Film News:
ಇತ್ತೀಚೆಗಷ್ಟೇ ಮದುವೆಯಾದ ನಟಿ ಲೈವ್ ಬಂದು ತನ್ನ ಗಂಡನಿಗೆ ದಯವಿಟ್ಟು ಅವಮಾನ ಮಾಡಬೇಡಿ ಎಂದು ಬೇಡಿ ಕೊಂಡಿದ್ದಾರೆ. ಪ್ರೊಡ್ಯೂಸರ್ ನನ್ನೇ ಮದುವೆ ಆದ್ರು ಆ ನಟಿ ಹೀಗೆ ಹೇಳಿದ್ದೇಕೆ ..? ನಟಿಯ ಕೋಪ ಯಾರ ಮೇಲೆ..? ಹೇಳ್ತೀವಿ ಈ ಸ್ಟೋರಿಯಲ್ಲಿ
ತಮಿಳು ನಟಿ-ನಿರೂಪಕಿ ಮಹಾಲಕ್ಷ್ಮಿ ಹಾಗೂ ನರ‍್ಮಾಪಕ ರವೀಂದರ್ ಚಂದ್ರಶೇಖರನ್ ಮದುವೆಯ ಸುದ್ದಿ ಹಾಟ್ ಟಾಪಿಕ್ ಆಗಿದೆ. ಕೆಲವೇ ದಿನಗಳ ಹಿಂದೆ ಈ ಜೋಡಿಯ ಕಲ್ಯಾಣ ನೆರವೇರಿತು. ಸೋಶಿಯಲ್ ಮೀಡಿಯಾದಲ್ಲಿ ಮದುವೆ ಫೋಟೋಗಳು ಸಖತ್ ವೈರಲ್ ಆದವು. ಫೋಟೋ ನೋಡಿದ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕ ಮೀಮ್ಸ್ ಹರಿದಾಡುತ್ತಿವೆ. ಎಲ್ಲದರಲ್ಲೂ ರವೀಂದರ್ ಚಂದ್ರಶೇಖರನ್ ಅವರಿಗೆ ಅವಮಾನ ಮಾಡಲಾಗಿದೆ. ಇದು ಮಹಾಲಕ್ಷ್ಮಿ ಅವರ ಗಮನಕ್ಕೂ ಬಂದಿದೆ. ಹಾಗಾಗಿ ಇನ್ಸ್ಟಾಗ್ರಾಮ್ನಲ್ಲಿ ಲೈವ್ ಬಂದಿರುವ ಅವರು ‘ನನ್ನ ಗಂಡನಿಗೆ ಅವಮಾನ ಮಾಡಬೇಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.
ಪತ್ನಿ ಮಹಾಲಕ್ಷ್ಮಿಗೆ ರವೀಂದರ್ ಚಂದ್ರಶೇಖರ್ ಅವರು ದುಬಾರಿ ಗಿಫ್ಟ್ಗಳನ್ನು ನೀಡಿದ್ದಾರೆ ಎಂಬ ಕುರಿತು ಗುಸುಗುಸು ಕೇಳಿಬರುತ್ತಿದೆ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಭರಣ, ಸೀರೆ, ಬಂಗಲೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ ಎಂದು ಕೆಲವು ಕಡೆ ಸುದ್ದಿ ಬಿತ್ತರ ಆಗಿದೆ. ಆದರೆ ಈ ವಿಚಾರಗಳ ಬಗ್ಗೆ ಮಹಾಲಕ್ಷ್ಮಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
‘ಫಸ್ಟ್ಲುಕ್’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಮಹಾಲಕ್ಷ್ಮಿ ನಟಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಸಕ್ರಿಯರಾಗಿದ್ದಾರೆ. ಪತಿಯ ಜೊತೆ ಇರುವ ಹಲವು ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಿದ್ದಾರೆ. ಮನಸ್ಸಿಗೆ ಬಂದಂತೆ ಟ್ರೋಲ್ ಮಾಡುವವರ ಬಗ್ಗೆ ಅವರು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ ಎನ್ನಲಾಗಿದೆ.