National News:
ಆಂಧ್ರಪ್ರದೇಶದಲ್ಲಿ ಆನ್‌ಲೈನ್ ಸಾಲದ ಆ್ಯಪ್‌ನ ಏಜೆಂಟ್‌ಗಳ ಕಿರುಕುಳ ಸಹಿಸಲಾಗದೆ ದಂಪತಿಗಳು ತಮ್ಮ ಪುತ್ರಿಯೊಬ್ಬರ ಹುಟ್ಟುಹಬ್ಬದಂದೇ ನೇಣಿಗೆ ಶರಣಾದ ಘಟನೆ ನಡೆದಿದೆ.
ದುರ್ಗಾ ರಾವ್ ವೃತ್ತಿಯಲ್ಲಿ ರ‍್ವ ಪೈಂಟರ್ ಆಗಿದ್ದು, ರಮ್ಯಾ ಲಕ್ಷ್ಮಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು. ಕುಟುಂಬದಲ್ಲಿಎದುರಾದ ಕೆಲ ಸಂಕಷ್ಟದಿಂದಾಗಿ ಇವರು ಎರಡು ಆನ್ಲೈನ್ ಮೊಬೈಲ್ ಆಪ್‌ಗಳ ಮೂಲಕ ಲೋನ್‌ಗೆ ರ‍್ಜಿ ಸಲ್ಲಿಸಿ ಸಾಲ ಪಡೆದಿದ್ದರು. ಆದರೆ ಅವರಿಗೆ ನಿಗದಿತ ಸಮಯಕ್ಕೆ ಈ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಲೋನ್ ಆಪ್ ಸಿಬ್ಬಂದಿ ಇವರಿಗೆ ಕರೆ ನೀಡಿ ಕಿರುಕುಳ ನೀಡಲು ಶುರು ಮಾಡಿದ್ದರು. ಈ ನಡುವೆ ದಂಪತಿ ಸಾಲದ ಸ್ವಲ್ಪಮೊತ್ತವನ್ನು ಪಾವತಿ ಮಾಡಿದ್ದರು. ಆದರೆ ಪೂರ್ತಿ ಮೊತ್ತವನ್ನು ಪಾವತಿ ಮಾಡಲಾಗಿರಲಿಲ್ಲ. ಈ ಕಾರಣದಿಂದಾಗಿ ತನ್ನ ಮಕ್ಕಳನ್ನು ಚೆನ್ನಾಗಿ ನೋಡಿ ಕೊಳ್ಳಿ ಎಂದು ಸಂಬಂಧಿಕರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
“ತಾಕತ್ತಿದ್ದರೆ ಬಿಜೆಪಿಯವರನ್ನು ತಡೆಯಿರಿ ನೋಡೋಣ” : ಕಾಂಗ್ರೆಸ್ ಗೆ ಸಿಎಂ ಬೊಮ್ಮಾಯಿ ಸವಾಲ್
ರೈಲು ಹಳಿಯಲ್ಲಿ ಸಿಲುಕಿದಾತ ಬದುಕಿ ಬಂದ…! ರೈಲ್ವೇ ನಿಲ್ದಾಣದಲ್ಲಿ ಹೀಗೊಂದು ಪವಾಡ…!