Sunday, August 10, 2025

Latest Posts

ಪಾಪ..! ಕ್ಷಮಿಸಿಬಿಡಿ ಟೀಚರ್…!

- Advertisement -

Special News:

ಅಮ್ಮನ ತೋಳಿನಿಂದ ಬಂದ ಮಗುವಿಗೆ ಶಾಲೆಯಲ್ಲಿ ಶಿಕ್ಷಕರೇ ಎಲ್ಲ ಅಲ್ಲವೆ? ಪ್ರೀತಿಯಿಂದ ತಿದ್ದಿದಲ್ಲಿ ಮಕ್ಕಳ ಆತ್ಮವಿಶ್ವಾಸ ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ. ಆದರೆ ಅಷ್ಟೊಂದು ಮಕ್ಕಳನ್ನು ನೋಡಿಕೊಳ್ಳುವಾಗ ಟೀಚರ್​ಗೂ ಸುಸ್ತಾಗಿಬಿಡುತ್ತದೆ. ಆಗ  ಸಾಮಾನ್ಯವಾಗಿ ಟೀಚರ್ ಸಿಟ್ಟಾಗುತ್ತಾರೆ.

ಈ ವೀಡಿಯೋ ಒಮ್ಮೆ ನೋಡಿ ಪಾಪ ಅಲ್ವಾ? ಈ ಪುಟ್ಟಣ್ಣ ಏನೋ ತಪ್ಪುಮಾಡಿದ್ದಾನೆ. ಟೀರ‍್ಗೆ ಕೋಪ ಬಂದಿದೆ. ಇನ್ನೊಮ್ಮೆ ಹೀಗೆಲ್ಲ ಮಾಡಲ್ಲ ಕ್ಷಮಿಸಿ ಎಂದು ಕೇಳಿಕೊಂಡರೂ ಟೀಚರ್ ಮಾತ್ರ ಪುರಿಯಂತೆ ಗಲ್ಲ ಉಬ್ಬಿಸಿಕೊಂಡು ಕುಳಿತಿದ್ದಾರೆ.  ಅಸಹಾಯಕನಾದ ಪುಟ್ಟಣ್ಣನಿಗೆ ಕಣ್ಣುಗಳು ಉಕ್ಕುತ್ತಿವೆ. ಎದುರಿಗಿರುವವರು ಟೀಚರೋ ಅಮ್ಮನೋ ಎಂಬ ಗೊಂದಲ ಉಂಟಾಗಿರಲು ಸಾಕು. ಏನು ಮಾಡುವುದು? ನನ್ನನ್ನು ಟೀಚರ್ ಕ್ಷಮಿಸದಿದ್ದರೆ ಎಂಬ ಆತಂಕ ಮತ್ತೆ ಮತ್ತೆ ಕ್ಷಮೆ ಕೇಳುವ ಹಾಗೆ ಮಾಡುತ್ತಿದೆ. ಏನೂ ತೋಚದೆ, ಟೀಚರ್ ಕಣ್ಣಲ್ಲಿ ಕಣ್ಣಿಟ್ಟು ಅವರನ್ನು ತಬ್ಬಿಕೊಂಡು ಗಲ್ಲಕ್ಕೆ ಮುತ್ತು ಕೊಟ್ಟು ಕ್ಷಮೆ ಕೇಳಿಬಿಟ್ಟಿದ್ದಾನೆ! ಮನಸೋಲದಿದ್ದೀತೇ ಟೀಚರ್ಗೆ ಎನ್ನುತ್ತಾರೆ ನೆಟ್ಟಿಗರು.

10,58,564 ನೆಟ್ಟಿಗರು ಈ ವಿಡಿಯೋ ವೀಕ್ಷಿಸಿದ್ದಾರೆ. ಇನ್ನು ಪ್ರತಿಕ್ರಿಯೆಗಳು, ಮನಸಿನಂತೆ ಮಾದೇವ! ‘ರಣಬೀರ್​ ಕಪೂರ್ ಕಾ ಲಡಕಾ’ ಎಂದೊಬ್ಬರು ಪ್ರತಿಕ್ರಿಯಿಸಿದ್ದಾರೆ ಎಂದು  ಹೇಳಲಾಗುತ್ತಿದೆ.

 

- Advertisement -

Latest Posts

Don't Miss