Dasara News:
ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ 29 ರಂದು ನಡೆಯುವ ಕಾರ್ಯಕ್ರಮದ ವಿವರ ಇಂತಿದೆ.
ಸೆಪ್ಟೆಂಬರ್ 29 ರಂದು ಬೆಳಿಗ್ಗೆ 6 ಗಂಟೆಗೆ ಕರಿಘಟ್ಟ ದೇವಸ್ಥಾನದ ಪಾದದಿಂದ ದೇವಸ್ಥಾನದ ಮೇಲ್ಭಾಗದವರಿಗೆ ಚಾರಣ ನಡೆಯಲಿದೆ.
ಬೆಳಿಗ್ಗೆ 10 ಗಂಟೆಗೆ ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣದಲ್ಲಿ ಕಬ್ಬಡಿ, ಖೋ ಖೋ ವಾಲಿಬಾಲ್ ಸ್ಪರ್ಧೆಗಳು ನಡೆಯಲಿದೆ.
ಬೆಳಿಗ್ಗೆ 9 ರಿಂದ 10 ರವರೆಗೆ ಶ್ರೀರಂಗ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಾದ ಹೆಚ್. ಹೆಚ್. ಮಂಜುನಾಥ್, ಶ್ರೀ.ಶ್ರೀ ಜಗದ್ಗುರು ರೇವಣ್ಣ ಸಿದ್ದೇಶ್ವರ ರವರಿಂದ ತತ್ವಪದ,ಜಾನಪದ ಗೀತೆ, ಭಾವಗೀತೆ, ದಾಸರ ಪದಗಳು, ಮಂಡ್ಯದ ಸಂತೆ ಕಸಲಗೆರೆಯಿಂದ ಬಸವರಾಜು, ಶಿವಗಂಗಾ ಸಾಂಸ್ಕøತಿಕ ಯುವಕರ ಸಂಘದ ವತಿಯಿಂದ ಜಾನಪದ ಗೀತೆ ಹಾಗೂ ಸುಗಮ ಸಂಗೀತ, ಶ್ರೀರಂಗಪಟ್ಟಣ ರಂಗನಾಥನಗರದ ಎಸ್.ಜೆ ನಂದನ್ ರವರಿಂದ ನಾದಸ್ವರ, ನಂಜನ ಗೂಡು ನಟರಾಜ ನಾಟ್ಯ ಶಾಲೆಯ ರಮ್ಯ ಎಸ್ ರಾಘವೇಂದ್ರ ರವರಿಂದ ಭಾರತ ನಾಟ್ಯ, ಹೆಮ್ಮಿಗೆಯ ಹೆಚ್. ಎಂ ಶಿವಮಹದೇವರವರಿಂದ ಜಾನಪದ ಗೀತೆ, ಭಕ್ತಿ ಗೀತೆ, ಸುಗಮ ಸಂಗೀತ, ತುಮಕೂರು ಸುಷ್ಮಾ ಪಿ ರವರಿಂದ ಭರತ ನಾಟ್ಯ ಕಾರ್ಯಕ್ರಮ ನಡೆಯಲಿದೆ.
ರೈತ ದಸರಾ:
ಬೆಳಿಗ್ಗೆ 10 ಗಂಟೆಯಿಂದ 3 ಗಂಟೆಯವರೆಗೆ ಶ್ರೀರಂಗ ವೇದಿಕೆಯಲ್ಲಿ ರೈತ ದಸರಾವ ನಡೆಯಲಿದೆ. ಕೃಷಿ ಇಲಾಖೆ, ರೇಷ್ಮೆ ಇಲಾಖೆ, ಮೀನುಗಾರಿಕೆ ಇಲಾಖೆ, ತೋಟಗಾರಿಕೆ ಇಲಾಖೆವತಿಯಿಂದ ಮಂಡ್ಯ ವಿ.ಸಿ.ಫಾರಂ, ವಲಯ ಕೃಷಿ ಸಂಶೋಧನಾ ಕೇಂದ್ರ ಪ್ರಾಧ್ಯಾಪಕರು ಡಾ.ಕೇಶವಯ್ಯ ಮತ್ತು ಆಹಾರ ಸುರಕ್ಷತೆ ಗುಣಮಟ್ಟ ಪ್ರಧಿಕಾರ ಜಿಲ್ಲಾ ಅಂಕಿತ ಅಧಿಕಾರಿ ಡಾ.ಬೆಟ್ಟ ಸ್ವಾಮಿ ರವರುಗಳಿಂದ ಕಬ್ಬು ಕೃಷಿಯಲ್ಲಿ ಆಧುನಿಕ ತಂತ್ರ್ರ ಜ್ಞಾನಗಳ ಅಳವಡಿಕೆ, “ಕಬ್ಬಿನ ಸುಸ್ಥಿರ ಬೇಸಾಯ ಪದ್ಧತಿ”(”(SSI-Sustainable Sugarcane Initiative) ಸಾವಯವ, ರಾಸಯನಿಕ ಮುಕ್ತ ಗುಣಮಟ್ಟದ ಬೆಲ್ಲ, ತಯಾರಿಕೆ ಸಂಬಂಧ ಉಪನ್ಯಾಸ ನಡೆಯಲಿದೆ.
ನೆಲಮನೆ ಕೆ.ಶೆಟ್ಟಹಳ್ಳಿ ಹೋಬಳಿಯ ಗಾಣದ ಮಾಲೀಕರಾದ ಮಧು , ವಿಕಸನ ಸಂಸ್ಥೆಯ ಮಹೇಶ್‍ಚಂದ್ರಗುರು, ಮಂಡ್ಯ ಬೆಲ್ಲದ ಗಾಣದ ಮಾಲೀಕರ ಅಸೋಷಿಯೇಷನ್ ಅಧ್ಯಕ್ಷ ಸೋಮಶಂಕರೇಗೌಡ, ಮಂಡ್ಯ ತಾಲ್ಲೂಕು ಕಾರಸವಾಡಿ ಬೆಲ್ಲ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಮಹದೇವು ಅವರುಗಳು ಬೆಲ್ಲ ತಯಾರಿಕೆ ಕುರಿತು ಚಿಂತನೆ ಮತ್ತು ಚರ್ಚೆ ನಡೆಸಲಿದ್ದಾರೆ.ತಾಲ್ಲೂಕಿನ 07 ಪ್ರಗತಿ ಪರ ರೈತರಿಗೆ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರಧಾನ, ಆತ್ಮ ಯೋಜನೆಯಡಿ 2021-22 ನೇ ಸಾಲಿನ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿತರಣೆ ಮತ್ತು ಸನ್ಮಾನ ನಡೆಯಲಿದೆ.ಮೈಸೂರು ಇಲವಾಲ, ತೋಟಗಾರಿಕಾ ಕಾಲೇಜಿನ, ಪ್ರೊ. ಸಿದ್ದಪ್ಪ ಅವರಿಂದ ತೆಂಗು ಆಧಾರಿತ ತೋಟಗಾರಿಕೆ ಬೆಳೆ ಪದ್ದತಿಯ ಬಗ್ಗೆ ಉಪನ್ಯಾಸ ನೀಡದ್ದಾರೆ.
ಮೈಸೂರು ಕೇಂದ್ರೀಯ ರೇಷ್ಮೆ ಮಂಡಳಿಯ ವಿಜ್ಞಾನಿ ’ ಡಾ.ಕೆ.ಬಿ ಚಂದ್ರಶೇಖರ್ ಅವರು ರೈತರ ಆದಾಯ ದ್ವಿಗುಣಗೊಳಿಸಲು ಬೈವೋಲ್ಟೈನ್(ದ್ವಿ-ತಳಿ) ರೇಷ್ಮೆ ಕೃಷಿಯಲ್ಲಿ ಆಧುನಿಕ ತಾಂತ್ರಿಕತೆಗಳು ಹಾಗೂ ಹಿಪ್ಪುನೇರಳೆ ಮರಗಡ್ಡಿ ಬೇಸಾಯ ಕ್ರಮಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಜಿಲ್ಲೆಯಲ್ಲಿನ ಪ್ರತಿ ತಾಲ್ಲೂಕಿನಿಂದ ಒಬ್ಬರಂತೆ 07 ಜನ ಅತ್ಯುತ್ತಮ ರೇಷ್ಮೆ ಬೆಳೆಗಾರರಿಗೆ ಸನ್ಮಾನ ಸಹಾಯ ಧನ ವಿತರಣೆ, ಜಿಲ್ಲೆಯಲ್ಲಿ ಹೊಸದಾಗಿ ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೆ ರೂ.3.00 ಲಕ್ಷ ಸಹಾಯಧನ ಪಡೆದಿರುವ ಒಟ್ಟು 10 ಜನ ರೇಷ್ಮೆ ಬೆಳೆಗಾರರರಿಗೆ ಮಂಜೂರಾತಿ ಪತ್ರ ವಿತರಣೆ.
ಪಶು ವೈದ್ಯಾಧಿಕಾರಿ ಡಾ.ತ್ರಿನೇಶ್ ರವರಿಂದ ಕುರಿ ಮತ್ತು ಆಡು ಸಾಕಾಣಿಕೆಯಲ್ಲಿ ಆಧುನಿಕ ತಂತ್ರಜ್ಞಾನಗಳು ಕುರಿತು ಉಪನ್ಯಾಸ ಮೀನು ತರಬೇತಿ ಕೇಂದ್ರದ ಉಪ ನಿರ್ದೇಶಕ ಮಹದೇವ್ ರವರು ಮೀನುಗಾರಿಕೆ ಸಮಗ್ರ ಮೀನು ಕೃಷಿ ಸಂಬಂಧ ಉಪನ್ಯಾಸ ನೀಡಲಿದ್ದಾರೆ.
ಮಧ್ಯಾಹ್ನ 3 ಗಂಟೆಯಿಂದ ಶ್ರೀರಂಗ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಂದ ಕನ್ನಡ ಮತ್ತು ಉರ್ದು ಖವಾಲಿ ಗಜಲ್, ಕರ್ನಾಟಕ ಶಾಸ್ತ್ರೀಯ ಸಂಗೀತ, ಕೀಬೋರ್ಡ್, ಕೊಳಲು ವಾದನ, ಜಾನಪದ ಗೀತೆ, ಜಾನಪದ ತತ್ವ, ಸ್ಯಾಕ್ಸೋಫೋನ್, ಭರತ ನಾಟ್ಯ, ನೃತ್ಯ ರೂಪಕ, ರಂಗ ಗೀತೆ, ಭರತ ನಾಟ್ಯ, ನೃತ್ಯ, ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಲಿವೆ.
ಯುವ ದಸರಾ:
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವತಿಯಿಂದ ನೃತ್ಯ ಪ್ರದರ್ಶನ ಮತ್ತು ಸಮೂಹ ಗಾನ, ಮಂಡ್ಯ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜು ವತಿಯಿಂದ ಸೆಮಿಕ್ಲಾಸಿಕಲ್ ನೃತ್ಯ ಮತ್ತು ಸಮೂಹ ಗಾನ, ಬಿ.ಜಿ ನಗರ ನಾಗಮಂಗಲ ಬಿ.ಜಿ.ಎಸ್. ಇನ್ಸ್‍ಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಕ್ಲಾಸಿಕಲ್ ನೃತ್ಯ ಮತ್ತ ಭರತ ನಾಟ್ಯ, ಶ್ರೀರಂಗಪಟ್ಟಣ ಮಹಾರಾಜ ತಾಂತ್ರಿಕ ವಿದ್ಯಾಲಯದ ವತಿಯಿಂದ ನೃತ್ಯ ರೂಪಕ, ಪಾಂಡವಪುರ ತಾಲ್ಲೂಕಿನ ಎಸ್.ಇ.ಟಿ ಪಾಲಿಟೆಕ್ನಿಕ್ ಮೇಲುಕೋಟೆ ರವರ ವತಿಯಿಂದ ಸಾಮೂಹಿಕ ಗಾಯನ, ನೃತ್ಯ ಮತ್ತು ಸ್ಕಿಟ್, ಪಾಂಡವಪುರ ತಾಲ್ಲೂಕಿನ ಬೆಳಕು ಸ್ಕೂಲ್ ಆಫ್ ಆಟ್ರ್ಸ್ ವತಿಯಿಂದ ಭರತ ನಾಟ್ಯ (ಶ್ರೀಮತಿ ಇಂಧೂಶ್ರೀ), ನಡೆಯಲಿದೆ.
ರಾತ್ರಿ 7 ಗಂಟೆಗೆ ಶಿವಮೊಗ್ಗ ದೀಪಿಕಾ ರವರಿಂದ ಸುಗಮ ಸಂಗೀತ ಹಾಗೂ ಅರ್ಜುನ್ ಜನ್ಯ ಮತ್ತು ತಂಡ ಹಾಗೂ ಮಂಗಲಿ ಮತ್ತು ತಂಡದಿಂದ ಕಾರ್ಯಕ್ರಮಗಳು ನಡೆಯಲಿವೆ.
ಐತಿಹಾಸಿಕ ಶ್ರೀರಂಗಪಟ್ಟಣ ಜಂಬೂ ಸವಾರಿಗೆ ಸುತ್ತೂರುಶ್ರೀಗಳು, ಸಚಿವ ಡಾ.ನಾರಾಯಣಗೌಡ, ಗೋಪಾಲಯ್ಯರಿಂದ ಚಾಲನೆ
ಶ್ರೀ ಬಂಡೆ ಮಹಾ೦ಕಾಳಿ ದೇವಾಲಯದಲ್ಲಿ ನವರಾತ್ರಿ ಹಬ್ಬದ ಎರಡನೇ ದಿನದ ವಿಶೇಷ :