Maharashtra News:
ಔರಂಗಾಬಾದ್ ನಲ್ಲಿ ಇಬ್ಬರು ಹುಡುಗಿಯರು ಒಬ್ಬ ಹುಡುಗನಿಗಾಗಿ ಬೀದಿಯಲ್ಲಿ ರಂಪಾಟ ನಡೆಸಿದ್ದಾರೆ. ಒಬ್ಬ ಹುಡುಗ ಇಬ್ಬರು ಹುಡುಗಿಯರ ಜೊತೆ ಸುತ್ತಾಡಿದ್ದಾನೆ. ಬೆಳಗ್ಗೆ ಒಬ್ಬಳ ಜೊತೆ ಮಾರ್ಕೆಟ್ ಸೇರಿದಂತೆ ಹಲವೆಡೆ ಸುತ್ತಾಡಿದ ಬಾಯ್‌ಫ್ರೆಂಡ್, ಆಕೆಯನ್ನು ಮನೆಗೆ ಸೇರಿಸಿ ಬಳಿಕ ಮತ್ತೊಬ್ಬಳ ಜೊತೆ ಸುತ್ತಾಡಿದ್ದಾನೆ. ಈ ಸುದ್ದಿ ಮೊದಲ ಹುಡಿಗಿಯ ಕಿವಿಗೆ ಬಿದ್ದಿದೆ. ನೇರವಾಗಿ ಮಾರ್ಕೆಟ್‌ಗೆ ಆಗಮಿಸಿದ್ದಾಳೆ.. ತನ್ನ ಹುಡುಗನನ್ನು ಬುಟ್ಟಿಗೆ ಹಾಕಿಕೊಳ್ಳಲು ಈಕೆ ಯತ್ನಿಸುತ್ತಿದ್ದಾಳೆ ಎಂದು ಮೊದಲ ಹುಡುಗಿ ನೇರವಾಗಿ ಈಕೆಯ ಬಳಿ ಬಂದಿದ್ದಾಳೆ. ಕೂಗಾಟ, ಚೀರಾಟಕ್ಕೆ ಇಡೀ ಜನ ಸೇರಿದೆ. ಕೆಲವರು ಜಗಳ ಬಿಡಿಸುವ ಪ್ರಯತ್ನ ಮಾಡಿದ್ದಾರೆ. ಇದು ಒಬ್ಬ ಬಾಯ್‌ಫ್ರೆಂಡ್‌ಗಾಗಿ ನಡೆಯುತ್ತಿರುವ ಜಗಳ ಅನ್ನೋದು ಖಚಿತಗೊಂಡಿದೆ. ಈ ಹುಡುಗಿಯರು ಯಾವ ಹುಡುಗನಿಗಾಗಿ ಕಿತ್ತಾಡುತ್ತಿದ್ದರೋ, ಅದೇ ಹುಡುಗ ಅಲ್ಲೆ ನಿಂತು ಇವರ ಜಗಳ ನೋಡುತ್ತಿದ್ದ. ಆದರೆ ಜಟಾಪಟಿ ತಾರಕಕ್ಕೇರುತ್ತಿದ್ದಂತೆ ಬಾಯ್‌ಫ್ರೆಂಡ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇತ್ತ ನೆರೆದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರು ಹುಡುಗಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.