Technology News:
ಶವೋಮಿ ತನ್ನ ರೆಡ್ಮಿ ಬ್ರ್ಯಾಂಡ್ ಅಡಿಯಲ್ಲಿ ಬಜೆಟ್ ಬೆಲೆಯ ಫೋನುಗಳನ್ನು ಬಿಡುಗಡೆ ಮಾಡಿ ಕೆಲ ಸಮಯವೇ ಆಗತ್ತು. ಇದೀಗ ಭಾರತದಲ್ಲಿ ಹೊಸ ರೆಡ್ಮಿಎ1 ಫೋನ್ ಲಾಂಚ್ ಆಗಿದೆ. ಇದು ಬಜೆಟ್ ಬೆಲೆಯ ಮೊಬೈಲ್ ಆಗಿದ್ದರೂ ಅತ್ಯುತ್ತಮ ಫೀಚರ್ಗಳಿಂದ ಆವೃತ್ತವಾಗಿದೆ ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ಭಾರತದಲ್ಲಿ ರೆಡ್ಮಿ A1 ಸ್ಮಾರ್ಟ್‌ಫೋನ್ ಒಂದು ಸ್ಟೋರೇಜ್ ಆಯ್ಕೆಯಲ್ಲಷ್ಟೆ ಅನಾವರಣಗೊಂಡಿದೆ. 2GB RAM + 32GB ಸ್ಟೋರೇಜ್ಗೆ ಕೇವಲ 6,499 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಕಪ್ಪು, ತಿಳಿ ಹಸಿರು ಹಾಗೂ ತಿಳಿ ನೀಲಿ ಬಣ್ಣಗಳಲ್ಲಿ ಖರೀದಿಗೆ ಸಿಗಲಿದೆ.
ಈ ಫೋನ್ 6.52 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದ್ದು ಮೀಡಿಯಾಟೆಕ್ ಹೀಲಿಯೊ A22 ಪ್ರೊಸೆಸರ್ ಅಳವಡಿಸಲಾಗಿದೆ, ಹಾಗೆ ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಬೆಂಬಲವನ್ನು ಪಡೆದುಕೊಂಡಿದೆ.ಈ ಸ್ಮಾರ್ಟ್ಫೋನ್ನಲ್ಲಿ 8 ಮೆಗಾಫಿಕ್ಸೆಲ್ನ ಡ್ಯುಯೆಲ್ ಕ್ಯಾಮೆರಾ ಸೆಟ್‌ಅಪ್ ಇದೆ. ಜೊತೆಗೆ LED ಫ್ಲ್ಯಾಶ್ ಕೂಡ ಇರುತ್ತದೆ. 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಈ ಫೋನ್ ಭಾರತ 20 ಕ್ಕೂ ಅಧಿಕ ಭಾಷೆಯನ್ನು ಸಪೋರ್ಟ್ ಮಾಡುತ್ತದೆ.
ದೀರ್ಘ ಸಮಯ ಬಾಳಿಕೆ ಬರುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, 10W ಸಾಮಾನ್ಯ ವೇಗದ ಚಾರ್ಜರ್ನೊಂದಿಗೆ ದೊರೆಯಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, ಡ್ಯುಯಲ್ ಬ್ಯಾಂಡ್ Wi-Fi, ಬ್ಲೂಟೂತ್, GPS ಮತ್ತು USB ಟೈಪ್-C ಪೋರ್ಟ್ ಹೊಂದಿದೆ ಎಂದು ತಿಳಿದು ಬಂದಿದೆ.