Technology News:
ಇ ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್ ತನ್ನ ಬಹುನಿರೀಕ್ಷಿತ ಬಿಗ್ ಬಿಲಿಯನ್ ಡೇಸ್ ಸೇಲ್ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಇದೇ ಸೆಪ್ಟೆಂಬರ್ ೨೩ ರಂದು ಶುರುವಾಗಲಿದ್ದು, ಸೆಪ್ಟೆಂಬರ್ ೩೦ ರವರೆಗೆ ಚಾಲ್ತಿ ಇರಲಿದೆ. ಈ ಸೇಲ್ನಲ್ಲಿ ಫ್ಲಿಪ್ಕಾರ್ಟ್ ಕೆಲವು ಆಯ್ದ ಸ್ಮಾರ್ಟ್ ಫೋನ್ಗಳ ಮೇಲೆ ಬೊಂಬಾಟ್ ಕೊಡುಗೆಗಳನ್ನು ಲಭ್ಯ ಮಾಡಲಿದೆ.
ಫ್ಲಿಫ್ ಕಾರ್ಟ್ ತಾಣವು ಬಿಗ್ ಬಿಲಿಯನ್ ಡೇಸ್ ಸೇಲ್ ಆರಂಭಕ್ಕೂ ಮುನ್ನವೇ ಸ್ಮರ್ಟ್ಫೋನ್ ಡೀಲ್ಗಳ ಬಗ್ಗೆ ಟೀಸರ್ಗಳನ್ನು ಬಿಡಲು ಪ್ರಾರಂಭಿಸಿದೆ. ಇತ್ತೀಚಿನ ಟೀಸರ್ ಫ್ಲಿಪ್ಕರ್ಟ್ ಐಫೋನ್ ೧೩ ಫೋನ್ಗೆ ರ್ಜರಿ ಡಿಸ್ಕೌಂಟ್ ನೀಡುವ ಸೂಚನೆ ನೀಡಿದೆ. ಇತ್ತೀಚಿಗೆ ಆಪಲ್ ಸಂಸ್ಥೆಯು ಅಧಿಕೃತವಾಗಿ ಐಫೋನ್ ೧೩ ಸರಣಿಯಲ್ಲಿ ಬೆಲೆ ಇಳಿಕೆಯನ್ನು ಘೋಷಿಸಿತು. ಇದೀಗ ಫ್ಲಿಫ್ ಕಾರ್ಟ್ ಇ ಕಾಮರ್ಸ್ ತಾಣವು ರಿಯಾಯಿತಿ ತಿಳಿಸಿದೆ.
ಆಪಲ್ ಕಂಪನಿಯು ಈ ತಿಂಗಳ ಆರಂಭದಲ್ಲಿ ಐಫೋನ್ 13 ಬೆಲೆಯಲ್ಲಿ ಇಳಿಕೆ ಮಾಡಿದೆ. ಫೋನ್ನ 128 GB ರೂಪಾಂತರವು ಆಪಲ್ ಸಂಸ್ಥೆಯ ವೆಬ್ಸೈಟ್ನಲ್ಲಿ 69,900 ರೂ. ಗಳಿಗೆ ಲಭ್ಯವಿದೆ. ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಐಫೋನ್ 13 ಫೋನ್ ಬೆಲೆ 49,990 ರೂ. ಗಳಿಂದ ಪ್ರಾರಂಭವಾಗಲಿದೆ ಹಾಗೆಯೇ ಐಫೋನ್ 12 ಮಿನಿ 40,000 ರೂ. ಒಳಗೆ ದೊರೆಯಲಿದೆ ಎಂದು ಫ್ಲಿಪ್ಕಾರ್ಟ್ ದೃಢಪಡಿಸಿದೆ ಎಂದು ತಿಳಿದು ಬಂದಿದೆ.