Saturday, July 5, 2025

Latest Posts

ಹುಲಿಯೊಂದಿಗೆ ಹೋರಾಡಿ ಮಗುವನ್ನು ರಕ್ಷಿಸಿದ ತಾಯಿ…!

- Advertisement -

Special News:

ತಾಯಿ  ಪ್ರೀತಿನೆ ಹಾಗೆ  ತನ್ನ ಮಗುವಿಗೋಸ್ಕರ ಎಂತಹ ಸಾಹಸಕ್ಕೂ  ಕೈ ಹಾಕುತ್ತಾಳೆ. ಅದಕ್ಕೆ ತಾಯಿನ ದೈವಸ್ವರೂಪಿ ಎನ್ನಲಾಗುವುದು. ಇಲ್ಲಿ ನಡೆದ ಘಟನೆಯೂ  ಹಾಗೆಯೇ ಇದೆ. ತನ್ನ ಮಗುವನ್ನು  ರಕ್ಷಿಸಲು ಹುಲಿಯೊಂದಿಗೆ ಬರಿ ಗೈಯಲ್ಲಿ  ಹೊಡೆದಾಡಿದ್ದಾಳೆ. ತಾಯಿ ಪಾಲಿಗೆ  ದೇವರಾಗಿದ್ದಾಳೆ.

ತನ್ನ 15 ತಿಂಗಳ ಮಗನನ್ನು ರಕ್ಷಿಸಲು ಮಹಿಳೆಯೊಬ್ಬರು ಹುಲಿಯೊಂದಿಗೆ ಹೋರಾಡಿರುವ  ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

25 ವಯಸ್ಸಿನ ಅರ್ಚನಾ ಚೌಧರಿ ಭಾನುವಾರ ರಾತ್ರಿ ಅಳುತ್ತಿದ್ದ ಮಗನನ್ನು ಸಮಾಧಾನಪಡಿಸುತ್ತಾ ಮನೆಯಿಂದ ಹೊರ ಬಂದಿದ್ದಾಳೆ ಎನ್ನಲಾಗಿದೆ. ಈ ಸಮಯದಲ್ಲಿ ಸಮೀಪದ ಬಾಂಧವಗಢ ಹುಲಿ ಸಂರಕ್ಷಿತಾರಣ್ಯದಿಂದ ದಾರಿ ತಪ್ಪಿ ಬಂದಿದ್ದ ಹುಲಿಯು ಹೊಲಗಳಲ್ಲಿ ಅಡಗಿ ಕುಳಿತಿತ್ತು ಈ ವೇಳೆ  ಮಗು ಮೇಲೆ ದಾಳಿ ನಡೆಸಿದೆ.

ಅಚಾನಕ್‌ ದಾಳಿ ನಡೆಸಿದ ಹುಲಿ, ಮಹಿಳೆಯ ಮಗುವನ್ನು ದವಡೆಯಲ್ಲಿ ಹಿಡಿಯಿತು. ಭಯದಿಂದಲೇ ಮಹಿಳೆ ತನ್ನ ಮಗುವನ್ನು ಬಿಡದೇ ಹುಲಿಯೊಂದಿಗೆ ಹೋರಾಡಿದ್ದಾಳೆ. ಆಗ ಬಾಲಕನನ್ನು ಬಲವಾಗಿ ಎಳೆದುಕೊಳ್ಳಲು ಹುಲಿ ಪ್ರಯತ್ನಿಸಿದರೂ  ತಾಯಿ ಪವಿತ್ರ ಪ್ರೇಮಕ್ಕೆ ಹುಲಿ ಪ್ರಯತ್ನ ವಿಫಲವಾಗಿದೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಿದ್ದಾಳೆ ಎನ್ನಲಾಗುತ್ತಿದೆ. ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಇದರಿಂದ ಭಯಗೊಂಡ ಹುಲಿ ಕಾಡಿನೊಳಕ್ಕೆ ನುಗ್ಗಿದೆ ಎಂದು  ತಿಳಿದು ಬಂದಿದೆ.

ಈ ಹೋರಾಟದಲ್ಲಿ ಮಹಿಳೆ ಕೈಗೆ ಗಾಯಗಳಾಗಿವೆ. ಅಲ್ಲದೇ ಮಗುವಿನ ತಲೆಗೂ ಆಳವಾದ ಗಾಯವಾಗಿದೆ. ತಾಯಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ರಸ್ತೆ ಮಧ್ಯೆ ಆನೆಗೆ ಕಾರಿನಲ್ಲಿ ಕೂರವಾಸೆ..! ಮುಂದೆ ನಡೆದದ್ದೇ ಬೇರೆ..!

ಹಕ್ಕಿ ಗೂಡಿನಿಂದಾಗಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಗಿತ…!

ಮಹಾಮಳೆಗೆ ತತ್ತರಿಸಿ ಹೋಗಿದ್ದ ಕೊಡಗು ಪ್ರದೇಶ ಗಳನ್ನು ವೀಕ್ಷಿಸಿದ ಕೇಂದ್ರ ಅಧ್ಯಯನ ತಂಡ:

- Advertisement -

Latest Posts

Don't Miss