ಸೇವಾ ಸಿಂಧು ಪೋರ್ಟಲ್ ನಲ್ಲಿ ವಿದ್ಯಾರ್ಥಿ ಬಸ್ ಪಾಸ್‌ಗೆ ಅರ್ಜಿ ಆಹ್ವಾನ

Mandya News:

ಮಂಡ್ಯ : ಕ.ರಾ.ರ.ಸಾ.ನಿಗಮದ ವತಿಯಿಂದ  ಪ್ರಸ್ತುತ ಪದವಿ/ ಸ್ನಾತಕೋತ್ತರ/ ಡಿಪ್ಲೋಮೋ/ ಕಾನೂನು/ಬಿಇ ಹಾಗೂ ಇತರೆ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ 2022-23ನೇ ಸಾಲಿನ ಹೊಸ ಬಸ್ ಪಾಸ್ ವಿತರಣೆ ಪ್ರಾರಂಭಿಸಿದ್ದು, ಅಂತಿಮ ಸೆಮಿಸ್ಟರ್/ಅಂತಿಮ ವರ್ಷ ಹೊರತುಪಡಿಸಿ ಇನ್ನಿತರೆ ಸೆಮಿಸ್ಟರ್/ ವರ್ಷದ ಪದವಿ/ ಸ್ನಾತಕೋತ್ತರ/ ಡಿಪ್ಲೋಮೋ/ ಕಾನೂನು/ಬಿಇ ವಿದ್ಯಾರ್ಥಿಗಳಿಗೆ ಹಳೆಯ ಬಸ್ ಪಾಸ್ ಹಾಗೂ ರಶೀತಿ ಬಳಸಿ ಬಸ್ ಪಾಸ್ ವಿಸ್ತರಣೆ ಇರದ ಕಾರಣ ತಪ್ಪದೇ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ ಕಡ್ಡಾಯವಾಗಿ ಹೊಸ ಪಾಸ್‌ಗಳನ್ನು ಪಡೆಯಬಹುದಾಗಿರುತ್ತದೆ.

ಪದವಿ/ ಸ್ನಾತಕೋತ್ತರ / ಡಿಪ್ಲೋಮೋ / ಕಾನೂನು / ಬಿಇ ಅಂತಿಮ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2021-22ನೇ ಸಾಲಿನ ಹಳೆಯ ಬಸ್ ಪಾಸ್ ಅನ್ನು ಹಾಗೂ ಆಗಸ್ಟ್ 31 ರವರೆಗೆ ಅವಧಿ ವಿಸ್ತರಣೆ ಸಮಯದಲ್ಲಿನ ನೀಡಿರುವ ರಶೀತಿ ಎರಡನ್ನೂ ತೋರಿಸಿ ಅಂತಿಮ ಪರೀಕ್ಷೆ ಮುಗಿಯುವವರೆಗೆ ಅಂದರೆ ಅಕ್ಟೋಬರ್ 31 ರÀವರೆಗೆ ಉಚಿತವಾಗಿ ಪ್ರಯಾಣಿಸಲು ಅನುಮತಿಸಲಾಗಿದೆ ಎಂದು ಕ.ರ.ರಾ.ಸ.ನಿಗಮ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

BREAKING NEWS: ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಸಂಸದ ಮುದ್ದಹನುಮೇಗೌಡ ರಾಜೀನಾಮೆ

ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೈವೇ ಅವೈಜ್ಞಾನಿಕ ಕಾಮಗಾರಿಯಿಂದಲೇ ರಾಮನಗರ ಜಿಲ್ಲೆಯಲ್ಲಿ ಪ್ರವಾಹ – HDK

ಬೆಂಗಳೂರು: ಕ್ಷೇಮವನ ಉದ್ಘಾಟಿಸಿದ ಯೋಗಿ ಆದಿತ್ಯನಾಥ್

About The Author