Udupi News:
ಉಡುಪಿಯಲ್ಲಿ ಇಂದ್ರಾಳಿ ಬ್ರಿಡ್ಜ್ ನ ಹೊಂಡ ಗುಂಡಿ ರಸ್ತೆಗೆ ಆರತಿ ಎತ್ತಿ, ತೆಂಗಿನಕಾಯಿ ಒಡೆದು ರಸ್ತೆ ಮೇಲೆ ಉರುಳು ಸೇವೆ ಮಾಡುವ ಮೂಲಕ ನಿತ್ಯಾನಂದ ಒಳಕಾಡು ರವರು ವಿಶಿಷ್ಟವಾಗಿ ಪ್ರತಿಭಟಿಸಿದರು.
ಇಲ್ಲಿನ ಹೊಂಡ ಗಳನ್ನು ರಿಪೇರಿ ಮಾಡಲು ಸ್ವತಹ ಮೋದಿ ಮತ್ತು ನಿತಿನ್ ಗಡ್ಕರಿ ಬರಬೇಕಾದ ಅನಿವರ‍್ಯತೆ ಇದೆ. ಉಡುಪಿ ಜನರು ಮುಗ್ದರು, ಯಾರೂ ಪ್ರಶ್ನೆ ಮಾಡುವುದಿಲ್ಲ. ಮಾನ್ಯ ಪ್ರಧಾನ ಮಂತ್ರಿಗಳು ಉಡುಪಿಗೆ ಬಂದು ಜನರ ಸಮಸ್ಯೆ ಬಗೆಹರಿಸಲಿ. ಈ ರಸ್ತೆಯಲ್ಲಿ ಬೀದಿ ದೀಪ ಕೂಡಾ ಇಲ್ಲ. ಇದರಿಂದಾಗಿ ದನ ಕರುಗಳು ಸಾಯುತ್ತವೆ. ದನ ಕರುಗಳ ಹೆಸರಿನಲ್ಲಿ ವೋಟ್ ತೆಗೆದುಕೊಳ್ಳುವ ಇವರಿಗೆ ಇದು ಕಾಣುವುದಿಲ್ಲವಾ. ಮೊನ್ನೆ ಮುಖ್ಯಮಂತ್ರಿಯವರು ಬರುವ ಸಂರ‍್ಭದಲ್ಲಿ ಹಾಕಿದ ಡಾಮಾರ್ ಒಂದೇ ದಿನದಲ್ಲಿ ಕಿತ್ತು ಬಂದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೀದಿ ನಾಯಿಗಳನ್ನು ಕೊಲ್ಲಲು ಕೇರಳ ಸರಕಾರ ನಿರ್ಧಾರ…! ಸುಪ್ರೀಂ ಕೋರ್ಟ್ ಗೆ ಮನವಿ
ತಡರಾತ್ರಿ ಆಟೋ ಡ್ರೈವರ್ ಮನೆಯಲ್ಲಿ ಊಟ ಮಾಡಿದ ದೆಹಲಿ ಮುಖ್ಯಮಂತ್ರಿ..!

