Tuesday, December 24, 2024

Latest Posts

ಉತ್ತರ ಕರ್ನಾಟಕದ ಮೇರು ನಾಯಕ ಉಮೇಶ್ ಕತ್ತಿ ವಿಧಿವಶ:

- Advertisement -

Banglore News:

ಓರ್ವ ಉತ್ತರ ಕರ್ನಾಟಕದ ಕನಸುಗಾರ, ಹೋರಾಟಗಾರ, ಛಲಗಾರರು. ಇವೆಲ್ಲವುಗಳ ಜೊತೆ ಪ್ರೀತಿ, ವಿಶ್ವಾಸ, ಅಂತ:ಕರುಣೆ, ಅನುಕಂಪ ಗುಣಗಳಿಂದ ಜನಪ್ರಿಯ ನಾಯಕರು. ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಗುಣ. ಇಂಥಹ ಗುಣಗಳಿಂದಲೇ ತಮ್ಮ ಕ್ಷೇತ್ರದ ಜನಸಾಮಾನ್ಯರ ಮನ-ಮನದಲ್ಲಿ ಹಾಗೂ ಹೃದಯದಲ್ಲಿ ನೆಲೆಸಿದವರು  ಉಮೇಶ್ ಕತ್ತಿ ಆದರೆ ಇಂದು  ವಿಧಿಯಾಟಕ್ಕೆ ಬಲಿಯಾಗಿ ನಮ್ಮನ್ನಲ್ಲಾ  ಬಿಟ್ಟು ಕಾಣದ  ಲೋಕಕ್ಕೆ  ಪಯಣಿಸಿದ್ದಾರೆ. ಹೃದಯವಂತ ರಾಜಕೀಯ  ಮುತ್ಸಜ್ಜಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಧೈರ್ಯಶಾಲಿ, ಸಾಹಸಿಯಾದವನಿಗೆ ಪ್ರರಿಶ್ರಮವೇ ಜೀವಾಳವಾಗಿರುತ್ತದೆ. ಯಾವುದೇ ಕ್ಷೇತ್ರವಿರಲಿ, ಯಶಸ್ಸು ಸುಮ್ಮನೆ ಬರುವದಿಲ್ಲ. ಸಾಧನೆಗಾಗಿ ತುಂಬಾ ಶ್ರಮಿಸಬೇಕಾಗುತ್ತದೆ. ಕಾರಣ ಯಶಸ್ಸಿಗೆ ಅಡ್ಡದಾರಿಗಳಿಲ್ಲ. ನಿರಂತರ ದುಡಿಮೆ ಮಾಡುವವರೇ ಈ ಜಗತ್ತಿನಲ್ಲಿ ಯಶಸ್ಸು ಪಡೆದುಕೊಂಡಿದ್ದಾರೆ. ಇಂಥಹ ಸ್ವಸಾಮರ್ಥ್ಯದ ನೆಲೆಯಲ್ಲಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡು ನಮ್ಮೆಲ್ಲರ ಮಧ್ಯೆ ಬೆಳೆದಿರುವ ಮಾನ್ಯಶ್ರೀ ಉಮೇಶ ವಿಶ್ವನಾಥ ಕತ್ತಿ ಇನ್ನು ಬರೀ ನೆನಪು ಮಾತ್ರ.

ಉಮೇಶ ಕತ್ತಿ ಅವರೆಂದರೆ ಸಾಕು ಎಲ್ಲರ ಬಾಯಿಯಲ್ಲೂ ಅವರ ಹೆಸರೇ ತುಂಬಿ ತುಳುಕುತ್ತದೆ. ಉತ್ತರ ಕರ್ನಾಟಕದ ಓರ್ವ ಧೀಮಂತ ಶಾಸಕರಾಗಿ, ಅವರಲ್ಲಿರುವ ಜನಪ್ರಿಯತೆ ಹಲವು ಅವಧಿಯವರೆಗೆ ಸಚಿವರನ್ನಾಗಿಸಿತಲ್ಲದೇ  ಸಕ್ಕರೆ, ಲೋಕೋಪಯೋಗಿ, ಬಂಧೀಖಾನೆ ಹಾಗೂ ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಮಹತ್ವದ ಜನಪರ ಕಾರ್ಯಗಳಿಂದ ಕರ್ನಾಟಕದ ಮನೆಮಾತಾಗಿದ್ದಾರೆ.

ಇದ್ದಂತೆ ನೇರ ಹೇಳಬಲ್ಲ ಎದೆಗಾರಿಕೆ, ಮಹತ್ವಾಂಕಾಂಕ್ಷೆ ಗುಣ ಹೊಂದಿರುವ ಅವರು ಅಂದಿನ ಮುಖ್ಯ ಮಂತ್ರಿ ಜೆ.ಹೆಚ್.ಪಟೇಲ್ ಮಂತ್ರಿಮಂಡಳದಲ್ಲಿ ಸಕ್ಕರೆ, ಲೋಕೋಪಯೋಗಿ ಇಲಾಖೆ ಸಚಿವರಾಗಿ ಸಕ್ಕರೆ ಕಾರಖಾನೆಗಳ ಅಭಿವೃದ್ಧಿಗೆ ವಿಧಾಯಕ ಯೋಜನೆಗಳನ್ನು ಜಾರಿ ಗೊಳಿಸಿದ್ದಾರೆ. ಅಲ್ಲದೆ ಲೋಕೋಪಯೋಗಿ ಸಚಿವರ ಕಾಲಾವಧಿಯಲ್ಲಿ ಹಳ್ಳಿಯಿಂದ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ದುರ್ಗಮ ದಾರಿಯನ್ನೂ ಸುಗಮಗೊಳಿಸುವ ಮೂಲಕ ಜನಪರ ಕೆಲಸಗಳನ್ನು ಮಾಡಿ ತೋರಿಸಿದ್ದ ಖ್ಯಾತಿ ಇವರದ್ದಾಗಿದೆ.

ಶಾಸಕರಾಗಿ ಆಯ್ಕೆಯಾದರೂ ಸಹ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನಪರ ಕಾರ್ಯಗಳನ್ನು ಮೆಚ್ಚಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡರು. ಬಯಸದೇ ಬಂದ ಭಾಗ್ಯವೆಂಬಂತೆ ತೋಟಗಾರಿಕೆ ಮತ್ತು ಬಂದೀಖಾನೆ ಸಚಿವರಾಗಿ ಇಲಾಖೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಕೊಂಡರು. ಕೆಲವು ತಿಂಗಳು ರಾಮನಗರ ಜಿಲ್ಲೆಯ ಉಸ್ತುವಾರಿ ಕಾರ್ಯ ವಹಿಸಿಕೊಂಡು ಆ  ಜಿಲ್ಲೆಯಲ್ಲೇ ರಾಜೀವ ಗಾಂಧಿ ಸಂಶೋಧನಾ ಆಸ್ಪತ್ರೆ ನಿರ್ಮಾಣಕ್ಕೆ ಪ್ರಯತ್ನಿಸಿದ್ದುಂಟು. ಬಂದೀಖಾನೆಯಲ್ಲಿರುವ ಸನ್ನಡತೆಯ ಕೈದಿಗಳ ಬಿಡುಗಡೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ.

ಅಂದು ಭೂ ಚೇತನ, ಸಾವಯವ ಕೃಷಿ ಮಿಷನ್, ರೈತ ಸಂಪರ್ಕ ಕೇಂದ್ರದ ಕಂಪ್ಯೂಟಿಕರಣ, ಮೈಕ್ರೋ ಇರಿಗೇಶನ್, ಹಸಿರು ಕ್ರಾಂತಿ, ಜಾಗತಿಕ ಕೃಷಿ ಬಂಡವಾಳ ಸಮಾವೇಶ, ಭಾರತ ದೇಶದಲ್ಲೇ ಪ್ರಪ್ರಥಮ ಬಾರಿಗೆ ಜಾಗತಿಕ ಕೃಷಿ ಬಂಡವಾಳ ಹೂಡಿಕೆದಾರರ ಸಮಾವೇಶ ಸಂಘಟಿಸಿ ಬಂಡವಾಳ ಹೂಡಿಕೆಗೆ ಒಪ್ಪಂದ ಕೈಕೊಂಡರು.

ಕರ್ನಾಟಕ ರಾಜ್ಯದ ಪ್ರತಿಷ್ಠಿತ ಕಾರಖಾನೆಯೆಂದು ಹೆಗ್ಗಳಿಕೆಗೆ ಪಾತ್ರವಾದ ಸಂಕೇಶ್ವದ ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆಗೆ ಜರುಗಿದ ಆಡಳಿತ ಮಂಡಳಿ ಚುನಾವಣೆಯಲ್ಲಿ ಹಿಂದಿನ ಆಡಳಿತ ಮಂಡಳಿಯೊಂದಿಗೆ ಸೆಣಸಾಡಿ ಉಮೇಶ ಕತ್ತಿ ಅವರ ಗುಂಪು ಪ್ರಚಂಡ ಜಯ ಸಾಧಿಸಿತು. ಐತಿಹಾಸಿಕ ದಾಖಲೆಯೊಂದಿಗೆ ಸಹೋದರ ರಮೇಶ ಕತ್ತಿ ಕಾರಖಾನೆಯ ಅಧ್ಯಕ್ಷರಾಗಿ ಸದಸ್ಯರ ಹಿತ ಕಾಪಾಡಿದರು. ಇಂದಿಗೂ ಸಹ ಕಾರಖಾನೆಯು ಅವರ ಮಾರ್ಗದರ್ಶನದಲ್ಲಿ ಪ್ರಗತಿಪಥದತ್ತ ಮುನ್ನಡೆದಿದೆ. ಇದು ಉಮೇಶ ಕತ್ತಿ ಅವರ ಜನಪ್ರಿಯತೆಗೆ ಸಾಕ್ಷಿಯಾಯಿತು.

ತಮ್ಮ ಪ್ರತಿಯೊಂದು ರಾಜಕೀಯ ಜೀವನದಲ್ಲಿ ಅವಿರತ ಹೋರಾಟ ಮಾಡುತ್ತ ವಿಜಯಶಾಲಿಯಾಗಲು ನೆರವಾಗುತ್ತಿದ್ದ ಸಹೋದರ ರಮೇಶ ಕತ್ತಿ ಇವರಿಗೆ ಸಾಮಾನ್ಯ ಮತಕ್ಷೇತ್ರವಾಗಿ ಮಾರ್ಪಟ್ಟ ಚಿಕ್ಕೋಡಿ ಲೋಕಸಭೆಗೆ ತಮ್ಮ ಸಹೋದರರ ಹೆಸರನ್ನೇ ಅಭ್ಯರ್ಥಿಯನ್ನಾಗಿ ಸೂಚಿಸಿದಾಗ ರಾಜ್ಯ ಬಿ.ಜೆ.ಪಿ.ಯಲ್ಲಿ ಕಾರ್ಯಕಾರಿಣಿಯಲ್ಲಿ ತೀವ್ರ ಸಂಚಲವನ್ನುಂಟು ಮಾಡಿತು. ಉಮೇಶ ಕತ್ತಿಯವರ ಸಂಘಟನಾ ಚಾತುರ್ಯ, ರಾಜಕೀಯ ಚಾಣಾಕ್ಷತೆಗಳು ಸಹೋದರ ರಮೇಶ ಕತ್ತಿ ಯವರನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸುವ ಮೂಲಕ ಕತ್ತಿ ಮನೆತನದ ರಾಜಕೀಯವನ್ನು ನವ ದೆಹಲಿವರೆಗೂ ವಿಸ್ತರಿಸಿದ ಖ್ಯಾತಿ ಪಡೆದುಕೊಂಡಿತು.

ಹುಕ್ಕೇರಿಯಲ್ಲಿ ಅಗ್ನಿಶಾಮಕ ಠಾಣೆ, ರಾಣಿ ಚನ್ನಮ್ಮ ಮಹಿಳಾ ವಸತಿ ಶಾಲೆ, ಕಾರ್ಯಾರಂಭಗೊಂಡಿವೆ. ಕ್ರೀಡೆಯ ಅಗತ್ಯಕ್ಕೆ ತಕ್ಕಂತೆ ತಾಲೂಕಾ ಕ್ರೀಡಾಂಗಣ ನಿರ್ಮಿಸಲಾಗಿದೆ.

ಸಹೋದರ ಮಾಜಿ ಸಂಸದರು, ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ಅಧ್ಯಕ್ಷ  ರಮೇಶ ಕತ್ತಿ ಸೇರಿದಂತೆ ಇಬ್ಬರು ಸೌ.ಪೂರ್ಣಿಮಾ ಪಾಂಗಿ ಮತ್ತು ಸೌ.ಹರ್ಷ ಕಣವಿ ಇರ್ವರು ತಂಗಿಯರು, ಪತ್ನಿ ಶೀಲಾ, ಓರ್ವ ಪುತ್ರ ನಿಖಿಲ್, ಪುತ್ರಿ ಸ್ನೇಹಾ ಮೊಮ್ಮಕ್ಕಳ್ಳಾದ-ಆರ್ಯನ್, ಅರೈನಾ, ಆರವ, ಅಯಾನ್ಸ್ ಸೇರಿದಂತೆ ಅಪಾರ ಬಂಧು-ಬಳಗ ಇವರ ತುಂಬು ಸಂಸಾರದ ಕರುಳ-ಬಳ್ಳಿಗಳು.

ಇಂಥ ಅಪರೂಪದ ರಾಜಕಾರಣಿ ಜನರ  ಪಾಲಿಗೆ ಸಾಕ್ಷಾತ್  ದೇವರ ರೂಪವೇ ಆಗಿದ್ದ ಉಮೇಶ್ ಕತ್ತಿ ಇಂದು ಶಾಶ್ವತವಾಗಿ ದೇವರ ಬಳಿಯೇ ಹೋಗಿದ್ದಾರೆ. ಎಂ ಎಸ್ ರಾಮಯ್ಯ  ಆಸ್ಪತ್ರೆಯಲ್ಲಿ  ನಿನ್ನೆ ರಾತ್ರಿ  [ಸೆ.6] ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಕೇಂದ್ರ, ರಾಜ್ಯ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಿ ಸರ್ಕಾರ ಆದೇಶ

 

ರಾಜ್ಯದೆಲ್ಲೆಡೆ 4 ದಿನ ಮತ್ತೆ ಮಳೆಯಾಗುವ ಸೂಚನೆ…!

ಮೈಸೂರು ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ: ಜೆಡಿಎಸ್ ಜೊತೆಗೆ ಹೊಂದಾಣಿಕೆ ಇಲ್ಲ – ಸಿಎಂ ಬೊಮ್ಮಾಯಿ

- Advertisement -

Latest Posts

Don't Miss