- Advertisement -
Banglore News:
ಬೆಂಗಳೂರಿನಲ್ಲಿ ನಕಲಿ ವಾಚ್ ಮಾರಟ ಜಾಲ ಪತ್ತೆಯಾಗಿದೆ. ಪ್ರತಿಷ್ಠಿತ ಕಂಪನಿಗಳ ನಕಲಿ ವಾಚ್ ಮಾರಾಟ ಮಾಡ್ತಿದ್ದ ಆಸಾಮಿ ಸೈಯದ್ ಮೊಹಮ್ಮದ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಬಂಧಿತನಿಂದ 4.32 ಕೋಟಿ ಮೌಲ್ಯದ 83 ನಕಲಿ ವಾಚ್ ವಶಕ್ಕೆ ಪಡೆಯಲಾಗಿದೆ. ಶಿವಾಜಿನಗರದಲ್ಲಿ ವಾಚ್ ಮಾರಾಟ ಮಾಡ್ತಿದ್ದ ಆರೋಪಿ ಈ ವೇಳೆ ಸಿಸಿಬಿ ಪೊಲೀಸರ ಕೈಗೆ ಲಾಕ್ ಆಗಿದ್ದಾನೆ. ರೋಲೆಕ್ಸ್,ರ್ಯಾಡೊ,ಟಿಸ್ಸಾಟ್,ಫಾಸಿಲ್,ಗುಚಿ,ಹ್ಯೂಯ್ಲಾಟ್ ಕಂಪನಿಗಳ ನಕಲಿ ವಾಚ್ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- Advertisement -