Saturday, July 5, 2025

Latest Posts

“ಭಾರತದ ಸಮುದ್ರಶಕ್ತಿಗೆ ಇಂದು ಬೃಹತ್ ದಿನ” : ಮೋದಿ

- Advertisement -

Manglore News:

ಭಾರತದ ಸಮುದ್ರ ಶಕ್ತಿಗೆ ಇಂದು ಬಹಳ ದೊಡ್ಡ ದಿನ,ಬೃಹತ್ ದಿನ ಕರಾವಳಿ ಹಾಗೂ ಕರ್ನಾಟಕ ಅಭಿವೃದ್ಧಿಗೆ ಇಂದು ಲೋಕಾರ್ಪಣೆಗೊಳಿಸಿದ ಯೋಜನೆಗಳಿಂದ ಅತ್ಯಂತ ದೊಡ್ಡ ಶಕ್ತಿ ತುಂಬಿದ್ದು, ಭಾರತದ ಬಂದರುಗಳ ಸಾಮರ್ಥ್ಯವು ಈಗ ದ್ವಿಗುಣಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನಲ್ಲಿ  ಹೇಳಿದ್ದಾರೆ.

ನಗರದ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನಡೆದ ಬಂದರು, ಒಳನಾಡು ಜಲಸಾರಿಗೆಗೆ ಸಂಬಂಧಿಸಿದ 3,800 ಕೋಟಿ ರೂ.ಗಳ ಮೊತ್ತದ 8 ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಪ್ರಧಾನ ಮಂತ್ರಿ, “ಮೀನುಗಾರರಿಗೆ ಶಕ್ತಿ ತುಂಬಲು ವಿವಿಧ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿದ್ದೇನೆ. ಈ ಯೋಜನೆಯಿಂದ ವ್ಯಾಪಾರ ಉದ್ಯೋಗ ವ್ಯವಹಾರಕ್ಕೆ ಶಕ್ತಿ ತುಂಬಲಿದೆ. ವಿದೇಶಿ ರಪ್ತು ವ್ಯವಹಾರಕ್ಕೆ ಬಲ ಸಿಗಲಿದೆ. ಕಳೆದ 8 ವರ್ಷಗಳಲ್ಲಿ ದೇಶವು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿದ ರೀತಿಯಿಂದ ಕರ್ನಾಟಕಕ್ಕೆ ಅಪಾರ ಲಾಭವಾಗಿದೆ. ಸಾಗರಮಾಲಾ ಯೋಜನೆಯ ದೊಡ್ಡ ಫಲಾನುಭವಿಗಳಲ್ಲಿ ಕರ್ನಾಟಕವೂ ಒಂದು” ಹೇಳಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಮೂಲ ಸೌಕರ್ಯದ ಬಗ್ಗೆ ಕೆಲಸ ನಡೆಯುತ್ತಿದೆ. ದೇಶವು ಬಂದರು ನೇತೃತ್ವದ ಅಭಿವೃದ್ಧಿಯನ್ನು ಅಭಿವೃದ್ಧಿಯ ಪ್ರಮುಖ ಮಂತ್ರವನ್ನಾಗಿ ಮಾಡಿದೆ.

ಈ ಪ್ರಯತ್ನಗಳ ಪರಿಣಾಮವಾಗಿ, ಕೇವಲ 8 ವರ್ಷಗಳಲ್ಲಿ ಭಾರತದ ಬಂದರುಗಳ ಸಾಮರ್ಥ್ಯವು ಸುಮಾರು ದ್ವಿಗುಣಗೊಂಡಿದೆ. ಮಂಗಳೂರಿನ ಬಂದರಿನಲ್ಲಿ ಅತ್ಯುನ್ನತ ತಂತ್ರಜ್ಞಾನ ಅಳವಡಿಸಲಾಗಿದೆ. ಈ ಯೋಜನೆಗಳಿಂದ ವ್ಯಾಪಾರ, ಉದ್ಯೋಗ ಇನ್ನಷ್ಟು ಅವಕಾಶ ಸಿಗಲಿದೆ ಎಂದು ಹೇಳಿದ್ದಾರೆ.

ಈ ಬಾರಿಯ ಸ್ವಾತಂತ್ರ್ಯ ದಿನದಂದು ನಾನು ಕೆಂಪು ಕೋಟೆಯಿಂದ ಮಾತನಾಡಿದ ಪಂಚಪ್ರಾಣಗಳಲ್ಲಿ ಮೊದಲನೆಯದು ಅಭಿವೃದ್ಧಿ ಹೊಂದಿದ ಭಾರತದ ಸೃಷ್ಟಿಯಾಗಿದೆ. ಎಂದು ಮೋದಿ ಹೇಳಿದ್ದಾರೆ.

ಮಂಗಳೂರು: ಪರಶುರಾಮನ ಪ್ರತಿಮೆ ನೀಡಿ ಮೋದಿಗೆ ಗೌರವ

ಮಂಗಳೂರು: ವೇದಿಕೆಗೆ ಆಗಮಿಸಿದ ಜಗಮೆಚ್ಚಿದ ನಾಯಕ ನರೇಂದ್ರ ಮೋದಿ…!

ಮಂಗಳೂರಿನಲ್ಲಿ ಮೋದಿ ಮೇನಿಯಾ…!

- Advertisement -

Latest Posts

Don't Miss