Monday, December 23, 2024

Latest Posts

ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ ಫುಟ್‌ಬಾಲ್ ಕ್ಲಬ್ ಬೆಂಗಳೂರು ಎಫ್ ಸಿ ಮಾಡಿರುವ ಪೋಸ್ಟ್

- Advertisement -

Film stories:

ಸೋಶಿಯಲ್ ಮೀಡಿಯಾದಲ್ಲಿ ಫುಟ್ ಬಾಲ್ ಕ್ಲಬ್ ಬೆಂಗಳೂರು ಎಫ್ ಸಿ  ಮಾಡಿದ ಆ ಒಂದು ಪೋಸ್ಟ್ ದರ್ಶನ್  ಅಭಿಮಾನಿಗಳನ್ನು ಕೆರಳಿ ಕೆಂಡವಾಗಿಸಿದೆ. ಸಾಮಾಜಿಕ ಜಾಲತಾಣದಲ್ಲಿ ದರ್ಶನ್  ಫ್ಯಾನ್ಸ್ ವಾರ್ ಶುರುವಾಗಿದೆ. ಅಷ್ಟಕ್ಕೂ ಎಪ್ ಸಿ ಮಾಡಿರೋ ಪೋಸ್ಟ್ ಆದ್ರೂ ಏನು ಫ್ಯಾನ್ಸ್ ಸಿಟ್ಟಾಗಿದ್ದೇಕೆ ಇಲ್ಲಿದೆ ಫುಲ್ ಸ್ಟೋರಿ

ಸೋಶಿಯಲ್ ಮೀಡಿಯಾದಲ್ಲಿ ಫುಟ್‌ಬಾಲ್ ಕ್ಲಬ್ ಬೆಂಗಳೂರು ಎಫ್ ಸಿ ಮಾಡಿರುವ ಪೋಸ್ಟ್ ಒಂದು ಇದೀಗ ದರ್ಶನ್  ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ವಿಶೇಷವಾಗಿ ಎಡಿಟ್ ಮಾಡಿರುವ ಚಿತ್ರವೊಂದನ್ನು ಬೆಂಗಳೂರು ಎಫ್ ಸಿ ತನ್ನ ಅಧಿಕೃತ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್ ಖಾತೆಗಳಲ್ಲಿ ಹಂಚಿಕೊಂಡಿದೆ. ರಕ್ಷಿತ್ ಶೆಟ್ಟಿ, ಯಶ್ ಹಾಗೂ ಸುದೀಪ್ ಅವರ ಫೋಟೊಗಳನ್ನು ಬಳಸಿ ಬೆಂಗಳೂರು ಫುಟ್‌ಬಾಲ್ ತಂಡದ ಜರ‍್ಸಿ ತೊಡಿಸಿ ಎಡಿಟ್ ಮಾಡಲಾದ ಚಿತ್ರ ಇದಾಗಿದೆ. ‘ಅವರಂತೆ ಯಾರೂ ಇಲ್ಲ’ ಎಂದೂ ಸಹ ಚಿತ್ರದಲ್ಲಿ ಬರೆಯಲಾಗಿದೆ.

ಹೀಗೆ ಎಡಿಟ್ ಮಾಡಲಾಗಿರುವ ಫೋಟೊವನ್ನು ಅಪ್‌ಲೋಡ್ ಮಾಡಿರುವ ಬೆಂಗಳೂರು ಎಫ್ ಸಿ “ಕಿಚ್ಚ ಸುದೀಪ್, ಯಶ್, ರಕ್ಷಿತ್ ಶೆಟ್ಟಿ ಅಂತೆ ಯಾರೂ ಇಲ್ಲ!’ ಎಂದು ಕ್ಯಾಪ್ಷನ್ ಬರೆದುಕೊಂಡಿದೆ. ಇನ್ನು ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಈ ಪೋಸ್ಟ್ ನೋಡಿದ ಈ ಮೂವರು ನಟರ ಅಭಿಮಾನಿಗಳು ಸಂತಸದಿಂದ ಲೈಕ್ ಬಟನ್ ಒತ್ತಿದ್ದರೆ, ರ‍್ಶನ್ ಅಭಿಮಾನಿಗಳು ಕಿಡಿಕಾರಿದ್ದಾರೆ. ಎಲ್ಲಾ ಸರಿ ಆದರೆ ಈ ಚಿತ್ರದಲ್ಲಿ ನಮ್ಮ ಡಿ ಬಾಸ್ ಚಿತ್ರವನ್ನು ಏಕೆ ಹಾಕಿಲ್ಲ” ಎಂದು ಕಾಮೆಂಟ್ ಮಾಡಿ ಕೋಪಗೊಂಡಿದ್ದಾರೆ.

ಹೀಗೆ ಬೆಂಗಳೂರು ಎಫ್‌ಸಿ ಮಾಡಿರುವ ಟ್ವೀಟ್‌ನಲ್ಲಿದರ್ಶನ್  ಅಭಿಮಾನಿಗಳು ಕಾಮೆಂಟ್ ಮಾಡಲು ಆರಂಭಿಸುತ್ತಿದ್ದಂತೆ ಫ್ಯಾನ್ ವಾರ್ ಆರಂಭಗೊಂಡಿದೆ. ಕೂಡಲೇ ಈ ಪೋಸ್ಟ್ ಡಿಲಿಟ್ ಮಾಡಿ ಎಂದು ದರ್ಶನ್  ಫ್ಯಾನ್ಸ್ ಕಾಮೆಂಟ್ ಮಾಡಿದ್ದರೆ, ಯಶ್ ಹಾಗೂ ಸುದೀಪ್ ಅಭಿಮಾನಿಗಳು ಪೋಸ್ಟ್ ಸರಿಯಾಗಿಯೇ ಇದೆ ಎಂದು ಪ್ರತ್ಯುತ್ತರ ನೀಡಿದ್ದಾರೆ.

ಅವರಂತೆ ಯಾರೂ ಇಲ್ಲ; ಯಾಕೆ ದರ್ಶನ್ ಇಲ್ವಾ? “ಈ ರೀತಿ ಪೋಸ್ಟ್‌ಗಳನ್ನು ಮಾಡುವುದರಿಂದಲೇ ಫ್ಯಾನ್ ವಾರ್ ಶುರುವಾಗುವುದು ಎಂದು ಕೆಲ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಇಂಥ ಪೋಸ್ಟ್‌ಗಳನ್ನು ಮಾಡುವಾಗ ಸರಿಯಾದ ಕ್ಯಾಪ್ಷನ್ ಬಳಸಿ ಎಂದಿದ್ದಾರೆ. ಅವರಂತೆ ಯಾರೂ ಇಲ್ಲ ಎಂದು ಹೊಗಳುವ ಭರದಲ್ಲಿ ಬೇರೆ ನಟರ ಅಭಿಮಾನಿಗಳಲ್ಲಿ ಬೇಸರ ಮೂಡುವಂತೆ ಮಾಡಬೇಡಿ, ಯಾಕೆ ಅವರಂತೆ ದರ್ಶನ್  ಇಲ್ವಾ” ಎಂದು ಕಾಮೆಂಟ್ ಮಾಡಿ ಕಿಡಿ ಕಾರಿದ್ದಾರೆ.

ಕೊನೆಗೂ ಗುಡ್ ನ್ಯೂಸ್ ಕೊಟ್ಟ ಆಥಿಯಾ,ರಾಹುಲ್…!

“ನಿನ್ನನ್ನು ಕಳೆದು ಕೊಳ್ಳೋಕೆ ಇಷ್ಟ ಇಲ್ಲ” ಸಾನ್ಯಾ ಹೀಗೆ ಹೇಳಿದ್ದು ಯಾರಿಗೆ ಗೊತ್ತಾ..?!

ಬಿಗ್ ಬಾಸ್ ಸೀಸನ್ 9ಕ್ಕೆ ದಿನಗಣನೆ ಶುರೂ…!

- Advertisement -

Latest Posts

Don't Miss