Tuesday, October 14, 2025

Latest Posts

ದರ್ಶನ್ ರಾಬರ್ಟ್ ಸಿನಿಮಾಕ್ಕೆ ಸೈಮಾ ಅವಾರ್ಡ್ ಗಳ ಸುರಿಮಳೆ…!

- Advertisement -

Film News:

ಸಿಲಿಕಾನ್ ಸಿಟಿಯಲ್ಲಿ ಸ್ಟಾರ್ ಗಳು ಕಮಾಲ್ ಮಾಡುತ್ತಿದ್ದಾರೆ. ಬೆಂಗಳೂರಲ್ಲಿ ಕಳೆದೆರಡು ದಿನಗಳಿಂದ ಸೈಮಾ ಅವಾರ್ಡ್ ಕಾರ್ಯಕ್ರಮ ನಡೆಯುತ್ತಿದೆ. ಸೈಮಾ ಅವಾರ್ಡ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಈ ಬಾರಿ ಕರುನಾಡ ಮಾಣಿಕ್ಯ ಅಪ್ಪುವಿಗೆ ಅರ್ಪಣೆ ಮಾಡಲಾಗಿದೆ. ಧಕ್ಷಿಣ ಭಾರತದ ತಾರೆಯರ ಜೊತೆ ಬಾಲಿವುಡ್ ನಟ ನಟಿಯರು ಕುಣಿದು ಕುಪ್ಪಳಿಸಿದ್ದಾರೆ. ಬಾದ್ ಶಾ ಕೂಡಾ ಸೈಮಾ ಅವಾರ್ಡ್ ನಲ್ಲಿ ಕಾಣಿಸಿಕೊಂಡು ಶಿವಣ್ಣ ಕೆನ್ನೆಗೆ ಗಿಂಡಿ ಸುದ್ದಿಯಾಗಿದ್ದಾರೆ. ಸೈಮಾ ಅವಾರ್ಡ್ ನಲ್ಲಿ ದಚ್ಚು ಹವಾ ಹೇಗಿತ್ತು ಯಾವ್ಯಾವ ಸ್ಟಾರ್ ಯಾವೆಲ್ಲಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ ಹೇಳ್ತೀವಿ ಈ ಸ್ಟೋರಿಯಲ್ಲಿ.
ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲಿ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ನಡೀತಿದೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಕಳೆದ ವರ್ಷ ತೆರೆಕಂಡ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 10ನೇ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತಿರುವುದು ವಿಶೇಷ. ದಕ್ಷಿಣ ಭಾರತದ ತಾರೆಯರ ಜೊತೆಗೆ ಬಾಲಿವುಡ್ ತಾರೆಯರು ಒಂದೇ ಅದ್ಧೂರಿ ವೇದಿಕೆಯಲ್ಲಿ ಕಾಣಿಸಿಕೊಂಡು ರಂಗೇರಿಸಿದ್ದಾರೆ.
ಕಮಲ್ ಹಾಸನ್, ರಣ್‌ವೀರ್ ಸಿಂಗ್, ರ‍್ಶನ್, ಯಶ್, ಅಲ್ಲು ರ‍್ಜುನ್, ಶಿವರಾಜ್‌ಕುಮಾರ್ ಸೇರಿದಂತೆ ಸಾಕಷ್ಟು ಸೂಪರ್ ಸ್ಟಾರ್‌ಗಳು ಈವೆಂಟ್‌ನಲ್ಲಿ ಭಾಗಿಯಾಗಿದ್ದಾರೆ. ಕರ‍್ಯಕ್ರಮ ಶೀಘ್ರದಲ್ಲೇ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸದ್ಯ ಕರ‍್ಯಕ್ರಮಕ್ಕೆ ಸಂಬಂಧಿಸಿದ ಕೆಲ ಸಣ್ಣಪುಟ್ಟ ಫೋಟೊಗಳು, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಹಲತ್ತು ಹಲವು ಸುಂದರ ಕ್ಷಣಗಳಿಗೆ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಸಾಕ್ಷಿಯಾಗುತ್ತಿದೆ.ದರ್ಶನ್ ರಾಬರ್ಟ್ ಸಿನಿಮಾಕ್ಕೆ ಸೈಮಾ ಅವಾರ್ಡ್ ಗಳ ಸುರಿಮಳೆಯೇ ಬಂದಿದೆ. ಹೌದು ದರ್ಶನ್ ಸಿನಿಮಾ ರಾಬರ್ಟ್ ಇದೀಗ ಅನೇಕ ಅವಾರ್ಡ್ ಗಳನ್ನು ತನ್ನ ಭತ್ತಳಿಕೆಗೆ ಸೇರಿಸಿಕೊಂಡಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಈ ಬಾರಿಯ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕನ್ನಡದ ಪರ ಮೊದಲನೇ ಪ್ರಶಸ್ತಿಯನ್ನು ಬಾಚಿಕೊಳ್ಳುವುದರ ಮೂಲಕ ಖಾತೆಯನ್ನು ತೆರೆದಿದೆ.

ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ:
ಈ ಬಾರಿಯ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್‌ನಲ್ಲಿ 10 ವಿಭಾಗಗಳಲ್ಲಿ ನಾಮಿನೇಟ್ ಆಗಿದ್ದ ರಾಬರ್ಟ್ ಚಿತ್ರದ ಛಾಯಾಗ್ರಾಹಕ ಸುಧಾಕರ್ ರಾಜ್ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನು ಗೆದ್ದಿದ್ದಾರೆ. ರಾಬರ್ಟ್ ಚಿತ್ರದಲ್ಲಿನ ತನ್ನ ಅದ್ಭುತ ಕ್ಯಾಮೆರಾ ಕೈಚಳಕಕ್ಕೆ ಸುಧಾಕರ್ ರಾಜ್ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಉತ್ತಮ ಗೀತರಚನೆಕಾರ ವಾಸುಕಿ ವೈಭವ್:
ಉತ್ತಮ ಗೀತರಚನೆಕಾರ ವಾಸುಕಿ ವೈಭವ್ ಇನ್ನು ಈ ಸೈಮಾ ಕಾರ್ಯಕ್ರಮದಲ್ಲಿ ಕನ್ನಡದ ಎರಡನೇ ಪ್ರಶಸ್ತಿ ಕೂಡ ಘೋಷಣೆಗೊಂಡಿದ್ದು, ಅಣ್ಣಾವ್ರ ಮೊಮ್ಮಗಳು ಧನ್ಯ ರಾಮ್‌ಕುಮಾರ್ ಅಭಿನಯಿಸಿದ್ದ ನಿನ್ನ ಸನಿಹಕೆ ಚಿತ್ರದ ನೀ ಪರಿಚಯ ಹಾಡನ್ನು ಬರೆದಿದ್ದ ಗಾಯಕ ವಾಸುಕಿ ವೈಭವ್ ಕನ್ನಡ ವಿಭಾಗದ ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.

ಅತ್ಯುತ್ತಮ ಸಂಗೀತ ನಿರ್ದೇಶಕ – ಅರ್ಜುನ್ ಜನ್ಯ (ರಾಬರ್ಟ್) ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಸಂಗೀತ ನಿರ್ದೇಶನ ಮಾಡಿರೋದು ಅರ್ಜುನ್ ಜನ್ಯ . ಈ ಬಾರಿ ಸೈಮಾ ಅವಾರ್ಡ್ ನಲ್ಲಿ ಇದೀಗ ಅತ್ಯುತ್ತಮ ಸಂಗೀತ ನಿರ್ದೇಶಕ ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಸೋನು ಗೌಡಗೆ ಬೇಕಂತೆ 24 ವಯಸ್ಸಿನ ಹುಡುಗ..?!

ಪಂಚಭೂತಗಳಲ್ಲಿ ಲೀನವಾದ ರೆಬಲ್ ಸ್ಟಾರ್ ಕೃಷ್ಣಂ ರಾಜು

ತಾಯಿಯಾದ ಮೇಲೆ ಪ್ರಣೀತಾ ಹೇಗಿದ್ದಾರೆ ಗೊತ್ತಾ..?! ಮತ್ತೆ ಗುಡ್ ನ್ಯೂಸ್ ನೀಡಿದ ಪ್ರಣೀತಾ…!

- Advertisement -

Latest Posts

Don't Miss