ಶಿವಮೊಗ್ಗ : ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ತಮ್ಮ ಗುರುತಿನಚೀಟಿಗೆ(ಎಪಿಕ್ ಕಾರ್ಡ್) ನಮೂನೆ-6ಬಿ ಮೂಲಕ ಜೋಡಿಸುವ ಕುರಿತು ದಿನಾಂಕ: 04-09-2022 ಮತ್ತು 18-09-2022 ರ ಭಾನುವಾರಗಳಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿಶೇಷ ಕಾರ್ಯಾಗಾರ ನಡೆಯಲಿದೆ.
ಸದರಿ ದಿನಗಳಂದು ಎಲ್ಲಾ ಮತಗಟ್ಟೆ ಅಧಿಕಾರಿಗಳು ಈ ವಿಶೇಷ ಕಾರ್ಯಗಾರದಲ್ಲಿ ಹಾಜರಿದ್ದು, ಮತದಾರರು ಹಾಜರುಪಡಿಸುವ ಆಧಾರ್ ಸಂಖ್ಯೆಗಳಿಗೆ ಅವರ ಗುರುತಿನ ಚೀಟಿಗಳ ನ್ಯಾಷನಲ್ ವೋಟರ್ ಸರ್ವಿಸ್ ಪೋರ್ಟಲ್(ಎನ್‍ವಿಎಸ್‍ಪಿ) ಮತ್ತು ವೋಟರ್ ಹೆಲ್ಪ್‍ಲೈನ್(ವಿಹೆಚ್‍ಎ)ಯನ್ನು ಬಳಕೆ ಮಾಡಿ ಜೋಡಿಸುವ ಕಾರ್ಯ ಮಾಡುವರು.
113 ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತದಾರರು ಈ ಸಂದರ್ಭದಲ್ಲಿ ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ಹಾಜರಾಗಿ ತಮ್ಮ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಅಥವಾ ಇತರೆ ದಾಖಲಾತಿಗಳಾದ ನರೇಗಾ(ಒಓಖಉಇಂ) ಜಾಬ್ ಕಾರ್ಡ್, ಬ್ಯಾಂಕ್/ಪೋಸ್ಟ್ ಆಫೀಸ್ ನೀಡಿದ ಭಾವಚಿತ್ರವಿರುವ ಪಾಸ್‍ಪುಸ್ತಕಗಳು, ಕಾರ್ಮಿಕ ಸಚಿವಾಲಯದ ವಿಮಾ ಸ್ಮಾರ್ಟ್‍ಕಾರ್ಡ್, ಚಾಲನಾ ಪರವಾನಿಗೆ, ಪಾನ್‍ಕಾರ್ಡ್, ಎನ್‍ಪಿಆರ್ ಅಡಿಯಲ್ಲಿ ಆರ್‍ಜಿಐ ನೀಡಿದ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್‍ಪೋರ್ಟ್, ಭಾವಚಿತ್ರದೊಂದಿಗೆ ಪಿಂಚಣಿ ದಾಖಲೆ, ಸೇವಾ ಗುರುತಿನ ಚೀಟಿಗಳು-ಕೇಂದ್ರ/ರಾಜ್ಯ ಸರ್ಕಾರ/ಪಿಎಸ್‍ಯು ಗಳು ನೀಡಿರುವ ಭಾವಚಿತ್ರದ ಗುರುತಿನಚೀಟಿ ಅಥವಾ ಸಾಮಾಜಿಕ ನ್ಯಾಯ ಸಬಲೀಕರಣ ಇಲಾಖೆ, ಭಾರತ ಸರ್ಕಾರದಿಂದ ನೀಡಿದ ವಿಶಿಷ್ಟ ಗುರುತಿನ ಚೀಟಿ ಹಾಜರುಪಡಿಸಬಹುದೆಂದು ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ