ಅಪ್ಘಾನಿಸ್ಥಾನ: ಪಶ್ಚಿಮ ಆಫ್ಘಾನಿಸ್ತಾನದ ಹೆರಾತ್ ನಗರದ ಮಸೀದಿಯೊಂದರ ಹೊರಗೆ ಶುಕ್ರವಾರ ನಡೆದ ಸ್ಫೋಟದಲ್ಲಿ ತಾಲಿಬಾನ್ ಪರ ಮೌಲ್ವಿ ಮತ್ತು 10ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ.
“ಮುಜೀಬ್ ರೆಹಮಾನ್ ಅನ್ಸಾರಿ ತನ್ನ ಕೆಲವು ಕಾವಲುಗಾರರು ಮತ್ತು ನಾಗರಿಕರೊಂದಿಗೆ ಮಸೀದಿಯ ಕಡೆಗೆ ಹೋಗುವಾಗ ಕೊಲ್ಲಲ್ಪಟ್ಟಿದ್ದಾನೆ” ಎಂದು ಹೆರಾತ್ ಪೊಲೀಸ್ ವಕ್ತಾರ ಮಹಮೂದ್ ರಸೋಲಿ ತಿಳಿಸಿದ್ದಾರೆ.
ಸ್ಫೋಟವು ಎಷ್ಟು ಸಾವುನೋವುಗಳನ್ನು ಉಂಟುಮಾಡಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. 14 ಜನರು ಸಾವನ್ನಪ್ಪಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಮೂಲಗಳನ್ನು ಉಲ್ಲೇಖಿಸಿ ಅಲ್ ಜಜೀರಾ ಮೀಡಿಯಾ ನೆಟ್ವರ್ಕ್ ಹೇಳಿದೆ.




