ಬಸ್ಸಿನಲ್ಲಿ ನಾಗರಹಾವು ಪ್ರತ್ಯಕ್ಷ…! ಪ್ರಯಾಣಿಕರ ಎದೆ ಢವ ಢವ…!

Chikkaballapura News:

ಚಿಕ್ಕಬಳ್ಳಾಪುರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಬಸ್ಸೊಂದು ಪ್ರಯಾಣಿಕರನ್ನು ಹತ್ತಿಸಿಕೊಂಡು ಶಿಡ್ಲಘಟ್ಟ ಪಟ್ಟಣಕ್ಕೆ ಹೊರಟಿತ್ತು. ಮಧ್ಯೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಶಿಡ್ಲಘಟ್ಟ ರಸ್ತೆಯ ಮಿನಿ ಬಸ್ ನಿಲ್ದಾಣದ ಬಳಿ ಬಸ್ ನಿಲ್ಲುತ್ತಿದ್ದಂತೆ… ಬಸ್ಸಿನಲ್ಲಿ ಮಾರುದ್ದ ನಾಗರ ಹಾವೊಂದು ಪ್ರತ್ಯಕ್ಷವಾಗಿ ಹೆಡೆ ಎತ್ತಿತ್ತು. ಇದನ್ನು ಕಂಡ ಪ್ರಯಾಣಿಕರು ಕಿರುಚಾಡುತ್ತಲೆ… ಒಬ್ಬರ ಮೇಲೊಬ್ಬರು ಬಿದ್ದು ಬಸ್ಸಿನಿಂದ ಇಳಿಯಲು ಯತ್ನಿಸಿದರು. ತಕ್ಷಣ ಬಸ್ ಚಾಲಕ ಬಸ್ ನಿಲ್ಲಿಸಿ ಉರುಗ ತಜ್ಞ ಪೃಥ್ವಿರಾಜ್ ರನ್ನು ಕರೆಸಿ ಹಾವನ್ನು ರಕ್ಷಣೆ ಮಾಡಿಸಿದ್ದಾರೆ;

ಇನ್ನು ನಾಗರಹಾವು ಜನರ ಚೀರಾಟಕ್ಕೆ ಭಯಗೊಂಡು ಬಸ್ಸಿನಲ್ಲಿರುವ ತೂತುಗಳಲ್ಲಿ ತೂರಿಕೊಂಡಿತ್ತು, ಸ್ಥಳಕ್ಕೆ ಬಂದ ಉರುಗ ತಜ್ಞ ಪೃಥ್ವಿರಾಜ್ ಬಸ್ಸಿನ ಇಂಚಿಂಚೂ ಹುಡುಕಾಡಿ… ಕೊನೆಗೆ ಬಸ್ಸಿನ ಇಂಜಿನ್ ಮುಂಭಾಗ ಹಾವನ್ನು ಪತ್ತೆ ಹಚ್ಚಿ, ಅದನ್ನು ರಕ್ಷಣೆ ಮಾಡಿ ಕಾಡಿಗೆ ಅಟ್ಟಿದರು. ಪೃಥ್ವಿರಾಜ್ ಹಾವು ಹಿಡಿದ ನಂತರವೇ ಬಸ್ಸಿನಲ್ಲಿದ್ದ ಕಂಡಕ್ಟರ್ ನಿಟ್ಟುಸಿರು ಬಿಟ್ಟಿದ್ದು! ಪ್ರಯಾಣ  ಮುಂದುವರೆಸಿದರು.

ಮಂಡ್ಯದಲ್ಲಿ ಮಳೆತಂದ ಅವಾಂತರ, ನೊಂದ ಮಹಿಳೆಯ ಕಣ್ಣೀರು

ಮಂಗಳೂರು: ಹೊಂಡ ಅಗೆಯುತ್ತಿದ್ದ ಸಂದರ್ಭದಲ್ಲಿ ಪ್ರಾಚೀನ ಗುಹೆ, ಪರಿಕರಗಳು ಪತ್ತೆ

ಜಮೀನಿನಲ್ಲಿ ಮಲಗಿದ್ದ ಮಹಿಳೆ ಮೇಲೆ ಹೆಡೆಬಿಚ್ಚಿ ನಿಂತ ನಾಗರಾಜ…!

About The Author