Monday, December 23, 2024

Latest Posts

ಅಪ್ಪು ಕನಸಿನ ಬಗ್ಗೆ ರಮ್ಯಾ ಮನಸಿನ ಮಾತು…!

- Advertisement -

Film News:

ಅಪ್ಪು ಮರೆಯಲಾರದ ಕರುನಾಡ ಮಾಣಿಕ್ಯ . ಅಪ್ಪು ಅಕಾಲಿಕ ಮರಣಕ್ಕೆ ಕರುನಾಡು ಕಂಬನಿಯಾಗಿತ್ತು. ಅಭಿಮಾನಿಗಳ ನಿರಂತರ ಸ್ವಪ್ನವಾಗಿರೋ ರಾಜಕುಮಾರನ ಕನಸಿನ ಬಗ್ಗೆ  ಮಾತು ಕೇಳಿ ಬರುತ್ತಿದೆ. ಹೌದು  ಪುನೀತ್ ರಾಜ್ ಕುಮಾರ್ ನ ಈಡೇರದ ಕನಿನ ಬಗ್ಗೆ ಇಂದು ರಮ್ಯಾ ಮಾತಾಡಿದ್ದಾರೆ.

ಅಭಿ ಚಿತ್ರದ ಮೂಲಕ  ಕರುನಾಡಿನ ಜನತೆ ಪರಿಚಿತವಾದ ರಮ್ಯಾ ಪುನೀತ್ ಜೋಡಿ ನಿರಂತರ ಸಕ್ಸಸ್ ಗಳ ಸುರಿಮಳೆಯನ್ನೇ ತಂದೊಡ್ಡಿತು. ಆದರೆ ಪುನೀತ್ ಆ ಒಂದು ಚಿತ್ರದ ಕನಸು ಮಾತ್ರ ಈಡೇರಲೇ ಇಲ್ಲವಂತೆ. “ನಾ ನಿನ್ನ ಮರೆಯಲಾರೆ’ ಅಪ್ಪು ಕನಸಿ ಚಿತ್ರವನ್ನು ರೀ-ಕ್ರಿಯೇಟ್​ ಮಾಡುವ ಬಗ್ಗೆ ಪುನೀತ್​ ರಾಜ್​ಕುಮಾರ್​ ಕನಸು ಕಂಡಿದ್ದರು. ಈ ಕುರಿತು ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.

ಅಪ್ಪು ಅನೇಕ ಕನಸುಗಳನ್ನು ಕಂಡಿದ್ದರು. ಅವುಗಳ ಬಗ್ಗೆ ಈಗ ಒಂದೊಂದಾಗಿಯೇ ತಿಳಿಯುತ್ತಿದೆ. ಅಚ್ಚರಿ ಎಂದರೆ, ನಟಿ ರಮ್ಯಾ ಜೊತೆ ‘ನಾ ನಿನ್ನ ಮರೆಯಲಾರೆ’ ಸಿನಿಮಾವನ್ನು ರೀ-ಕ್ರಿಯೇಟ್​ ಮಾಡುವ ಆಸೆ ಅವರಿಗೆ ಇತ್ತು. ಆ ಕುರಿತು ಈಗ ವಿಷಯ ಹೊರಬಿದ್ದಿದೆ. ಆದರೆ ಕಾಲ ಮಿಂಚಿ ಹೋಗಿದೆ.

ಡಾ. ರಾಜ್​ಕುಮಾರ್​ ಅಭಿನಯದ ‘ನಾ ನಿನ್ನ ಮರೆಯಲಾರೆ’ ಸಿನಿಮಾ 1976ರಲ್ಲಿ ಬಿಡುಗಡೆ ಆಯಿತು. ನಾಯಕಿಯಾಗಿ ಲಕ್ಷ್ಮಿ ನಟಿಸಿದ್ದರು. ಪ್ರೇಕ್ಷಕರ ಫೇವರಿಟ್​ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರಕ್ಕೆ ಇಂದಿಗೂ ಸ್ಥಾನವಿದೆ. ಈ ಸಿನಿಮಾವನ್ನು ಈಗಿನ ಕಾಲಕ್ಕೆ ತಕ್ಕಂತೆ ರೀಕ್ರಿಯೇಟ್​ ಮಾಡಬೇಕು ಎಂಬುದು ಪುನೀತ್​ ರಾಜ್​ಕುಮಾರ್​ ಅವರ ಆಸೆ ಆಗಿತ್ತು. ಲಕ್ಷ್ಮಿ ಮಾಡಿದ್ದ ಪಾತ್ರಕ್ಕೆ ರಮ್ಯಾ, ಅಣ್ಣಾವ್ರ ಪಾತ್ರಕ್ಕೆ ಪುನೀತ್​ ಬಣ್ಣ ಹಚ್ಚಬೇಕಿತ್ತು. ಆದರೆ ಆ ಕನಸು ಕನಸಾಗಿಯೇ ಉಳಿಯುವಂತಾಗಿದ್ದು ಬೇಸರದ ಸಂಗತಿ ಆಗಿದೆ.

ಈ ವಿಚಾರದ ಕುರಿತು ರಮ್ಯಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ‘ಇದು ನಿಜ. ಅಪ್ಪು ಮತ್ತು ನಾನು ಈ ವಿಷಯದ ಬಗ್ಗೆ ಮಾತನಾಡಿದ್ದೆವು. ಅವರನ್ನು ನಾವು ತುಂಬ ಮಿಸ್​ ಮಾಡಿಕೊಳ್ಳುತ್ತೇವೆ’ ಎಂದು ರಮ್ಯಾ ಟ್ವೀಟ್​ ಮಾಡಿದ್ದಾರೆ. ಅಲ್ಲದೇ, ‘ಲಕ್ಕಿ ಮ್ಯಾನ್​’ ಚಿತ್ರತಂಡಕ್ಕೆ ಹಾಗೂ ಡಾರ್ಲಿಂಗ್​ ಕೃಷ್ಣ ಅವರಿಗೆ ರಮ್ಯಾ ಶುಭ ಹಾರೈಸಿದ್ದಾರೆ. ‘ಅಭಿ’, ‘ಅರಸು’, ‘ಆಕಾಶ್​’ ಸಿನಿಮಾದಲ್ಲಿ ರಮ್ಯಾ ಮತ್ತು ಪುನೀತ್​ ಜೊತೆಯಾಗಿ ನಟಿಸಿದ್ದರು. ಇಬ್ಬರ ನಡುವೆ ಉತ್ತಮ ಸ್ನೇಹ ಮನೆ ಮಾಡಿತ್ತು. ರಮ್ಯಾ ಮತ್ತೆ ಚಿತ್ರರಂಗದಲ್ಲಿ ಸಕ್ರಿಯವಾಗಲಿ ಎಂದು ಪುನೀತ್​ ಬಯಸಿದ್ದರು ಎಂದು ಹೇಳಲಾಗಿದೆ.

 

 

ನಂದು ಬಗ್ಗೆ ಸಿಟ್ಟಾಗಿದ್ಯಾಕೆ ಜಯಶ್ರೀ..!

 

ಬಿಗ್ ಬಾಸ್ ಸೀಸನ್ 9ಗೆ ಕಾಲಿಡಲಿದ್ದಾರಾ ಕಾಫಿನಾಡು ಚಂದು…!

ಬೆಂಗಳೂರಿಗರ ನೆರವಿಗೆ ನಿಂತ ಕಿಚ್ಚ ಸುದೀಪ್…!

- Advertisement -

Latest Posts

Don't Miss