿದೆ. ಆ ಬಳಿಕ ಎ2 ಆರೋಪಿಯಾಗಿ ಹಾಸ್ಟೆಲ್ ವಾರ್ಡನ್, ಎ3 ಬಸವಾದಿತ್ಯ, ಎ4 ಪರಮಶಿವಯ್ಯ ಹಾಗೂ ಎ.5 ವಕೀಲ ಗಂಗಾಧರಯ್ಯ ಆಗಿದ್ದಾರೆ.

About The Author