chithradurga News:
ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಪೋಕ್ಸೋ ಕೇಸ್ ನಡಿ ಇಂದು ಜೈಲುವಾಸ ಅನುಭವಿಸುತ್ತಿದ್ದಾರೆ. ಶ್ರೀಗಳು ಜೈಲುವಾಸದಲ್ಲಿದ್ದರೂ ಇಂದು ಮಠದಲ್ಲಿ ವಿವಾಹ ನಡೆಯುತ್ತಿದೆ. ಹೌದು ಮೊದಲೇ ನೋಂದಣಿಯಾಗಿದ್ದ 7 ಜೋಡಿಗಳ ಪೈಕಿ 6 ಜೋಡಿಗಳು ಇದೀಗ ಮಠದಲ್ಲಿ ಸಾಮೂಹಿಕವಾಗಿ ವಿವಾಹವಾಗಿದ್ದಾರೆ. ಆರು ಜೋಡಿಗಳು ಮಾತ್ರ ವೇದಿಕೆ ಮೇಲೆ ಅಸೀನರಾಗಿದ್ದರು. ವಧು-ವರರ ಜೊತೆ ಕುಟುಂಬಸ್ಥರು ಕೂಡ ಸಭಾಂಗಣದಲ್ಲಿ ನೆರೆದಿದ್ದರು. ಗುರುಮಠಕಲ್ ಶಾಖಾ ಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಉಪಸ್ಥಿತಿಯಲ್ಲಿ ಈ ಶುಭವಿವಾಹ ನಡೆಯಿತು. ಇನ್ನು ಸತತ 32 ವರ್ಷಗಳಿಂದ ಈ ಸಾಮೂಹಿಕ ವಿವಾಹ ಕಾರ್ಯಕ್ರಮ ಸೆಪ್ಟೆಂಬರ್ 5 ರಂದು ನಡೆಯುತ್ತಿರುವ ವಿವಾಹ ಕಾರ್ಯಕ್ರಮವಾಗಿದೆ. ಹಾಗೆಯೇ ಈ ವರ್ಷದ ಸಾಮೂಹಿಕ ವಿವಾಹ ಮಾತ್ರ ಯಾವುದೇ ಸಂಭ್ರಮವಿಲ್ಲದೆ ನಡೆದುದು ಬೇಸರದ ಸಂಗತಿ. ಶ್ರೀಗಳು ಜೈಲುವಾಸವಾಗಿದ್ದರಿಂದ ಯಾವುದೇ ರೀತಿಯ ಸಂಭ್ರಮ ಮಠದಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.
ಟಿ.ಕೆ ಹಳ್ಳಿ ಯಂತ್ರಗಾರ ಜಲಾವೃತ: ಸ್ಥಳಕ್ಕೆ ಭೇಟಿ ನೀಡಲಿರುವ ಸಿಎಂ ಬೊಮ್ಮಾಯಿ