International News:
ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಸ್ಥಳಾಂತರಿಸುವಾಗ ಪ್ರವಾಸಿಯಾಗಿದ್ದ 34 ವರ್ಷದ ಭಾರತೀಯ ಗರ್ಭಿಣಿ ಸಾವನ್ನಪ್ಪಿದ್ದ ಹಿನ್ನಲೆಯಲ್ಲಿ ಪೋರ್ಚುಗಲ್ನ ಆರೋಗ್ಯ ಸಚಿವೆ ಮಾರ್ಟಾ ಟೆಮಿಡೊ ಅವರು ಆಗಸ್ಟ್ 31 ರಂದು ರಾಜೀನಾಮೆ ನೀಡಿದ್ದಾರೆ.
ಆಸ್ಪತ್ರೆಯೊಂದರಲ್ಲಿ ಹಾಸಿಗೆ ಲಭ್ಯವಿಲ್ಲದ ಕಾರಣ ಒಂದು ಆಸ್ಪತ್ರೆಯಿಂದ ಇನ್ನೊಂದಕ್ಕೆ ಸ್ಥಳಾಂತರಿಸುವಾಗ ಭಾರತೀಯ ಮೂಲದ ಗರ್ಭಿಣಿಯೂ ಹೃದಯ ಸ್ತಂಭನಕ್ಕೆ ಒಳಗಾಗಿ ಲಿಸ್ಬನ್ನಲ್ಲಿ ಸಾವನ್ನಪ್ಪಿದ್ದರು
ಪೋರ್ಚುಗೀಸ್ ಸರ್ಕಾರವು ಮಾತೃತ್ವ ಘಟಕಗಳಲ್ಲಿನ ಸಿಬ್ಬಂದಿ ಕೊರತೆಯನ್ನು ನಿಭಾಯಿಸುವ ಬಗ್ಗೆ ಟೀಕೆಗಳ ಸರಮಾಲೆಯನ್ನೇ ಎದುರಿಸುತ್ತಿದೆ. ಅವುಗಳಲ್ಲಿ ಕೆಲವನ್ನು ತಾತ್ಕಾಲಿಕವಾಗಿ ಮುಚ್ಚುವ ಮೂಲಕ ಮತ್ತು ಗರ್ಭಿಣಿಯರನ್ನು ಆಸ್ಪತ್ರೆಗಳ ನಡುವೆ ಸ್ಥಳಾಂತರವಾಗುವಂತೆ ಅಪಾಯಕಾರಿ ಒತ್ತಡ ಹಾಕಲಾಗುತ್ತದೆ .
ಲಿಸ್ಬನ್ನ ಸಾಂಟಾ ಮಾರಿಯಾ ಆಸ್ಪತ್ರೆಯಿಂದ – ಪೋರ್ಚುಗಲ್ನ ಅತಿದೊಡ್ಡ ಆಸ್ಪತ್ರೆಗೆ ಸ್ಥಳಾಂತರಿಸುವಾಗ ಗರ್ಭಿಣಿ ಪ್ರವಾಸಿ ಸಾವನ್ನಪ್ಪಿದ್ದರು. ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಮತ್ತು ಆರೋಗ್ಯ ಸೇವೆಯು ಸಮಯಕ್ಕೆ ಸರಿಯಾಗಿ ಸ್ಪಂದಿಸದ ಕಾರಣ ಈ ಘಟನೆ ನಡೆದಿದ್ದು, ಇದೀಗ ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗಳಲ್ಲಿ ಅಪಾಯಕಾರಿ ಸ್ಥಿತಿಯನ್ನು ಎದುರಿಸುವಂತೆ ಮಾಡಿದ್ದಕ್ಕಾಗಿ ಗರ್ಭಿಣಿಯರ ತುರ್ತು ಆರೈಕೆ ಸೇವೆಗಳನ್ನು ಮುಚ್ಚುವ ಬಗ್ಗೆ ತೀವ್ರ ಟೀಕೆಗೆ ಒಳಗಾದ ನಂತರ ಟೆಮಿಡೋ ರಾಜೀನಾಮೆ ನೀಡಿದ್ದಾರೆ .
ಇನ್ನೊಂದೆಡೆ ತುರ್ತು ಸಿಸೇರಿಯನ್ ನಂತರ ಆಕೆಯ ಮಗುವನ್ನು ಆರೋಗ್ಯವಾಗಿ ಹೆರಿಗೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆಯ ಸಾವಿನ ತನಿಖೆಯನ್ನು ಪ್ರಾರಂಭಿಸಲಾಗಿದೆ.
ಅಮೇರಿಕಾದಲ್ಲಿ ಮೆಕ್ಸಿಕಾನ್ ಮಹಿಳೆಯಿಂದ ಭಾರತೀಯರಿಗೆ ಜನಾಂಗೀಯ ನಿಂದನೆ..!