devotional
ಶ್ರೀ ಆದಿ ಶಂಕರಾಚಾರ್ಯರು ರಚಿಸಿರುವ ಈ ಸ್ತೋತ್ರವನ್ನು ಭಕ್ತಿಇಂದ ,ಶ್ರದ್ಧೆಇಂದ ,ನಿಷ್ಠೆಇಂದ ಪ್ರೀತಿಇಂದ ಯಾರು ಪ್ರತಿನಿತ್ಯ ಪಠಿಸುತ್ತರೋ ಅವರಿಗೆ ಶ್ರೀ ಲಕ್ಷ್ಮಿ ಕೃಪೆ ದೊರಕುತ್ತದೆ ಹಾಗು ಅವರ ಜೀವನದಲ್ಲಿರುವಂಥಹ ಕಷ್ಟಗಳು ಇನ್ನಿಲವಾಗಿ ಸುಖ ಶಾಂತಿ ನೆಮದ್ದಿ ದೊರಕ್ಕುತ್ತದೆ ಈ ಶ್ಲೋಕವನ್ನು ಪ್ರತಿನಿತ್ಯ ೧೧ಬಾರಿ ಪಠಿಸಬೇಕು ಇದರಿಂದ ನಿಮ್ಮ ಪಾಪಗಳು ತೊಲಗಿ ಪುಣ್ಯ ಲಭಿಸುತ್ತದೆ ಹಾಗು ನಿಮ್ಮ ಕುಟುಂಬಕ್ಕೆ ಲಕ್ಷ್ಮಿ ದೇವಿಯ ಆಶೀರ್ವಾದ ಲಭಿಸುತ್ತದೆ. ಈ ಸ್ತೋತ್ರವು ಮನುಕುಲಕ್ಕೆ ವರದಾನವಾಗಿ ದೊರಕಿದೆ ಆದರೆ ಈ ಶ್ಲೋಕಕ್ಕೆ ಇಷ್ಟೊಂದು ಶಕ್ತಿ ಯುತವಾಗಿರಲು ಕಾರಣವಾದರು ಏನು ಎಂದು ತಿಳ್ಕೊಳೋಣ ಬನ್ನಿ .
ಪುಟ್ಟ ಬಾಲಕನಾದ ಶ್ರೀ ಆದಿ ಶಂಕರಾಚಾರ್ಯರು ಒಮ್ಮೆ ಭಿಕ್ಷೆಗಾಗಿ ಹೋಗುತ್ತಾರೆ ಅಲ್ಲಿ ಹತ್ತಿರ ವಿರುವ ಒಬ್ಬ ಬಡ ಬ್ರಾಹ್ಮಣ ಮಹಿಳೆಯ ಮನೆಯ ಮುಂದೆ ಭಿಕ್ಷೆಗಾಗಿ ನಿಂತು ಭವತಿ ಬಿಕ್ಷಾದೇಹಿ ಎಂದು ಕೇಳುತ್ತಾರೆ ಹಗ ಗುಡಿಸಿಲಿನ ಒಳಗಿನಿಂದ ಒಬ್ಬ ವಯಸ್ಸಾದ ಮಹಿಳೆ ಹೊರಗಡೆ ಬರುತ್ತಾಳೆ ಹಾಗ ಶಂಕರ ಚಾರ್ಯರು ಅಮ್ಮ ತಿನ್ನಲು ಏನಾದರು ಇದ್ದರೆ ಕೊಡಿ ಎಂದು ಕೇಳುತ್ತಾರೆ ಆದರೆ ಆ ಸಮಯದಲ್ಲಿ ಆಕೆಯ ಬಳಿ ಭಿಕ್ಷೆ ಕೊಡುವುದಕ್ಕಾಗಿ ಏನೂ ಇರುವುದಿಲ್ಲ ಹಾಗ ಆ ಮಹಿಳೆ ಹೀಗೆ ಹೇಳುತ್ತಾಳೆ ನಮ್ಮ ಬಳಿ ಮನೆಯಲ್ಲಿ ತಿನ್ನಲು ಏನು ಇಲ್ಲ ನಾವು ಮೂರುದಿನದಿಂದ ಉಪವಾಸವಿದ್ದೇವೆ ಎಂದು ತನ್ನ ಎಲ್ಲ ಕಷ್ಟಗಳನ್ನು ಪುಟ್ಟ ಬಾಲಕನದ ಶಂಕರಾಚಾರ್ಯರ ಬಳಿ ಹೇಳಿ ಕೊಳ್ಳುತ್ತಾಳೆ . ಗಂಡನ ಅರೋಗ್ಯ ಸರಿಯಿಲ್ಲ ದುಡಿಯುವ ಶಕ್ತಿಯು ಇಲ್ಲ ಎಂದು ದುಕ್ಕಿತಳಾಗುತ್ತಾಳೆ, ಆದರೂ ಆ ಬಾಲಕನನ್ನು ಹಾಗೆ ಕಳಿಸ ಬಾರದೆಂದು ಮನೆಯೆಲ್ಲಾ ಹುಡುಕಿ ಒಂದು ಒಣಗಿದ ನಲ್ಲಿ ಕಾಯಿಯನ್ನು ಸಂಕೋಚಪಡುತ ದಾನವಾಗಿ ನೀಡಿದಳು ,ಹಾಗ ಶಂಕರಾಚಾರ್ಯರಿಗೆ ಆಕೆ ನೀಡಿದ ಭಿಕ್ಷೆ ಸಂತೋಷವನ್ನು ಉಂಟು ಮಾಡಿತು ಆದರೆ ಆಕೆಯ ಸ್ಥಿತಿ ಕಂಡು ದುಕ್ಕಿತರಾಗಿ ಇವರನ್ನು ಕಷ್ಟಗಳಿಂದ ಹೇಗಾದರೂ ಪಾರುಮಾಡಬೇಕೆಂದು ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸುತ್ತರೆ ನಂತರ ಮಹಾಲಕ್ಷ್ಮಿದೇವಿಯು ಪ್ರಸನ್ನಳಾಗಿ ಶಂಕರಾಚಾರ್ಯರಿಗೆ ಯಾವ ವರ ಬೇಕೆಂದು ಕೇಳಿದರು ,ಆಗ ಶಂಕರ ಚಾರ್ಯರು ನನಗೇನು ಬೇಡ ತಾಯಿ ಈ ಬಡ ಮಹಿಳೆಗೆ ಸಂಪತ್ತನ್ನು ಪ್ರಸಾದಿಸು ಅವಳಿಗೆ ಕಷ್ಟಗಳಿಂದ ಮುಕ್ತಿನೀಡಿ ತಾಯಿ ಎಂದರು. ಲಕ್ಷ್ಮಿ ದೇವಿಯು ಈಕೆ ಹೋದ ಜನ್ಮದಲ್ಲಿ ಒಂದು ಒಳ್ಳೆಯ ಕೆಲಸವನ್ನು ಸಹ ಮಾಡಿಲ್ಲ ಹಾಗಾಗಿ ಆಕೆಗೆ ಪುಣ್ಯದ ಕೊರತೆಯಿಂದಾಗಿ ಸಂಪತ್ತು ದೊರೆಯುವುದಿಲ್ಲ ಎಂದರು. ಆದರೆ ಶಂಕರಾಚಾರ್ಯರು ಈಗ ಆಕೆ ಇರಿಸಿಕೊಂಡಿದ್ದ ಒಂದೇ ಒಂದು ನೆಲ್ಲಿ ಕಾಯಿಯನ್ನು ನನಗಾಗಿ ದಾನ ಮಾಡಿದ್ದಾಳೆ ತಾಯಿ ಒಂದು ಪುಣ್ಯದ ಕೆಲಸ ಮಾಡಿದಳೆ ನೀವು ಆಕೆಯ ಈ ಒಳ್ಳೆಯ ಕೆಲಸವನ್ನು ನೋಡಿ ಆಕೆಗೆ ಸಂಪತ್ತನ್ನು ಕರುಣಿಸಿ ಎಂದು ಬೇಡಿದರು.
ಶಂಕರಾಚಾರ್ಯರ ವಾದಕ್ಕೆ ಮೆಚ್ಚಿದ ಲಕ್ಷ್ಮಿದೇವಿಯು ಆ ಬಡ ಮಹಿಳೆಗೆ ನೆಲ್ಲಿಕಾಯಿಯ ಮಳೆಯನ್ನೇ ಸುರಿಸುತ್ತಾಳೆ ಅದೇ ಕನಕದಾರ ಮಳೆ ನಂತರ ಆ ಮಹಿಳೆಯ ಗಂಡನ ಅರೋಗ್ಯ ಸರಿಹೋಗಿ ಐಶ್ವರ್ಯ ಪ್ರಾಪ್ತಿ ಯಾಗುತ್ತದೆ ಈ ಸುದ್ದಿ ಎಲ್ಲರಿಗೂ ತಿಳಿದು ಶ್ರೀ ಕನಕ ದಾಸರ ಮಹತ್ವ ಎಲ್ಲೆಡೆ ಹರಡುತ್ತದೆ ಈ ಕನಕಧಾರಾ ಸ್ತೋತ್ರವನ್ನು ಗೊತ್ತಿಲ್ಲದೆ ಪಠಿಸುವುದರಿಂದಲು ಸಹ ಸಂಪತ್ತನ್ನು ತಮ್ಮದಾಗಿಸಿಕೊಳ್ಳಬಹುದು ಎಂಬ ನಂಬಿಕೆ ಆಸ್ತಿಕರಲ್ಲಿದೆ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನದಿ ಕಾರ್ಯಗಳ್ನನು ಮುಗಿಸಿ ಲಕ್ಷ್ಮಿ ಮಾತೆಯನ್ನು ಧ್ಯಾನಿಸಿ ಶ್ರೀ ಕನಕಧಾರಾ ಸ್ತೋತ್ರವನ್ನು ಪಠಿಸಿದರೆ ಖಂಡಿತ ಫಲಿತಾಂಶವನ್ನು ನೋಡುತ್ತೀರಿ.