Technology News:
ಪ್ರಿನ್ಸೆಸ್ ಡಯಾನಾ ಅವರು ಬ್ರಿಟಿಷ್ ರಾಜಮನೆತನದ ಸದಸ್ಯರಾಗಿದ್ದರು. ಬ್ರಿಟಿಷ್ ರಾಜಕುಮಾರರಾಗಿದ್ದ ಚಾರ್ಲ್ಸ್ ಅವರ ಮೊದಲ ಪತ್ನಿಯಾಗಿದ್ದು, ಕಾರಣಾಂತರಗಳಿಂದ ಚಾರ್ಲ್ಸ್ ಅವರೊಂದಿಗೆ ವಿಚ್ಚೇದನ ಪಡೆದಿದ್ದರು. ಬಳಿಕ ಡಯಾನಾ ಅವರ ಕ್ರಿಯಾಶೀಲತೆ ಮತ್ತು ಗ್ಲಾಮರ್ನಿಂದಾಗಿ ಅಂತರರಾಷ್ಟ್ರೀಯ ಐಕಾನ್ ಆಗಿ ಮಿಂಚಿದ್ದರು.
ತಮ್ಮ ಆಸ್ತಿಯಲ್ಲಿ ಬಹುಪಾಲನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದ ಅವರು ಹಲವು ಐಷಾರಾಮಿ ಕಾರುಗಳು, ಬೆಳೆಬಾಳುವ ವಸ್ತುಗಳ ಮಾಲೀಕರಾಗಿದ್ದರು. ಅವರು ಬದುಕಿದ್ದಾಗ ಬಳಸಿದ್ದ ಕಾರೊಂದು ಈಗ ಹರಾಜಾಗಿದೆ. ಅವರು ಉಸಿರು ಚೆಲ್ಲಿ 25 ವರ್ಷ ಕಳೆದರೂ ಸಾರ್ವಜನಿಕರಲ್ಲಿ ಅವರಿಗಿರುವ ಜನಪ್ರಿಯತೆಯಿಂದಲೇ ಅವರ ಕಾರು ಭಾರೀ ಮೊತ್ತಕ್ಕೆ ಹರಾಜಾಗಿದೆ ಎಂದು ಮೂಲಗಳು ತಿಳಿಸಿವೆ.
ಫೋರ್ಡ್ ಎಸ್ಕಾರ್ಟ್ ಆರ್ಎಸ್ ಟರ್ಬೊ ಕಾರು ಪ್ರಿನ್ಸೆಸ್ ಡಯಾನಾ ಬಳಸುವ ಕಾರುಗಳಲ್ಲಿ ಒಂದಾಗಿದೆ. ಕೆಲವು ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಅವರು ಬಳಸಿದ ವಾಹನಗಳಲ್ಲಿ ಇದು ಕೂಡ ಒಂದಾಗಿದೆ. ಈ ವಾಹನವನ್ನು ಕಳೆದ ಶನಿವಾರ ಹರಾಜು ಮಾಡಲಾಯಿತು.
ಈ ಹರಾಜಿನಲ್ಲಿ ಡಯಾನಾ ಫೇವರೆಟ್ ಕಾರು ನಂಬಲಾಗದಷ್ಟು ಹೆಚ್ಚಿನ ಬೆಲೆಗೆ ಹರಾಜಾಗಿದೆ. ಸುಮಾರು 6,50,000 ಸಾವಿರ ಪೌಂಡ್ಗಳಿಗೆ ವಾಹನ ಹರಾಜಾಗಿದೆ ಎಂದು ದೇಶದ ಮಾಧ್ಯಮಗಳು ವರದಿ ಮಾಡಿವೆ. ಇದು ಭಾರತೀಯ ಕರೆನ್ಸಿಯಲ್ಲಿ ರೂ. 5.20 ಕೋಟಿಗೂ ಹೆಚ್ಚು. ಪ್ರಿನ್ಸೆಸ್ ಡಯಾನಾ ಬಳಸುತ್ತಿದ್ದ ಕಾರನ್ನು ಉದ್ಯಮಿಯೊಬ್ಬರು ಖರೀದಿಸಿದ್ದಾರೆ.
ಖರೀದಿದಾರರ ಹೆಸರು ಮತ್ತು ಇತರ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಈ ಕಾರನ್ನು ಸಿಲ್ವರ್ಸ್ಟೋನ್ ಹರಾಜು ಸಂಸ್ಥೆ ಮಾರಾಟಕ್ಕೆ ತಂದಿದೆ. ಇದು ಕ್ಲಾಸಿಕ್ ಕಾರುಗಳನ್ನು ಹರಾಜು ಮಾಡಲು ಮೀಸಲಾಗಿರುವ ವಿಶೇಷ ಕಂಪನಿಯಾಗಿದೆ. ಕಂಪನಿಯ ಪ್ರಕಾರ, ಹರಾಜು ಸಮಯದಲ್ಲಿ ಕಾರನ್ನು ಖರೀದಿಸಲು ಸಾಕಷ್ಟು ಪೈಪೋಟಿ ಇತ್ತು.
ಈ ಹಂತದಲ್ಲಿ ರಾಜಕುಮಾರಿಯ ಕಾರು ಅಂತಿಮವಾಗಿ 6.50 ಲಕ್ಷ ಪೌಂಡ್ಗಳಿಗೆ ಹರಾಜಾಗಿದೆ. ಇದು ನಿಗದಿತ ಬೆಲೆಗಿಂತ ಅಧಿಕವಾಗಿದೆ ಎಂದು ಹರಾಜು ಸಂಸ್ಥೆ ತಿಳಿಸಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಕಂಪನಿಯು ನಿರೀಕ್ಷಿಸಿದ್ದಕ್ಕಿಂತ ಶೇಕಡಾ 12.5 ರಷ್ಟು ಹೆಚ್ಚಿನ ಪ್ರೀಮಿಯಂಗೆ ಕಾರನ್ನು ಹರಾಜು ಮಾಡಲಾಗಿದೆ.
ಮಾರುಕಟ್ಟೆಗೆ ಬಂತು ಏರ್ ಪ್ಯೂರಿಫೈಯರ್ ಸೌಲಭ್ಯ ಹೊಂದಿರುವ ವಿಶೇಷ ಹೆಲ್ಮೆಟ್..!
30 ನಿಮಿಷಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಮುಂಗಡ-ಬುಕ್ಕಿಂಗ್ ಪಡೆದ ಮಹೀಂದ್ರಾ ಸ್ಕಾರ್ಪಿಯೋ ಎನ್ …!