“ವಿಧಾನ ಸೌದಕ್ಕೆ ಮುತ್ತಿಗೆ ಹಾಕುತ್ತೇವೆ “:ಸರಕಾರಕ್ಕೆ ಎಚ್ಚರಿಕೆ ನೀಡಿದ ಕೋಡಿಹಳ್ಳಿ ಚಂದ್ರಶೇಖರ್

Kolar News:

ಕೋಡಿಹಳ್ಳಿ ಚಂದ್ರಶೇಖರ್  ಬರುವ ಅಧಿವೇಶನದಂದು ವಿಧಾನ ಸೌದಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಪ್ರತಿಭಟನಾ ಎಚ್ಚರಿಕೆ ನೀಡಿದ್ದಾರೆ.

 ಹೌದು ಕೋಲಾರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೀಷ್ಟಿಯಲ್ಲಿಮಾತನಾಡಿದ  ಕೋಡಿಹಳ್ಳಿ ಚಂದ್ರಶೇಖರ್  ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುತ್ತೆವೆ ಎಂದು ಹೇಳುತ್ತಲೇ ಜಾರಿ ಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ, ಹೀಗಾಗಿ ಕೃಷಿಕಾಯ್ದೆಗಳ ವಾಪಸ್ ಪಡೆಯಲು ವಿಧಾನಸೌದಕ್ಕೆ ಮುತ್ತಿಗೆ ಹಾಕುತ್ತೇವೆ , ಕೃಷಿ ಕಾಯ್ದೆಗಳನ್ನ ಹಿಂಪಡೆಯುತ್ತೇವೆ ಎಂದು ಸರ್ಕಾರ ಸೂಬೂಬು ಹೇಳುತ್ತಾ ಬರ್ತಿದೆ, ವಿದ್ಯುತ್ ಶಕ್ತಿಯನ್ನ ಖಾಸಗೀಕರಣ ಗೊಳಿಸುವ ತೀರ್ಮಾನಕ್ಕೆ ಬಂದಿದೆ, ವಿದ್ಯತ್ ಖಾಸಗೀ ಕರಣದಿಂದ ಜನಸಾಮಾನ್ಯರು ಬಳಕೆ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣ ವಾಗುತ್ತದೆ, ಕೃಷಿಯನ್ನ ಸಹ ಖಾಸಗೀಕರಣ ಮಾಡೋದಿಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ, ಕಾಯ್ದೆಗಳನ್ನ ಅನುಷ್ಟಾನ ಮಾಡೋದಕ್ಕೆ ದಕ್ಷಿಣ ಭಾರತದ ರಾಜ್ಯವನ್ನ ಪ್ರಯೋಗ ಶಾಲೆಯಾಗಿ ಬಳಕೆ ಮಾಡ್ತಾ ಇದ್ದಾರೆ , ಈಗಿನ ಕಾಲಕ್ಕೆ ವೈಜ್ಞಾನಿಕ ಅಳತೆಗೋಲು ಇಟ್ಟುಕೊಂಡು ರೈತರಿಗೆ ಉಂಟಾಗಿರುವ ನಷ್ಟ ಪರಿಹಾರ ನೀಡಬೇಕು, ಬೆಂಗಳೂರು ಸಿಟಿ ರೈಲು ನಿಲ್ದಾಣದಿಂದ ಪ್ರತಿಭಟನಾ ್ಯಾಲಿ ಪ್ರಾರಂಭಿಸಿ ವಿಧಾನಸೌದಕ್ಕೆ ಮುತ್ತಿಗೆ ಹಾಕುತ್ತೇವೆ, ಹಾಗಾಗಿ ಸೆ. ೧೨ ರಂದು ನಡೆಯುವ ವಿಧಾಸಭೆ ಅಧಿಶನದ ಬಳಿ ಬೃಹತ್ ಪ್ರತಿಭಟನೆ ಜೊತೆಗೆ  ವಿಧಾನಸೌದಕ್ಕೆ ಮುತ್ತಿಗೆ ಹಾಕುತ್ತೇವೆ,  ಎಂದು ಸರಕಾರಕ್ಕೆ  ಕೋಡಿ ಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.

ಕೋಲಾರ: ನಿರ್ಮಾಣಗೊಂಡ 4 ತಿಂಗಳಿಗೆ ಬಿರುಕುಬಿಟ್ಟ ಸರ್ಕಾರಿ ಶಾಲಾ ಕಟ್ಟಡ

ನಾನೇನ್ ರೇಪ್ ಮಾಡಿದ್ನಾ ಎಂದು ಅರವಿಂದ ಲಿಂಬಾವಳಿ ಉದ್ಧಟತನ: ಇದು ಬಿಜೆಪಿ ಸಂಸ್ಕೃತಿಗೆ ಹಿಡಿದ ಕನ್ನಡಿ ಎಂದ ಕಾಂಗ್ರೆಸ್

ಲಂಕಾ ಅಧ್ಯಕ್ಷರಿಗೆ ಪತ್ರ ಬರೆದ ನಿತ್ಯಾನಂದ ಸ್ವಾಮೀಜಿ..!

About The Author