Spiritual story
ನಮ್ಮ ಹಿಂದು ಧರ್ಮದಲ್ಲಿ ಹಲವಾರು ಅದ್ಭುತ ಆಯುಧಗಳ ಕುರಿತು ಉಲ್ಲೇಖವಿರುವುದನ್ನು ನಾವು ಕಾಣಬಹುದು ಅವುಗಳಲ್ಲಿ ಪ್ರಮುಖವಾದದ್ದು ಇಂದ್ರನ ವಜ್ರಾಯುಧ, ಶಿವನ ತ್ರಿಶೂಲ, ಹಾಗೂ ವಿಷ್ಣುವಿನ ಸುದರ್ಶನ ಚಕ್ರ ಸುದರ್ಶನಚಕ್ರ ಎಂದರೆ ಎಲ್ಲರಿಗು ಮೊದಲು ನೆನಪಿಗೆ ಬರೋದು ಮಹಾವಿಷ್ಣುವಿನ ಕೈಯಲ್ಲಿ ತಿರುಗುತ್ತಿರುವ ಚಕ್ರ ,ಈ ಚಕ್ರವು ಬಹಳ ಶಕ್ತಿ ಸಾಮರ್ಥ್ಯಗಳನ್ನು ಹೊಂದಿದೆ.ಎ೦ತಹ ವಿನಾಶವನ್ನಾದರೂ ಎದುರಿಸುವ ಶಕ್ತಿ ಈ ಸುದರ್ಶನಚಕ್ರಕ್ಕಿದೆ. “ಶ್ರೀ ಸುದರ್ಶನ ಚಕ್ರದ ಮುಖ್ಯ ಉದ್ಧೇಶ “ದುಷ್ಟ ಶಿಕ್ಷಣೆ, ಶಿಷ್ಠ ರಕ್ಷಣೆ” ಅಧರ್ಮಿಗಳನ್ನು ನಾಶಮಾಡುವುದಾಗಿದೆ, ಈ ಪವಿತ್ರ ಚಕ್ರವು ನಿರಂತರ ಚಲನೆಯಲ್ಲಿರುತ್ತದೆ, ವಿಷ್ಣು ತನ್ನ ಎಲ್ಲಾ ಅವತಾರಗಳಲ್ಲಿ ಸುದರ್ಶನ ಚಕ್ರವನ್ನು ತನ್ನ ಬಲ ತೋರು ಬೆರಳಿನಲ್ಲಿ ಹಿಡಿದುಕೊಂಡಿರುತ್ತಾನೆ ಸುದರ್ಶನ ಚಕ್ರಕ್ಕೆ ಪ್ರತಿಸ್ಪರ್ಧಿಯಾಗುವ ಯಾವುದೇ ಆಯುಧವಿದ್ದರೆ ಅದು ಶಿವನ ತ್ರಿಶೂಲ ಮಾತ್ರ, ಈ ಚಕ್ರವನ್ನು ವಿಷ್ಣುವಿನ ಸಮವಾಗಿ ಪೂಜಿಸಲಾಗುತ್ತದೆ.
ಮಹಾವಿಷ್ಣುವು ತನ್ನ ಬಲಗೈಯಲ್ಲಿ ಸುದರ್ಶನ ಚಕ್ರ ಇತರ ಮೂರು ಕೈಗಳಿಂದ ಶಂಖ, ಗದೆ ಮತ್ತು ಪದ್ಮವನ್ನು ಧರಿಸಿರುತ್ತಾರೆ ಪುರಾಣಗಳ ಪ್ರಕಾರ ವಿಷ್ಣುವು ಸುದರ್ಶನ ಚಕ್ರದಿಂದ ಅನೇಕ ರಾಕ್ಷಸರನ್ನು ಸಂಹರಿಸಿದರು ಎಂದು ಹೇಳಲಾಗಿದೆ ,ಸುದರ್ಶನ ಚಕ್ರವು ವಿಷ್ಣುವಿನಿಂದ ಬಳಸಲ್ಪಡುವ ೧೦೮ ದಂತುರೀಕೃತ ಅಂಚುಗಳಿರುವ ಒಂದು ಆಯುಧವಾಗಿದೆ ಋಗ್ವೇದ,ಯಜುರ್ವೇದ ಮತ್ತು ಪುರಾಣಗಳ ಪ್ರಾಚೀನ ಹಿಂದೂ ವೈದಿಕ ಗ್ರಂಥಗಳಲ್ಲಿ ಸುದರ್ಶನ ಚಕ್ರದ ಉಲ್ಲೇಖವನ್ನ ಕಾಣಬಹುದು.ಈ ಚಕ್ರವು ಮನಸ್ಸು ಮತ್ತು ಆಲೋಚನೆಯ ಶಕ್ತಿಯನ್ನು ಹೊಂದಿದೆ ,ಈ ಚಕ್ರವು ಶತ್ರುಗಳ ಹಿಂದೆ ಹೋಗಿ ಅವರನ್ನು ಬೆನ್ನಟ್ಟಿ ಸಂಹಾರ ಮಾಡುತ್ತದೆ ,ತನ್ನ ಕಾರ್ಯವನ್ನು ಪೂರ್ಣಗೊಳಿಸದೆ ಹಿಂತಿರುಗಿ ಬರುವುದಿಲ್ಲ, ಅದರ ಕೋಪದಿಂದ ತಪ್ಪಿಸಿಕೊಳ್ಳಲು ಯಾವುದೇ ಮಾರ್ಗವಿಲ್ಲ, ಚಕ್ರಕ್ಕೆ ಶರಣಾಗುವುದು ಒಂದೇ ಮಾರ್ಗವಾಗಿದೆ.
ಅಷ್ಟಕ್ಕೂ ಸುದರ್ಶನ ಚಕ್ರ ಜನ್ಮ ತಳಿದ್ದಾದರೂ ಹೇಗೆ ಎಂಬುದು ನಿಮಗೆ ಗೊತ್ತೆ…? ಬನ್ನಿ ನೋಡ್ಕೊಂಡು ಬರೋಣ ಈ ಬಗ್ಗೆ ನಮಗೆ ಪುರಾಣಗಲ್ಲಿ ೨ಕಥೆಗಳು ಕಂಡು ಬರುತ್ತದೆ .
ಒಮ್ಮೆ ರಾಕ್ಷಸರು ಸ್ವರ್ಗವನ್ನೆಲ ಆಕ್ರಮಿಸಿಕೊಳ್ಳುತ್ತಾರೆ ಹಾಗ ದೇವತೆಗಳೆಲ್ಲ ವಿಷ್ಣುವಿನ ಬಳಿ ಹೋಗಿ ರಾಕ್ಷಸರಿಂದ ತಮ್ಮನ್ನು ರಕ್ಷಿಸುವಂತೆ ವಿಷ್ಣುವನ್ನು ಪ್ರಾರ್ಥಿಸುತ್ತಾರೆ ,ಆದರೆ ಆ ಸಮಯದಲ್ಲಿ ವಿಷ್ಣುವಿನ ಬಳಿ ರಾಕ್ಷಸರನ್ನು ಸೋಲಿಸುವಂಥಹ ಯಾವ ಆಯುಧವು ಇರಲಿಲ್ಲ ಆಗ ಮಹಾ ವಿಷ್ಣುವು ಆಯುದಕ್ಕಾಗಿ ಕೈಲಾಸಕ್ಕೆ ಬಂದು ಶಿವನನ್ನು ಪೂಜಿಸಲು ಪ್ರರಂಭಿಸುತ್ತಾರೆ ,ಶಿವನ ಪೂಜೆಗೆ ಅಗತ್ಯವಿದ್ದ ಸಾಮಗ್ರಿಗಳೊಂದಿಗೆ ಸಾವಿರ ಕಮಲದ ಹೂಗಳನ್ನು ತೆಗೆದುಕೊಂಡು ಶಿವನನ್ನು ಪೂಜಿಸಿಸಲು ಪ್ರಾರಂಭಿಸುತ್ತಾರೆ ,ಪ್ರಾರ್ಥಿಸುವ ಸಮಯದಲ್ಲಿ ಶಿವನು ಒಂದು ಕಮಲದ ಹೂವನ್ನು ವಿಷ್ಣುವಿನಿಂದ ಮರೆಮಾಚುತ್ತಾರೆ. ಪೂಜೆಯಲ್ಲಿ ಲೀನರಾದ ವಿಷ್ಣುವಿಗೆ ಒಂದು ಕಮಲದ ಹೂ ಮರೆಯದ ವಿಷಯ ತಿಳಿಯುವುದಿಲ್ಲ, ಪೂಜೆಯ ಕೊನೆಯಲ್ಲಿ ಕಮಲದ ಹೊ ಸಿಗದ ಕಾರಣ ಪೂಜೆಗೆ ಹೂವಿನ ಬದಲಾಗಿ ವಿಷ್ಣುವು ಅವರ ಕಣ್ಣನ್ನು ಕಿತ್ತು ಕೊನೆಯ ಕಮಲದ ಹೂವಾಗಿ ಅರ್ಪಿಸಿದರು ಎಂಬ ಉಲ್ಲೇಖವಿದೆ . ಆದಕಾರಣ ವಿಷ್ಣುವಿಗೆ ‘ಪದ್ಮಾಕ್ಷ’ ಎಂಬ ಹೆಸರು ಬಂತು. ಆಗ ಶಿವನು ವಿಷ್ಣುವಿನ ಭಕ್ತಿಗೆ ಮೆಚ್ಚಿ ನೀವು ಈ ಪೂಜೆ ಮಾಡುತ್ತಿರುವ ಉದ್ದೇಶವೇನು ಎಂದು ಕೆದರು, ಹಾಗ ವಿಷ್ಣು ರಾಕ್ಷಸರನ್ನು ಸಂಹಾರ ಮಾಡಲು ಆಯುಧವನ್ನು ಕೇಳಿದನು ಆಗ ಶಿವನು ತಾನೇ ತಯಾರಿಸಿದ ಸುದರ್ಶನ ಚಕ್ರವನ್ನು ವಿಷ್ಣುವಿಗೆ ನೀಡಿದರು ಎನ್ನಲಾಗಿದೆ.ವಿಷ್ಣುವು ತನ್ನ ಎಲ್ಲಾ ಅವತಾರಗಳಲ್ಲು ಈ ಚಕ್ರದ ಸಹಾಯದಿಂದಲೇ ರಾಕ್ಷಸರ ದೌರ್ಜನ್ಯದಿಂದ ಕಾಪಾಡಿದನು ಎಂದು ಹೇಳಲಾಗುತ್ತದೆ. ಅಲ್ಲದೆ ಸತಿದೇವಿಯು ತನ್ನ ಪ್ರಾಣವನ್ನು ಕಳೆದು ಕೊಂಡಾಗ ಶಿವನು ಸತಿದೇವಿಯನ್ನು ದುಖದಿಂದ ಹೊತ್ತು ಹೋಗುತ್ತಿರುವಾಗ ಶಿವನನ್ನು ದುಖ್ಖದಿಂದ ಹೊರತರುವ ಸಲುವಾಗಿ ಸತಿದೇವಿಯ ದೇಹವನ್ನು ಸುದರ್ಶನ ಚಕ್ರದಿಂದ ಚೂರು ಮಾಡಿದರು.ಈ ಸತಿದೇವಿಯ ದೇಹದ ಭಾಗಗಳು ಭೂಲೋಕದ ಮೇಲೆ ಬಿದ್ದವು ಅವು ಇಂದು ಶಕ್ತಿಪೀಠವಾಗಿ ಪ್ರಸಿದ್ಧಿಯನ್ನು ಪಡೆದಿದೆ ಎನ್ನಲಾಗಿದೆ .
ಇನೊಂದು ಕಥೆಯ ಪ್ರಕಾರ :ಸೂರ್ಯನ ಜೊತೆ ವಿಶ್ವಕರ್ಮನ ಮಗಳದ ಸಂಜನಾಳ ಮದುವೆ ಮಾಡುವುದು ಇಂದ್ರನ ಆಸ್ಥಾನದಲ್ಲಿ ನಿಶ್ಚಯವಾಗಿರುತ್ತದೆ. ಒಂದು ದಿನ ತಂದೆಯ ಅಪ್ಪಣೆ ಪಡೆದು, ಸೂರ್ಯನನ್ನು ಭೇಟಿಯಗಲು ಸಂಜನಾ ಹೋಗುತ್ತಾಳೆ ಆ ಸಂದರ್ಭದಲ್ಲಿ ಅವಳಿಗೆ ಸೂರ್ಯನ ಶಾಖವನ್ನು ಎದುರಿಸಲು ಆಗುವುದಿಲ್ಲ ಅವಳು ಸೂರ್ಯನನ್ನು ಭೇಟಿ ಆಗದೆ ಮರಳಿ ಬಂದು ತಂದೆಗೆ ವಿಷಯ ತಿಳಿಸುತ್ತಾಳೆ . ವಿಶ್ವಕರ್ಮನು ಚಿಂತಾಕ್ರಾಂತನಾಗಿ, ಸೂರ್ಯನ ಪ್ರಭಾವಲಯವನ್ನು ಸರಿಪಡಿಸಲು ಮುಂದಾಗಿ ಇಂದ್ರನ ಆಸ್ತಾನಕ್ಕೆ ಹೋಗಿ ಇಂದ್ರನ ಒಪ್ಪಿಗೆ ಪಡೆದು ಸೂರ್ಯನು ಸುತ್ತುವರೆದ ಪ್ರಭಾವಲಯವನ್ನು ಸುತ್ತಳತೆಯ ಮೂಲಕ ಕತ್ತರಿಸುತ್ತಾನೆ ,ಹೀಗೆ ಮಗಳ ಅನುಕೂಲಕ್ಕೆ ತಕ್ಕಹಾಗೆ ನಿರ್ಮಿಸಿ ಕೊಡುತ್ತಾನೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ .ವಿಶ್ವಕರ್ಮನು ಕತ್ತರಿಸಿದ್ದ ಆ ಚೂರುಗಳು ಮೂರು ವಸ್ತುಗಳನ್ನಾಗಿ ತಯಾರಿಸುತ್ತಾನೆ. ಅದೇ ಪುಷ್ಪಕ ವಿಮಾನ, ತ್ರಿಶೂಲ ,ಸುದರ್ಶನ ಚಕ್ರ ಎನ್ನಲಾಗಿದೆ.