Tuesday, December 24, 2024

Latest Posts

ತ್ರಿವೇಣಿ ಸಂಗಮದಲ್ಲಿ ಅಕ್ಟೋಬರ್ 13,14,15 ಮತ್ತು 16 ರಂದು ಕುಂಭಮೇಳ: ಸಚಿವ ನಾರಾಯಣಗೌಡ

- Advertisement -

State News:

ಕೆ.ಆರ್.ಪೇಟೆ ತಾಲ್ಲೂಕಿನ ತ್ರಿವೇಣಿ ಸಂಗಮದಲ್ಲಿ ಅಕ್ಟೋಬರ್ 13,14,15 ಮತ್ತು 16 ರಂದು 4ದಿನ ಕಾಲ ಕುಂಭಮೇಳ ನಡೆಯಲಿದೆ. ಈ ಬೃಹತ್ ಕುಂಭಮೇಳ ಕಾರ್ಯ ಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಸಹಕರಿಸಿ ಎಂದು ಅಧಿಕಾರಿಗಳಿಗೆ ರೇಷ್ಮೆ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರಾದ ಡಾ. ಕೆ.ಸಿ. ನಾರಯಣ ಗೌಡ ಅವರು ತಿಳಿಸಿದರು.ಕೆ.ಆರ್.ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ ಯಾತ್ರಿ ನಿವಾಸದಲ್ಲಿ ಮಹಾಕುಂಭಮೇಳ ಆಚರಣೆ ಹಿನ್ನಲೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ರಾಜ್ಯದ ಮುಖ್ಯಮಂತ್ರಿಗಳು, ಮಹಾಸ್ವಾಮೀಜಿಗಳು ಹಾಗೂ ಇನ್ನಿತರ ಗಣ್ಯರು ಆಗಮಿಸಲಿದ್ದಾರೆ. ಯಾವುದೇ ರೀತಿಯ ಕುಂದು ಕೊರತೆಗಳು ಆಗದ ರೀತಿಯಲ್ಲಿ ಕಾರ್ಯನಿರ್ವಹಿಸಿ ಎಂದು ಹೇಳಿದರು.ದೇವಸ್ಥಾನ ಅಭಿವೃದ್ಧಿ, ರಸ್ತೆ ಕಾಮಗಾರಿ ಹಾಗೂ ಇನ್ನಿತರ ಮೂಲಸೌಕರ್ಯಗಳನ್ನು ಶೀಘ್ರದಲ್ಲೇ ಪೂರ್ಣ ಮಾಡಿ ಕುಂಭಮೇಳ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಕ್ರಮವಹಿಸಿ ಎಂದು ಸೂಚನೆ ನೀಡಿದರು

ಧಾರ್ಮಿಕ ಕಾರ್ಯಕ್ರಮಗಳು ಹಿಂದಿನ ಪರಂಪರೆಯಂತೆ ನಡೆಯಬೇಕು, ಲೇಸರ್ ಶೋ,ವಿವಿಧ ಶೈಲಿಯ ದೀಪಾಲಂಕಾರ, ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ನಡೆಯಬೇಕು ಎಂದರು.ಪೂರ್ವಭಾವಿ ಸಭೆಯ ನಂತರ ಸಚಿವರು ಅಧಿಕಾರಿಗಳೊಂದಿಗೆ ಕುಂಭಮೇಳ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್.ಅಶ್ವತಿ, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ಜಿ.ಪಂ. ಸಿಇಒ ಶಾಂತಾ ಎಲ್. ಹುಲ್ಮನಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ್, ಜಿ.ಪಂ.ಉಪಕಾರ್ಯದರ್ಶಿ ಸರಸ್ವತಿ, ಉಪವಿಭಾಗಾಧಿಕಾರಿ ಬಿ.ಸಿ ಶಿವಾನಂದಮೂರ್ತಿ, ಸಚಿವರ ಆಪ್ತ ಕಾರ್ಯದರ್ಶಿಗಳಾದ ಹೆಚ್.ಜಿ ಪ್ರಭಾಕರ್, ತಹಶೀಲ್ದಾರ್ ಎಂ.ವಿ.ರೂಪ, ಆಳ್ವಸ್ ಸಂಸ್ಥೆಯ ಮೋಹನ್ ಆಳ್ವ, ಸೇರಿದಂತೆ ಇತರರು ಉಪಸ್ಥಿತರಿದ್ದರು.

ಜನಸ್ಪಂದನ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಜೆ.ಪಿ ನಡ್ಡಾ, ಸ್ಮೃತಿ ಇರಾಣಿ..!

ಚಿಕ್ಕಮಗಳೂರು: ಕಾಡಾನೆ ದಾಳಿಗೆ ವ್ಯಕ್ತಿ ಬಲಿ, ಗ್ರಾಮಸ್ತರ ಆಕ್ರೋಶ..!

ಯಮಲೂರಿನಲ್ಲಿ ಗ್ರಾಮದೇವರಿಗೆ ದಿಗ್ಬಂಧನ…!

- Advertisement -

Latest Posts

Don't Miss