ಚಿಕ್ಕ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 20 ವರ್ಷ ಶಿಕ್ಷೆ ಹಾಗೂ ದಂಡ

ಹಾವೇರಿ: ಚಿಕ್ಕ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮಾಗೋಡ ಗ್ರಾಮದ ಹನಮಂತಗೌಡ ಶಿವಲಿಂಗಗೌಡ ಪಾಟೀಲ ಎಂಬ ಆರೋಪಿಗೆ 20 ವರ್ಷ ಶಿಕ್ಷೆ ಹಾಗೂ ರೂ.50 ಸಾವಿರ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ(ಶೀಘ್ರಗತಿ ನ್ಯಾಯಾಲಯ-1) ನ್ಯಾಯಾಧೀಶರಾದ ನಿಂಗೌಡ ಪಾಟೀಲ ಅವರು ತೀರ್ಪು ನೀಡಿದ್ದಾರೆ.

ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ರಾಣೆಬೆನ್ನೂರ ಗ್ರಾಮೀಣ ವೃತ್ತದ ತನಿಖಾಧಿಕಾರಿ ಸಿ.ಪಿ.ಐ ಸುರೇಶ ಸಗರಿ ಅವರು ತನಿಖೆ ಮಾಡಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಈ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಯಾಧೀಶರು ಪ್ರಕರಣದಲ್ಲಿ ಆರೋಪಿತನಾದ ಹನಮಂತಗೌಡ ಶಿವಲಿಂಗಗೌಡ ಪಾಟೀಲ ಮೇಲಿನ ಅಪಾದನೆಗಳಾದ ಕಲಂ 376(ಎ)(ಬಿ) ಭಾ.ದಂ.ಸಂ ಮತ್ತು ಕಲಂ: 4,6,8 ಪೋಕ್ಸೋ ಅಧಿನಿಯಮ-2012 ರಡಿ ಆರೋಪಿತನಿಗೆ 20 ವರ್ಷಗಳ ಶಿಕ್ಷೆ ಹಾಗೂ ರೂ.50,000/- ಗಳ ದಂಡವನ್ನು ವಿಧಿಸಿರುತ್ತಾರೆ.

ಈ ದಂಡದ ಹಣದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ನೊಂದ ಮಗುವಿಗೆ ರೂ.30,000/-ಗಳ ಪರಿಹಾರ ಹಾಗೂ ಕರ್ನಾಟಕ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ ಪರಿಹಾರ ನಿಧಿಯಿಂದ ನೊಂದ ಬಾಲಕಿಗೆ ರೂ.5,00,000/-ಗಳ ಪರಿಹಾರವನ್ನು ನೀಡಬೇಕೆಂದು ಆದೇಶ ಮಾಡಿ ತೀರ್ಪು ನೀಡಿರುತ್ತಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸಿದ್ಧಾರೂಢ ಎಂ ಗೆಜ್ಜಿಹಳ್ಳಿ ಅವರು ವಾದ ಮಂಡಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author