- Advertisement -
State News:
ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದೆ. ಅಲ್ಲದೆ ಬೆಳಗಾವಿಯಲ್ಲೂನಿರಂತರ ಮಳೆಯಾಗುತ್ತಿದ್ದ ಜನರು ಸಂಕಷ್ಟಕ್ಕೀಡಾಗಿದ್ದಾರೆ.ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ, ಏಳು ನದಿಗಳು ಉಕ್ಕಿ ಹರಿಯುತ್ತಿವೆ. ಘಟಪ್ರಭಾ ನದಿ ನೀರು ಗೋಕಾಕ್ ನಗರಕ್ಕೆ ನುಗ್ಗಿದ್ದು, ಉಪ್ಪಾರ ಓಣಿಯ ಕೆಲ ಮನೆಗಳು ಮುಳುಗಿವೆ. ಬೆಳಗಾವಿ ಜಿಲ್ಲೆಯಲ್ಲಿ 19 ಸಂಪರ್ಕ ಸೇತುವೆಗಳು ಮುಚ್ಚಿಹೋಗಿವೆ. ಬೆಳಗಾವಿ ಜಿಲ್ಲೆಯಲ್ಲಿ ಘಟಪ್ರಭಾ, ಮಲಪ್ರಭಾ, ವೇದಗಂಗಾ, ದೂದಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ, ಕೃಷ್ಣಾ ನದಿ ಸೇರಿದಂತೆ ಸಪ್ತ ನದಿಗಳು ಹರಿಯುತ್ತವೆ. ಜನ ಕಂಗಾಲಾಗಿದ್ದಾರೆ.
ಬಾಲಕರನ್ನು ಬೆನ್ನಟ್ಟಿದ ಬೀದಿ ನಾಯಿಗಳು: ಬಾಲಕರು ಎಸ್ಕೇಪ್ ಆಗಿದ್ದು ಹೇಗೆ..?!
- Advertisement -