ಬಾಗಲಕೋಟೆ: ಜಿಲ್ಲೆಯ ಇಳಕಲ್ ತಾಲೂಕಿನಲ್ಲಿ ಸೆಪ್ಟೆಂಬರ್ 7ರಂದು ಹಾಗೂ ಹುನಗುಂದದಲ್ಲಿ ಸೆ.8ರಂದು ವಿವಿಧ ವಿದ್ಯುತ್ ಕಾಮಗಾರಿಗಳ ಹಿನ್ನಲೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಈ ಕುರಿತು ಹೆಸ್ಕಾಂ ಮಾಹಿತಿ ಬಿಡುಗಡೆ ಮಾಡಿದ್ದು, ಇಲಕಲ್ಲ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಪ್ರಯುಕ್ತ ಸೆಪ್ಟೆಂಬರ 7 ರಂದು ಬೆಳಿಗ್ಗೆ 10 ರಿಂದ ಸಂಜೆ 5 ವರೆಗೆ ಈ ಮಾರ್ಗದ 11 ಕೆವಿ ಫೀಡರಗಳಾದ ಎಫ್-1 ಪಂಪಹೌಸ್, ಎಫ್-2 ಇಲಕಲ್ಲ, ಎಫ್-3 ವಜ್ಜಲ್, ಎಫ್-5 ಗುಗ್ಗಲಮರಿ ಎನ್.ಜೆ.ವಾಯ್, ಎಫ್-6 ತುಂಬ ಎನ್.ಜೆ.ವಾಯ್, ಎಫ್-7 ಗಾಯತ್ರಿ, ಎಫ್-8 ಫಾಯರ್ ಸ್ಟೇಶನ್, ಎಫ್-10 ಹನಮನಾಳ, ಎಫ್-11 ದುರ್ಗಾ ಅರ್ಬನ್, ಎಫ್-12 ಉಪನಾಳ, ಎಫ್-13 ಜೆಮ್, ಎಫ್-14 ಬಲಕುಂದಿ & ಎಫ್-15 ಜೈನ್, 33 ಕೆವಿ ಎಫ್-2 ಕಂದಗಲ್ಲ, 33 ಕೆವಿ ಸೋಲಾರಸಿಸ್ ಪ್ರೈವೆಟ್ ಲಿಮಿಟೆಡ್, 33 ಕೆವಿ ಪೇಸ್ ಪಾವರ್ ಲಿಮಿಟೆಡ್ ಮಾರ್ಗಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಹುನಗುಂದ 110 ಕೆವಿ ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಪ್ರಯುಕ್ತ ಸೆಪ್ಟೆಂಬರ 8 ರಂದು ಬೆಳಿಗ್ಗೆ 10 ರಿಂದ ಸಂಜೆ 6 ವರೆಗೆ 110 ಕೆವಿ ಜೆ.ಎಸ್.ಡಬ್ಲೂ, 110 ಕೆವಿ ಕೆ.ಬಿ.ಜೆ.ಎನ್.ಎಲ್, 33 ಕೆವಿ ಎಫ್-1 ಕರಡಿ, 33 ಕೆವಿ ಎಫ್-2 ಅಮೀನಗಡ, 33 ಕೆವಿ ಮೈತ್ರಾ ಅಡ್ವೈತ್ ಸೋಲಾರ ಐಪಿಪಿ, 11 ಕೆವಿ ಎಫ್-7 ಇದ್ದಲಗಿ, ಎಫ್-8 ಇಡಸ್ಟ್ರೀಜ್, ಎಫ್-9 ವಾಟರ್ ಸಪ್ಲೈ ಮತ್ತು ಎಫ್-10 ಅಮರಾವತಿ ಮಾರ್ಗಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.