Special News:
ಪೂರ್ಣಗಿರಿ ಜನಶತಾಬ್ದಿ ರೈಲು ನಿಲ್ದಾಣದಿಂದ ಹೊರಟಿದೆ. ಈ ವೇಳೆ ಅಚಾತುರ್ಯವೊಂದು ನಡೆದಿದೆ. ರೈಲು ಹತ್ತಲು ವ್ಯಕ್ತಿಯೊಬ್ಬರು ಯತ್ನಿಸಿದ್ದಾರೆ. ಇನ್ನೇನು ಕೊನೆಯ ಬೋಗಿಯೂ ತಪ್ಪಿಬಿಡುತ್ತದೆ ಎಂದು ಅವಸರವಾಗಿ ಹತ್ತಿದ್ದಾರೆ. ಈ ವೇಳೆ ಕಾಲು ಜಾರಿ ಫ್ಲಾಟ್ಫಾರ್ಮ್ಗೆ ಬಿದಿದ್ದು, ರೈಲು ಅವರನ್ನು ಎಳೆದುಕೊಂಡು ಹೋಗಿದೆ. ಇದನ್ನು ನೋಡಿದ ಸಹಾಯಕ ಸಬ್ಇನ್ಸ್ಪೆಕ್ಟರ್, ಕೂಡಲೇ ಅವರನ್ನು ಎಳೆದು ರಕ್ಷಣೆ ಮಾಡಿದ್ದಾರೆ. ಈ ಘಟನೆಯ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಯ ಪಾಲಿಗೆ ಆಪದ್ಬಾಂಧವನಾಗಿ ಪೊಲೀಸ್ ಸಿಬ್ಬಂದಿ ರಾಜೇಂದ್ರ ಸಿಂಗ್ ಅವರು ಬಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಶ್ಲಾಘಿಸಿದ ರ‍್ಪಿಎಫ್, ಎಎಸ್ಐ ರಾಜೇಂದ್ರ ಸಿಂಗ್ ಅವರು ದುರಂತವೊಂದನ್ನು ತಪ್ಪಿಸಿದರು, ಗಾಜಿಯಾಬಾದ್ ರೈಲ್ವೇ ನಿಲ್ದಾಣದಲ್ಲಿ ಚಲಿಸುವ ರೈಲಿನೊಂದಿಗೆ ಹತ್ತುತ್ತಿರುವಾಗ ಜಾರಿಬಿದ್ದ ಪ್ರಯಾಣಿಕನಿಗೆ ಹೊಸ ಜೀವನ ನೀಡಿದರು ಎಂದು ಹೇಳಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
#AngelInKhaki#RPF ASI Rajendra Singh averted a tragedy and gave a new lease of life to a passenger who slipped while boarding & was dragging along with the moving train at Ghaziabad Railway Station.#MissionJeewanRaksha#LifesavingAct@RailMinIndia @rpfnr_ pic.twitter.com/xcEw4jaazZ
— RPF INDIA (@RPF_INDIA) September 12, 2022
ಮಂಡ್ಯ: ಡಿಸಿ ಕಚೇರಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಪ್ರತಿಭಟನೆ