- Advertisement -
ನವದೆಹಲಿ: ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ಸೆಪ್ಟೆಂಬರ್ 1, ಗುರುವಾರದಂದು ದೆಹಲಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯಲ್ಲಿ ಗೆದ್ದಿದೆ.
70 ಸದಸ್ಯ ಬಲದ ವಿಧಾನಸಭೆಯಲ್ಲಿ 62 ಸ್ಥಾನಗಳ ಬಹುಮತವನ್ನು ಹೊಂದಿರುವ ಪಕ್ಷವು 58 ಮತಗಳೊಂದಿಗೆ ಗೆದ್ದಿದೆ.
ಬಿಜೆಪಿ ಶಾಸಕರು ಹೊರಕ್ಕೆ
ಡೆಪ್ಯುಟಿ ಸ್ಪೀಕರ್ ರಾಖಿ ಬಿರ್ಲಾ ಅವರೊಂದಿಗೆ ವಾಗ್ವಾದ ನಡೆಸಿದ ನಂತರ ಮೂವರು ಬಿಜೆಪಿ ಶಾಸಕರನ್ನು ಇಡೀ ಅಧಿವೇಶನಕ್ಕಾಗಿ ದೆಹಲಿ ವಿಧಾನಸಭೆಯಿಂದ ಹೊರಗೆ ಕಳುಹಿಸಲಾಯಿತು.
ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಮೊದಲು ತಮ್ಮ ಗಮನ ಸೆಳೆಯುವ ನೋಟಿಸ್ ಗಳನ್ನು ತೆಗೆದುಕೊಳ್ಳುವಂತೆ ಬಿಜೆಪಿ ಶಾಸಕರ ಬೇಡಿಕೆಗೆ ಬಿರ್ಲಾ ಕಿವಿಗೊಡಲಿಲ್ಲ, ಇದು ಅವರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.
ಬಿಜೆಪಿಯ ಉಳಿದ ಶಾಸಕರು ಸ್ವಲ್ಪ ಸಮಯದ ನಂತರ ಸದನದಿಂದ ಹೊರನಡೆದರು.
- Advertisement -

