National News:
ಕೃತಕ ಬುದ್ಧಿಮತ್ತೆ ತಂತ್ರಾಂಶವೂ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿದ ಡ್ರೋನ್ಗಳ ಸಮೂಹವನ್ನು ಸಶಸ್ತ್ರ ಪಡೆಗಳಿಗೆ ಸೇರಿಸಲಾಗುತ್ತಿದೆ. ನಿರ್ದಿಷ್ಟ ಗುರಿಯನ್ನು ನಿಖರವಾಗಿ ಗುರುತಿಸಿ, ಧ್ವಂಸ ಮಾಡಲು ಈ ಡ್ರೋನ್ಗಳಲ್ಲಿನ ಕೃತಕ ಬುದ್ಧಿಮತ್ತೆ ತಂತ್ರಾಂಶ ನೆರವಾಗಲಿದೆ ಎಂದು ಹೇಳಲಾಗುತ್ತಿದೆ. ಹೆಸರೇ ಹೇಳುವಂತೆ `ಡ್ರೋನ್ಗಳ ಸಮೂಹ’ವು ಗರರಿಷ್ಟ ಸಂಖ್ಯೆಯ ಡ್ರೋನ್ಗಳನ್ನು ಒಳಗೊಂಡಿರುತ್ತದೆ.
ಈ `ಡ್ರೋನ್ ಸಮೂಹ’ವನ್ನು ಒಂದೇ ಕೇಂದ್ರದಿಂದ ನಿಯಂತ್ರಿಸಲಾಗುತ್ತದೆ. ಯಾವುದೇ ಕರ್ಯಾಚರಣೆ ಕೈಗೊಂಡ ಸಂದರ್ಭದಲ್ಲಿ ವಿವಿಧ ಕಾರಣಗಳಿಂದಾಗಿ ಕೆಲವು ಡ್ರೋನ್ಗಳು ಕಾರ್ಯವನ್ನು ನಿಲ್ಲಿಸಿದರೂ, `ಸಮೂಹ’ವು ತನ್ನ ಕಾರ್ಯ ಪೂರ್ಣ ಗೊಳಿಸಿ ಹಿಂದಿರುಗುತ್ತದೆ’ ಎಂದು ಸೇನೆಯ ಸಾರ್ವಜನಿಕ ಮಾಹಿತಿ ವಿಭಾಗದ ಹೆಚ್ಚುವರಿ ಮಹಾನಿರ್ದೇಶನಾಲಯ ಟ್ವೀಟ್ ಮಾಡಿದೆ.
#KnowYourArmy#SwarmDrones being inducted into the Mechanised Forces, duly embracing the niche & disruptive technologies, will provide an edge to #IndianArmy in meeting future security challenges.#AtmaNirbharBharat #IndianArmy #InStrideWithTheFuture pic.twitter.com/Ly4A9BieAV
— ADG PI – INDIAN ARMY (@adgpi) August 26, 2022
ಕುಡಿದ ಮತ್ತಿನಿಂದ ರೈಲ್ವೇ ಹಳಿಯಲ್ಲಿ ಮಲಗಿದ…! ಮುಂಜಾನೆ ವೇಳೆಗೆ ಶವವಾದ…!
ಮಂಡ್ಯ: ಹನಿಟ್ರ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಅಸಲಿ ಕಹಾನಿಯೇ ಬೇರೆ…!